spot_img
spot_img

BUS FIRE INCIDENT : ಹೊತ್ತಿ ಉರಿದ ಬಸ್, ತೆಲಂಗಾಣದ ಓರ್ವ ಸಾವು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Mathura (Uttar Pradesh) News:

ಉತ್ತರಪ್ರದೇಶದ ಮಥುರಾದಲ್ಲಿ ತೆಲಂಗಾಣದ 50ಕ್ಕೂ ಹೆಚ್ಚು ಜನರಿದ್ದ BUS​ವೊಂದು ಬೆಂಕಿಗಾಹುತಿಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.ತೆಲಂಗಾಣದ ಜನರಿಂದ ತುಂಬಿದ್ದ ಬಸ್​ವೊಂದು ಮಥುರಾದಲ್ಲಿ ಹೊತ್ತಿ ಉರಿದಿದೆ. ಸುದ್ದಿ ತಿಳಿದ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು.

Bus fire: ಈ ವೇಳೆ ಇದ್ದಕ್ಕಿದ್ದಂತೆ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಲೇ ಬೆಂಕಿ ಆವರಿಸಿ, BUS ಸಂಪೂರ್ಣ ಸುಟ್ಟು ಹೋಯಿತು. ಬೆಂಕಿ ಹೊತ್ತುಕೊಳ್ಳುತ್ತಿದ್ದಂತೆ BUS​ನಲ್ಲಿದ್ದ ಪ್ರಯಾಣಿಕರು ಕಿಟಕಿ ಗಾಜುಗಳನ್ನು ಒಡೆದು ಹೊರಬಂದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.

ಆದ್ರೆ ಬಸ್ಸಿನಲ್ಲಿದ್ದ ವೃದ್ಧ ಪ್ರಯಾಣಿಕರೊಬ್ಬರು ಹೊರಬರಲು ಸಾಧ್ಯವಾಗದೇ ಒಳಗಡೆ ಸಿಲುಕಿಕೊಂಡು ಸಾವನ್ನಪ್ಪಿದ್ದಾರೆ.ತೆಲಂಗಾಣದ 50 ಜನರಿದ್ದ ಖಾಸಗಿ BUS​ವೊಂದು ಉತ್ತರಪ್ರದೇಶದ ಪ್ರಯಾಗರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಆಗಮಿಸಿದ್ದರು.

ಮಂಗಳವಾರ ಪ್ರಯಾಗರಾಜ್‌ನಲ್ಲಿ ಮಹಾಕುಂಭ ಸ್ನಾನ ಮಾಡಿದ ನಂತರ ತೆಲಂಗಾಣದ 50 ಪ್ರಯಾಣಿಕರ ಗುಂಪು ಖಾಸಗಿ BUS ಹತ್ತಿ ಹೆದ್ದಾರಿಯಲ್ಲಿರುವ ಪ್ರವಾಸಿ ಸೌಲಭ್ಯ ಕೇಂದ್ರಕ್ಕೆ ತೆರಳುತ್ತಿದ್ದರು.ಬೆಂಕಿ ಅವಘಡದ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸ್ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಆದರೆ ಅಷ್ಟೊತ್ತಿಗಾಗಲೇ BUS ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು.

BUS​ನಲ್ಲಿ ಮೃತ ಪ್ರಯಾಣಿಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.ಸ್ಥಳಕ್ಕೆ ತಲುಪಿದ ಎಸ್‌ಎಸ್‌ಪಿ ಶೈಲೇಶ್ ಕುಮಾರ್ ಪಾಂಡೆ ಮಾತನಾಡಿ, ತೆಲಂಗಾಣದಿಂದ ಬಂದ ಪ್ರಯಾಣಿಕರಿಗೆ ಬೇರೆ ಬಸ್ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ಪ್ರಯಾಣಿಕರನ್ನು ಅವರ ಸ್ವಗ್ರಾಮಕ್ಕೆ ಕಳುಹಿಸಲಾಗುತ್ತಿದೆ.

ಅಲ್ಲದೆ ಎಲ್ಲಾ ಪ್ರಯಾಣಿಕರಿಗೆ ಆಹಾರ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ಹೇಳಿದರು.ಬಸ್ಸಿನಲ್ಲಿದ್ದ ಪ್ರಯಾಣಿಕರೊಬ್ಬರು ಸಿಗರೇಟ್ ಸೇದಿದ್ದರಿಂದ ಹಠಾತ್ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಇದಿರಿ : HOMEOWNERS NOTE TO THIEVES : ಸಂಕ್ರಾಂತಿಗೆ ಊರಿಗೆ ಹೋಗುವಾಗ ಜಾಣತನ ಮೆರೆದ ಮನೆ ಮಾಲೀಕ

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

VIVO V50 LAUNCHED IN INDIA:ಪ್ರೀಮಿಯಂ ಸ್ಲಿಮ್ ಡಿಸೈನ್ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ವಿವೋ, ಮಿಡಲ್ ರೇಂಜ್ನಲ್ಲಿ ಇದೇ ಟಾಪ್

Vivo V50 Launched in India News : ವಿವೋ ಇಂದು ತನ್ನ ಹೊಸ ಸ್ಮಾರ್ಟ್‌ಫೋನ್ VIVO V50 ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ....

TESLA BEGINS HIRING IN INDIA:ಮಸ್ಕ್ ಸಂಸ್ಥೆಯಲ್ಲಿ ಕೆಲಸ ಮಾಡಲು ಅದ್ಭುತ ಅವಕಾಶ

New Delhi News: ಇದರೊಂದಿಗೆ ಅಮೆರಿಕದ ದೈತ್ಯ ಎಲೆಕ್ಟ್ರಿಕಲ್​ ಕಾರು ಕಂಪನಿಯಲ್ಲಿ ಕೆಲಸ ಮಾಡಬೇಕೆಂಬ ಕನಸು ಹೊಂದಿರುವವರಿಗೆ ಟೆಸ್ಲಾ ಸುವರ್ಣಾವಕಾಶ ನೀಡಿದೆ. ಮುಂಬೈನಲ್ಲಿ ಹಲವು ಹುದ್ದೆಗಳ...

MAHAKUMBH : ಆ ಅಘೋರಿ ಭವಿಷ್ಯವೇ ನಿಜವಾಯ್ತಾ?

MAHAKUMBH : ಉತ್ತರ ಪ್ರದೇಶದ ದೇವ ಪ್ರಯಾಗದಲ್ಲಿ MAHAKUMBH ನಡೆಯುತ್ತಿದೆ. ಕಳೆದ 30 ದಿನಗಳ ಅಂತರದಲ್ಲಿ 7 ಅಗ್ನಿ ದುರಂತ ಎದುರಾಗಿವೆ. ಈ ಹಿಂದೆ ಹೀಗೆ...

DARSHAN : ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ ದರ್ಶನ್ ಭಾವುಕ

Darshan News: ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ DARSHAN ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 48ನೇ ವರ್ಷಕ್ಕೆ ಕಾಲಿಟ್ಟ ದಾಸನಿಗೆ ಸ್ಯಾಂಡಲ್​ವುಡ್​ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು...