spot_img
spot_img

CABINET MEETING AT MAHAKUMBH:ಪ್ರಯಾಗ್ರಾಜ್ನಲ್ಲೇ ಕ್ಯಾಬಿನೆಟ್ ಸಭೆ.

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Prayagraj News:

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಇಂದು MAHAKUMBHದಲ್ಲಿ ವಿಶೇಷ ಕ್ಯಾಬಿನೆಟ್​ ಸಭೆ ನಡೆಸಲಿದ್ದಾರೆ.ಉತ್ತರ ಪ್ರದೇಶ ಅಲ್ಪಸಂಖ್ಯಾತ ಕಲ್ಯಾಣ ಸಚಿವ ದಾನಿಶ್​ ಅಜಾದ್​ ಅನ್ಸಾರಿ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಉತ್ತರ ಪ್ರದೇಶ ಅಭಿವೃದ್ಧಿ ಹೊಸ ಮಟ್ಟ ತಲುಪಲಿದೆ ಎಂದರು.

ಈ ಕುರಿತು ಮಾಹಿತಿ ನೀಡಿರುವ ಉತ್ತರ ಪ್ರದೇಶ ಡಿಜಿಪಿ ಪ್ರಶಾಂತ್​ ಕುಮಾರ್​, ಇಂದು ಮಧ್ಯಾಹ್ನ ಕ್ಯಾಬಿನೆಟ್​ ಸಭೆ ನಡೆಯಲಿದ್ದು, ಇದಾದ ಬಳಿಕ ಸಿಎಂ ಯೋಗಿ ಆದಿತ್ಯನಾಥ್​ ಮತ್ತು ಇತರೆ ಸಚಿವರು MAHAKUMBHದಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ.

ಉತ್ತರಪ್ರದೇಶದ ಎಲ್ಲಾ 54 ಸಚಿವರನ್ನು ಸಚಿವ ಸಂಪುಟ ಸಭೆಗೆ ಆಹ್ವಾನಿಸಲಾಗಿದ್ದು, ಸಭೆಯಲ್ಲಿ ಹಲವು ಪ್ರಮುಖ ಪ್ರಸ್ತಾವ ಮತ್ತು ಯೋಜನೆಗೆ ಸಮ್ಮತಿ ದೊರೆಯುವ ನಿರೀಕ್ಷೆ ಇದೆ.ಮುಂದುವರೆದು ಮಾತನಾಡಿದ ಅವರು, ಇಂದು ಪ್ರಯಾಗ್​ರಾಜ್​ನಲ್ಲಿ ಸಚಿವ ಸಂಪುಟ ಸಭೆ ಇದೆ.

ಹೊಸ ಮಟ್ಟಕ್ಕೆ ನಾವು ಉತ್ತರ ಪ್ರದೇಶ ಅಭಿವೃದ್ಧಿಯನ್ನು ಕೊಂಡೊಯ್ಯಲಿದ್ದೇವೆ. ಉತ್ತರ ಪ್ರದೇಶ ಅಭಿವೃದ್ಧಿಗಾಗಿ, ಯುವಜನರಿಗೆ, ಮಹಿಳಾ ಸಬಲೀಕರಣ ಸೇರಿದಂತೆ ಅನೇಕ ವಿಚಾರದಲ್ಲಿ ಯೋಗಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ.

ಮುಖ್ಯಮಂತ್ರಿಗಳ ನಾಯಕತ್ವದಲ್ಲಿ ಉತ್ತರ ಪ್ರದೇಶವನ್ನು ಉತ್ತಮ್​ ಪ್ರದೇಶ ಆಗಿ ರೂಪಿಸುತ್ತೇವೆ ಎಂಬ ನಂಬಿಕೆ ಇದೆ ಎಂದು ಹೇಳಿದರು.ಸಿಎಂ ಯೋಗಿ ಸರ್ಕಾರ ಇದೇ ಮೊದಲ ಬಾರಿಗೆ ಸಂಗಮದಲ್ಲಿ ಸಂಪುಟ ಸಭೆ ನಡೆಸುತ್ತಿಲ್ಲ. 2019ರಲ್ಲಿ ಕೂಡ ಕುಂಭಮೇಳ ನಡೆದಾಗ ಎಲ್ಲಾ ಸಚಿವರು ಅಖಾಡ ಪರಿಷದ್​ ಅಧ್ಯಕ್ಷ ನರೇಂದ್ರ ಗಿರಿ ಮತ್ತು ಇತರೆ ಸಂತರೊಂದಿಗೆ ಪವಿತ್ರ ಸ್ನಾನ ನಡೆಸಿದ್ದರು.

(ಎಎನ್​ಐ)ಇದೊಂದು ಐತಿಹಾಸಿಕ ದಿನವಾಗಿದೆ. 500 ವರ್ಷಗಳ ಹೋರಾಟ ಮತ್ತು ತ್ಯಾಗದ ಬಳಿಕ ಇದೇ ದಿನ ಕಳೆದ ವರ್ಷ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಮಾಡಲಾಗಿತ್ತು. ಇಂದು ನಾವು ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾದ MAHAKUMBHದಲ್ಲಿ ಭಾಗಿಯಾಗುತ್ತಿದ್ದೇವೆ.

ಇಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಜನರ ಕಲ್ಯಾಣ ಕುರಿತು ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದು, ಇದಾದ ಬಳಿಕ ಸಂಜೆ ಎಲ್ಲಾ ಸಚಿವರು ಸಂಗಮದಲ್ಲಿ ಸ್ನಾನ ಮಾಡಲಿದ್ದೇವೆ ಎಂದರು.ಈ ಸಂಬಂಧ ಸಿದ್ಧತೆಗಳ ಪರಿಶೀಲನೆ ಮಾಡಲಾಗಿದ್ದು, ಇಲ್ಲಿನ ಪ್ರತಿಯೊಬ್ಬರಿಗೂ ಉತ್ತಮ ಸೌಕರ್ಯವನ್ನು ನೀಡಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.

 

ಇದ್ದನು ಓದಿರಿ :EX SOLDIER KILLS WIFE:ಪತ್ನಿ ಕೊಂದು ದೇಹ ತುಂಡು ತುಂಡಾಗಿ ಕತ್ತರಿಸಿ ಕುಕ್ಕರ್ನಲ್ಲಿ ಬೇಯಿಸಿದ ಪತಿ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

PRABHAS : ಕಣ್ಣಪ್ಪ ಚಿತ್ರದಲ್ಲಿ ‘ರುದ್ರ’ನಾಗಿ ಸೂಪರ್ ಸ್ಟಾರ್ ಪ್ರಭಾಸ್

Prabhas News : ಬಹುನಿರೀಕ್ಷಿತ ಕಣ್ಣಪ್ಪ ಚಿತ್ರದಿಂದ ರೆಬೆಲ್​ ಸ್ಟಾರ್​ PRABHAS ​ ಅವರ ಮೊದಲ ನೋಟ ಅನಾವರಣಗೊಂಡಿದೆ.'ಕಣ್ಣಪ್ಪ', ಭಾರತೀಯ ಚಿತ್ರರಂಗದ ಒಂದು ಮಹತ್ವಾಕಾಂಕ್ಷೆಯ ಚಿತ್ರವಾಗಿದ್ದು,...

UNION BUDGET SESSION : ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆ, ಸಂಜೆ ಪ್ರಧಾನಿ ಮೋದಿ ಉತ್ತರ

New Delhi News: UNION BUDGET SESSION ನಾಲ್ಕನೆಯ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ ಉತ್ತರ ನೀಡಲಿದ್ದಾರೆ....

PRAYAGRAJ MAHA KUMBH LIGHTING : ಗಮನ ಸೆಳೆಯುತ್ತಿದೆ ಮಹಾಕುಂಭದ ಲೈಟಿಂಗ್ ವ್ಯವಸ್ಥೆ

Lucknow, Uttar Pradesh News: PRAYAGRAJ MAHA KUMBH LIGHTING ವಿದ್ಯುತ್ ಇಲಾಖೆ ಕನಸಿನ ಲೋಕವನ್ನೇ ಸೃಷ್ಟಿಸಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇದು ಭಕ್ತರ...

TRANSGENDERS IN AKKA CAFE : ಮಂಗಳಮುಖಿಯರಿಂದ ‘ಅಕ್ಕ’ ಕೆಫೆ ನಿರ್ವಹಣೆ

Haveri News: ಹಾವೇರಿ ಜಿಲ್ಲಾ ಪಂಚಾಯತ್​ ದಿಟ್ಟ ನಿರ್ಧಾರಕ್ಕೆ ಮಂಗಳಮುಖಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಸುಮಾರು 10 ಜನ ಮಂಗಳಮುಖಿಯರು ನಿರ್ವಹಣೆ ಮಾಡಲಿರುವ TRANSGENDERS IN AKKA CAFEಗೆ...