spot_img
spot_img

C T RAVI CASE – ಕೆಲವು ಬಾರಿ ಸರ್ಕಾರಕ್ಕೆ ಮುಜುಗರ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Bangalore News:

“ಕೆಲವು ಬಾರಿ ಸರ್ಕಾರಕ್ಕೆ ‌ಮುಜುಗರ ಆಗುತ್ತದೆ” ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.”ಪೊಲೀಸರಿಗೆ ಅವರದ್ದೇ ಆದ ನಿಯಮವಿದೆ. ಎಲ್ಲದಕ್ಕೂ ನಮ್ಮನ್ನು ಕೇಳಬೇಕಿಲ್ಲ. ಉನ್ನತ ಅಧಿಕಾರಿಗಳು ಇರುತ್ತಾರೆ. ಅವರೇ ತೀರ್ಮಾನಿಸುತ್ತಾರೆ. ಅಂತಿಮವಾಗಿ ಸರ್ಕಾರಕ್ಕೆ ವರದಿ ಕೊಡ್ತಾರೆ.‌ ಕೆಲವು ಬಾರಿ ಸರ್ಕಾರಕ್ಕೆ ‌ಮುಜುಗರ ಆಗುತ್ತದೆ. ಕೆಲವೊಮ್ಮೆ ನಾವೇ ಸರಿ ಅಂತ ಹೇಳುತ್ತೇವೆ” ಎಂದರು.ಸದಾಶಿವನಗರ ನಿವಾಸದ ಸಮೀಪ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಪ್ರಕರಣದಲ್ಲಿ ಪೊಲೀಸರ ಕಾರ್ಯವೈಖರಿಯ ಕುರಿತು ಪ್ರತಿಕ್ರಿಯಿಸುತ್ತಾರೆ.

ಪರಿಷತ್​ನಲ್ಲಿ ಸಿ.ಟಿ.ರವಿ ಅಶ್ಲೀಲ ಪದ ಬಳಕೆ ವಿಚಾರದ ಕುರಿತು ಮಾತನಾಡುತ್ತಾ, “ಪರಿಶೀಲನೆ ಮಾಡಬಹುದು. ಮಾಧ್ಯಮದಲ್ಲಿ ಬಂದಿರುವ ಆಧಾರದ ಮೇಲೆ‌ ಪರಿಶೀಲನೆ ನಡೆಯುತ್ತಿದೆ. ಸಭಾಪತಿಯವರು ಪರಿಶೀಲನೆ ಮಾಡಿ ಎಂದು ನಮಗೆ ಹೇಳಿದ್ರೆ FSLಗೆ ಕಳಿಸಿ ಪರಿಶೀಲನೆ ‌ಮಾಡ್ತೇವೆ. ನಿಯಮಗಳ ಮೇಲೆಯೇ ಪೊಲೀಸರು ಕೆಲಸ ಮಾಡ್ತಾರೆ.‌ ಇದು ಒಳಗಡೆ ನಡೆದಿರುವ ಘಟನೆ, ಹೊರಗೆ ನಡೆದಿಲ್ಲ. ಮಾಧ್ಯಮಗಳು ರೆಕಾರ್ಡ್ ಮಾಡಿದ್ದಕ್ಕೆ ಹೊರಗಡೆ ಬಂದಿದೆ‌” ಎಂದು ಹೇಳಿದರು.

ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕೈದಿಯಿಂದಲೇ ಜೈಲಾಧಿಕಾರಿ ಹಣ ಸ್ವೀಕರಿಸಿರುವ ಆರೋಪದ ಕುರಿತು ಮಾತನಾಡಿ, “ನಾನು ಆಂತರಿಕವಾಗಿ ತನಿಖೆಗೆ ಆದೇಶಿಸಿದ್ದೇನೆ. 2022ರಲ್ಲಾದ ವಿಡಿಯೋ ತೆಗೆದು ಮೊನ್ನೆ ಹಾಕಿದ್ದಾರೆ. ಯಾರೋ ಇದನ್ನು ಬೇಕಂತಲೇ ಮಾಡುತ್ತಿದ್ದಾರೆ. ಇದನ್ನು ಅಧಿಕಾರಿಗಳೋ, ಹೊರಗಿನವರೋ ಮಾಡುತ್ತಿದ್ದಾರೆ‌. ಇಲಾಖೆಗೆ ಕೆಟ್ಟ ಹೆಸರು ತರಬೇಕು ಅಂತ ಮಾಡ್ತಿದ್ದಾರೆ. ಈಗ ನೀವು ತೋರಿಸಿರುವ ವಿಡಿಯೋ ಪರಿಶೀಲನೆ ಮಾಡುತ್ತಿದ್ದೇವೆ. ಆ ರೀತಿ ಇದ್ದರೆ ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳುತ್ತೇನೆ.

ಘಟನೆ ಯಾವುದೋ ಹಳೆಯದು ಎಂದಾಗ ಅದರ ಮೇಲೆ ಹೇಗೆ ಕ್ರಮ ತೆಗೆದುಕೊಳ್ಳುವುದು?” ಎಂದರು.‌ ಗೃಹ ಸಚಿವರ ಕಾರ್ಯವೈಖರಿ ಬಗ್ಗೆ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ ಟೀಕೆಗೆ, “ಗೃಹ ಸಚಿವರು ಇದ್ದಾರಾ? ಇಲ್ವಾ? ಅಂತ ಅವರೇ ತಿಳಿಸಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇದೆಯಾ, ಇಲ್ಲವಾ ಎಂಬುದು ಅವರಿಗೆ ಗೊತ್ತಿದೆ. ಯಾವ ರೀತಿಯಾಗಿ ಗೃಹ ಸಚಿವರಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಾರೆ” ಎಂದು ಪ್ರಶ್ನಿಸಿದರು.

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

EDUCATION SOCIETY : 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ‘ನೋ-ಡಿಟೆನ್ಷನ್ ನೀತಿ’ ರದ್ದುಗೊಳಿಸಿದ ಕೇಂದ್ರ

New Delhi News: 2019 ರ ಶಿಕ್ಷಣ ಹಕ್ಕು ಕಾಯಿದೆ(ಆರ್‌ಟಿಇ) ತಿದ್ದುಪಡಿಯ ನಂತರ, ಕನಿಷ್ಠ 16 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಈ...

J AND K AND LADAKH HIGH COURT – ಮಹಿಳಾ ವಕೀಲರು ಬುರ್ಖಾ ಧರಿಸಿ ವಾದ ಮಾಡುವಂತಿಲ್ಲ

Srinagar News: ಬುರ್ಖಾ ಧರಿಸಿ ವಾದ ಮಾಡುವಂತಿಲ್ಲ ಎಂದು ಜಮ್ಮು- ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ತಿಳಿಸಿದೆ. ಬಾರ್ ಕೌನ್ಸಿಲ್ ಆಫ್ ಇಂಡಿಯಾದ ವಸ್ತ್ರ ಸಂಹಿತೆ...

BENGALURU SECURITY – ಕ್ರಿಸ್ಮಸ್, ಹೊಸ ವರ್ಷಾಚರಣೆ ವೇಳೆ ಅಹಿತಕರ ಘಟನೆ ನಡೆದರೆ ಡಿಸಿಪಿಗಳೇ ಹೊಣೆ

Bangalore News: ಬೆಂಗಳೂರಿನ ಎಂ.ಜಿ.ರಸ್ತೆ, ಬಿಗ್ರೇಡ್ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್​​ನಲ್ಲಿ ಹೊಸ ವರ್ಷ ಆಚರಿಸಲು ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್...

ANCIENT WELL DISCOVERED – ಸಂಭಾಲ್ನಲ್ಲಿ ಮತ್ತೊಂದು ಪುರಾತನ ಬಾವಿ ಪತ್ತೆ

Sambhal (Uttar Pradesh) News: ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ನಡೆಯುತ್ತಿರುವ 'ರಹಸ್ಯಗಳ' ಉತ್ಖನನದಲ್ಲಿ ಮತ್ತೊಂದು ಪುರಾತನ ಬಾವಿ ಪತ್ತೆಯಾಗಿದೆ. ಇದು ಯಾತ್ರಾರ್ಥಿಗಳ ದಾಹ ತಣಿಸುತ್ತಿದ್ದ ತೀರ್ಥಗಂಗೆ...