spot_img
spot_img

2025 ರ ಜೂನ್ ವೇಳೆಗೆ ಅಯೋಧ್ಯೆಯ ರಾಮ ಮಂದಿರ ಸಂಕೀರ್ಣ ನಿರ್ಮಾಣ ಕಾರ್ಯ ಪೂರ್ಣ ̤̤.!

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

2025ರ ಫೆಬ್ರವರಿ ತಿಂಗಳ ಶಿಖರದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಸಂಕೀರ್ಣದಲ್ಲಿ ನಿರ್ಮಿಸಲಾಗುತ್ತಿರುವ ಸಪ್ತ ಮಂದಿರದ ವಿಗ್ರಹಗಳನ್ನು ಜೈಪುರದಲ್ಲಿ ನಿರ್ಮಿಸಲಾಗುತ್ತಿದೆ.

ರಾಮ ಮಂದಿರ ಸಂಕೀರ್ಣ ನಿರ್ಮಾಣ ಜೂನ್ 2025 ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.

ಇದನ್ನೂ ಓದಿ:ಅಥಣಿ : ಬಾವಿಗೆ ಬಿದ್ದ ಎಮ್ಮೆಯನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಸಮಿತಿಯ ಸಭೆ 3 ದಿನಗಳ ಕಾಲ ನಡೆಯುತ್ತಿದ್ದು ನಾಳೆಗೆ ಪೂರ್ಣಗೊಳ್ಳಲಿದೆ. ಸಭೆಯ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಮಿಶ್ರಾ, ದೇವಾಲಯದ ಸಂಕೀರ್ಣ ನಿರ್ಮಾಣವನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸುವುದಕ್ಕೆ ಉದ್ದೇಶಿಸಲಾಗಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ ದೇವಾಲಯದ ಶಿಖರದ ನಿರ್ಮಾಣವೇ 120 ದಿನಗಳ ಸಮಯ ತೆಗೆದುಕೊಳ್ಳಲಿದೆ ಎಂದು ತಿಳಿಸಿದ್ದಾರೆ.

2025ರ ಫೆಬ್ರವರಿ ವೇಳೆಗೆ ಶಿಖರದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಸಂಕೀರ್ಣದಲ್ಲಿ ನಿರ್ಮಿಸಲಾಗುತ್ತಿರುವ ಸಪ್ತ ಮಂದಿರದ ವಿಗ್ರಹಗಳನ್ನು ಜೈಪುರದಲ್ಲಿ ನಿರ್ಮಿಸಲಾಗುತ್ತಿದೆ. ಇಲ್ಲಿ ಋಷಿಮುನಿಗಳ ಮತ್ತು ಸಂತರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುವುದು. ಡಿಸೆಂಬರ್ 2024ರ ವೇಳೆಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ರಾಮಮಂದಿರ ಸಂಕೀರ್ಣದ ಕಾಮಗಾರಿಯು ಜೂನ್ 30, 2025 ರೊಳಗೆ ಪೂರ್ಣಗೊಳ್ಳಲಿದೆ ಎಂದು ಮಿಶ್ರಾ ಹೇಳಿದ್ದಾರೆ.

ಇದನ್ನೂ ಓದಿ: ಟೇಬಲ್ ಟೆನ್ನಿಸ್ ನಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ.

ಏತನ್ಮಧ್ಯೆ, ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಗುರುವಾರ ಮಾತನಾಡಿ, ನಿರ್ಮಾಣಕ್ಕೆ ಅಗತ್ಯವಾದ ಕಲ್ಲುಗಳ ಸರಬರಾಜುಗಳನ್ನು ಸಕಾಲದಲ್ಲಿ ಆವರಣದಲ್ಲಿ ಇಳಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಸಾಕಷ್ಟು ಸಂಖ್ಯೆಯ ಕಾರ್ಮಿಕರು ಯೋಜನೆಯಲ್ಲಿ ತೊಡಗಿರುವುದನ್ನು ಖಚಿತಪಡಿಸಿಕೊಳ್ಳಲು ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img

Related articles

ಎರಡನೇ ಟೆಸ್ಟ್‌ಗೆ ತಂಡ ಹೇಗೆ ಇರಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ ? ಸ್ಟಾರ್​ ಆಟಗಾರನಿಗೆ ಕೊಕ್​​̤!

ಬಾಂಗ್ಲಾದೇಶ ತಂಡ ಟೆಸ್ಟ್ ಮತ್ತು ಟಿ20 ಸರಣಿಗಾಗಿ ಭಾರತದ ಪ್ರವಾಸ ಕೈಗೊಂಡಿದೆ. ಈಗಾಗಲೇ ಟೀಮ್​ ಇಂಡಿಯಾ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ...

ತಿರುಪತಿ ವಿಚಾರ : ಡಿಸಿಎಂ ಪವನ್ ಕಲ್ಯಾಣ್‌ಗೆ ಕ್ಷಮೆ ಕೇಳಿದ ನಟ ಯಾರು ?

ತಿರುಪತಿ-ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಲಡ್ಡು ವಿಚಾರವಾಗಿ ಸಾಕಷ್ಟು ರೀಲ್ಸ್ ಗಳು ಮತ್ತು ಮೀಮ್ಸ್ ಗಳು ಹರಿದಾಡುತ್ತಿವೆ....

ನಿಮ್ಮ ಮನೆಯಲ್ಲಿರುವ ತುಪ್ಪ ಶುದ್ಧವಾಗಿದೆಯಾ ಕಲಬೆರಕೆವಾಗಿದೆಯಾ ? ಇಲ್ಲಿವೆ ಸರಳವಾದ ಉಪಾಯಗಳು.!

ತಿರುಪತಿ ಬಾಲಾಜಿಯ ಪ್ರಸಾದದಲ್ಲಿ ಕಲಬೆರಕೆ ಆಗಿದೆ ಎಂಬ ವಿಷಯ ತಿಳಿದಾಗಿನಿಂದ ತುಪ್ಪದ ವಿಚಾರದಲ್ಲಿ ಅನೇಕ ಸಂಶಯಗಳು ಮೂಡುತ್ತಿವೆ. ನಂದಿನಿ ತುಪ್ಪದ ಬಿಟ್ರೆ ಬೇರೆ ಯಾವ...

ಅಪ್ರಾಪ್ತ ಬಾಲಕಿಯರಿಗೆ ಮಾದರಿಯಾಗಿದ್ದಾಳೆ.! ತನ್ನ ಮದುವೆಯನ್ನೇ ನಿಲ್ಲಿಸಿದ ಬಾಲಕಿ!

ಬೀದರ್, ಕಲಬುರಗಿ: ಬಸವಕಲ್ಯಾಣ ತಾಲೂಕಿನ ಹಳ್ಳಿಯೊಂದರಲ್ಲಿ 9ನೇ ತರಗತಿ ಓದುತ್ತಿರುವ 14 ವರ್ಷದ ಈ ಬಾಲಕಿ ತನ್ನ ಮದುವೆಯನ್ನೇ ನಿಲ್ಲಿಸಿದ ಬಾಲಕಿ ದಿಟ್ಟ ಹೋರಾಟಗಾರ್ತಿ, ಇತರೆ...