New Delhi News:
ಓಲಾ ಮತ್ತು ಉಬರ್ಗೆ ಸಿಸಿಪಿಎ ನೋಟಿಸ್ ನೀಡಿದೆ. ಕಾರಣ ಏನು ಇಲ್ಲಿ ತಿಳಿಯಿರಿ ಗ್ರಾಹಕರು ಬಳಸುವ ಸ್ಮಾರ್ಟ್ ಫೋನ್ನ ಮಾಡೆಲ್ ಅನ್ನು ಆಧರಿಸಿ ವಿಭಿನ್ನ ದರ ವಿಧಿಸುತ್ತಿರುವ ಆರೋಪದ ಮೇಲೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಪ್ರಮುಖ CAB AGGREGATORS ಓಲಾ ಮತ್ತು ಉಬರ್ಗೆ ನೋಟಿಸ್ ನೀಡಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಗುರುವಾರ ಪ್ರಕಟಿಸಿದ್ದಾರೆ.ಒಂದು ನಿರ್ದಿಷ್ಟ ಪ್ರದೇಶಕ್ಕೆ ಹೋಗಲು ಕ್ಯಾಬ್ ಬುಕ್ ಮಾಡಿದಾಗ ಬೇರೆ ಬೇರೆ ಸ್ಮಾರ್ಟ್ಫೋನ್ಗಳಲ್ಲಿ ವಿಭಿನ್ನ ಶುಲ್ಕ ವಿಧಿಸುತ್ತಿರುವ ಬಗ್ಗೆ ಹಲವಾರು ಗ್ರಾಹಕರು ದೂರು ನೀಡಿದ ನಂತರ ಕ್ಯಾಬ್ ಅಗ್ರಿಗೇಟರ್ಗಳ ಈ ವಂಚನೆ ಬೆಳಕಿಗೆ ಬಂದಿದೆ.
ಕೆಲ ಮಾದರಿಯ ಫೋನ್ಗಳಲ್ಲಿ ಹೆಚ್ಚಿನ ಶುಲ್ಕ ತೋರಿಸಿದರೆ, ಇನ್ನು ಕೆಲ ಮಾದರಿಗಳಲ್ಲಿ ಕಡಿಮೆ ದರಗಳನ್ನು ತೋರಿಸಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಜೋಶಿ. “ಗ್ರಾಹಕರು ಬಳಸುವ ಮೊಬೈಲ್ ಫೋನ್ಗಳ (ಐಫೋನ್/ ಆಂಡ್ರಾಯ್ಡ್) ವಿವಿಧ ಮಾದರಿಗಳ ಆಧಾರದ ಮೇಲೆ ವಿಭಿನ್ನ ಪ್ರಯಾಣ ದರ ವಸೂಲಿ ಮಾಡುತ್ತಿರುವ ವಿಷಯದ ಹಿಂದಿನ ಅವಲೋಕನದ ಅನುಸರಣೆಯಾಗಿ, ಗ್ರಾಹಕ ವ್ಯವಹಾರಗಳ ಇಲಾಖೆ ಸಿಸಿಪಿಎ ಪ್ರಮುಖ CAB AGGREGATORSಗಳಾದ ಓಲಾ ಮತ್ತು ಉಬರ್ಗೆ ನೋಟಿಸ್ ನೀಡಿದೆ” ಎಂದು ಹೇಳಿದ್ದಾರೆ.
ಸದ್ಯ ಗ್ರಾಹಕರ ಕುಂದುಕೊರತೆ ಪರಿಹರಿಸಲು ಮತ್ತು CAB AGGREGATORSಗಳು ನ್ಯಾಯಯುತ ಶುಲ್ಕ ವಿಧಿಸುವುದನ್ನು ಖಚಿತಪಡಿಸಿಕೊಳ್ಳಲು ಸಿಸಿಪಿಎ ಓಲಾ ಮತ್ತು ಉಬರ್ಗೆ ನೋಟಿಸ್ ನೀಡಿದೆ. ಕಂಪನಿಗಳು ಈಗ ಬೆಲೆ ನಿಗದಿಯ ಕಾರ್ಯವಿಧಾನ ಮತ್ತು ಈ ಶುಲ್ಕ ವ್ಯತ್ಯಾಸಗಳ ಮೇಲೆ ಪ್ರಭಾವ ಬೀರುವ ಅಂಶಗಳ ಬಗ್ಗೆ ಸ್ಪಷ್ಟೀಕರಣಗಳನ್ನು ಒದಗಿಸಬೇಕಾಗಿದೆ.ಐಒಎಸ್ 18 ಅಥವಾ ನಂತರದ ಆವೃತ್ತಿಗಳಿಗೆ ಅಪ್ಡೇಟ್ ಮಾಡಿಕೊಂಡ ನಂತರ ಐಫೋನ್ನ ಕಾರ್ಯಕ್ಷಮತೆ ಹಾಳಾಗಿದೆ ಎಂದು ಗ್ರಾಹಕರು ದೂರಿದ್ದರು.
ಇಲಾಖೆಯು ಈ ಕುಂದುಕೊರತೆಗಳನ್ನು ಪರಿಶೀಲಿಸಿ, ಪ್ರತಿಕ್ರಿಯೆ ನೀಡುವಂತೆ ಆ್ಯಪಲ್ಗೆ ನೋಟಿಸ್ ನೀಡಿತ್ತು.ತಂತ್ರಜ್ಞಾನ ಕಂಪನಿಗಳನ್ನು ಒಳಗೊಂಡ ಗ್ರಾಹಕ ಸಂಬಂಧಿತ ವಿಷಯಗಳಲ್ಲಿ ಇಲಾಖೆ ಮಧ್ಯಪ್ರವೇಶಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ರಾಷ್ಟ್ರೀಯ ಗ್ರಾಹಕ ಸಹಾಯವಾಣಿಯಲ್ಲಿ ಸ್ವೀಕರಿಸಿದ ದೂರುಗಳಿಗೆ ಸಂಬಂಧಿಸಿದಂತೆ ಸಿಸಿಪಿಎ ಆಪಲ್ಗೆ ನೋಟಿಸ್ ನೀಡಿತ್ತು.
ಇದನ್ನು ಓದಿರಿ : RAHUL GANDHI CANCELS RALLY : ಎಎಪಿಗೆ ಸಹಾಯ ಮಾಡುವ ಉದ್ದೇಶವಿಲ್ಲ