Guwahati (Assom) News:
ASSAMನಲ್ಲಿ ಪ್ರವಾಸಿ ವೀಸಾದಲ್ಲೇ ನೆಲೆಸಿದ್ದ ಕೆನಡಾ ಪ್ರಜೆ ವಿರುದ್ಧ ಧಾರ್ಮಿಕ ಮತಾಂತರದ ಆರೋಪ ಕೂಡ ಕೇಳಿಬಂದಿದೆ. ಹಾಗೇ ಆತನ ಪ್ರವಾಸಿ ವೀಸಾದ ಅವಧಿ ಮುಗಿದ ಹಿನ್ನೆಲೆ ಆತನನ್ನು ASSAMನ ಜೊರ್ಹಟ್ ಜಿಲ್ಲೆಯೆಲ್ಲಿ ಬಂಧಿಸಿ, ಗಡಿಪಾರು ಮಾಡಲಾಗಿದೆ.
ಬ್ರಾಂಡೊನ್ ಜೊಯೆಲ್ ಡೆವಾಲ್ಟ್ ಬಂಧಿತ ಕೆನಡಾ ಪ್ರಜೆಯಾಗಿದ್ದು, ಗಡೀಪಾರು ಮಾಡಲಾಗಿದೆ. ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿದ್ದ 104 ಜನ ಭಾರತೀಯರನ್ನು ಬುಧವಾರ ಅಮೆರಿಕದ ಮಿಲಿಟರಿ ವಾಹನದಲ್ಲಿ ಅಮೃತ್ಸರ್ಗೆ ಕರೆ ತರಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಕೆನಡಾ ನಾಗರೀಕನನ್ನು ಆತನ ದೇಶಕ್ಕೆ ವಾಪಸ್ ಕಳುಹಿಸಲಾಗಿದೆ.
Visa Expiration:ಪೊಲೀಸ್ ಅಧಿಕಾರಿಗಳು ಹೇಳುವಂತೆ ಕೆನಡಾ ಪ್ರಜೆ ವೀಸಾ ಅವಧಿ ಜನವರಿ 17ಕ್ಕೇ ಮುಗಿದಿದೆ. ಆತ ವೀಸಾ ನವೀಕರಣಕ್ಕೆ ಆರ್ಜಿ ಸಲ್ಲಿಸಿದ್ದಾನೆ. ಆದರೆ, ಆತ ಮತಾಂತರ ಚಟುವಟಿಕೆಯಲ್ಲಿ ತೊಡಗಿರುವ ಕುರಿತು ದೂರು ಬಂದಿದೆ.
ಸ್ಥಳೀಯರು ಈತ ಬಲವಂತವಾಗಿ ಮತಾಂತರ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಾರೆ ಎಂದು ಜೋರ್ಹತ್ ಎಸ್ಪಿ ಶ್ವೇತಂಕ್ ಮಿಶ್ರಾ ತಿಳಿಸಿದ್ದಾರೆ.
Allegation of religious conversion:ವರದಿ ಪ್ರಕಾರ, 2022ರಲ್ಲಿ ಜರ್ಮನ್ ದೇಶದ 7 ಮತ್ತು ಸ್ವೀಡನ್ ದೇಶದ 3ರನ್ನು ASSAMನಲ್ಲಿ ಇದೇ ರೀತಿಯ ಚಟುವಟಿಕೆಯ ಆರೋಪದ ಮೇಲೆ ಬಂಧಿಸಲಾಗಿದೆ. ಅವರೆಲ್ಲಾ ASSAMಗೆ ಪ್ರವಾಸಿ ವೀಸಾದಡಿ ಬಂದಿದ್ದು, ಮತಾಂತರದಲ್ಲಿ ತೊಡಗಿದ್ದರು.
ಸದ್ಯ, ಈ ವಿಚಾರದಲ್ಲಿ ಕೆನಡಿಯನ್ ಹೈ ಕಮಿಷನ್ನಿಂದ ಈ ಕುರಿತು ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.ಬ್ರಾಂಡೊನ್, ಅಕ್ರಮವಾಗಿ ಮತಾಂತರ ಮತ್ತು ಜೋರ್ಹಟ್ನಲ್ಲಿನ ಮಿಷನ್ ಕ್ಯಾಂಪಸ್ ಗ್ರೇಸ್ ಚರ್ಚ್ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ. ಈತ ಸ್ಥಳೀಯ ಜನರನ್ನು ಮತಾಂತರಗೊಳಿಸಲು ಯೂಟ್ಯೂಬ್ ಚಾನಲ್ ಅನ್ನು ಕೂಡ ನಡೆಸುತ್ತಿದ್ದಾರೆ.
ಈ ಯೂಟ್ಯೂಬ್ ಚಾನಲ್ ಅನ್ನು ಇದೀಗ ಡಿಆಕ್ಟಿವೇಟ್ ಮಾಡಲಾಗಿದೆ. ಆತನ ವಿರುದ್ಧ ಸಾಕಷ್ಟು ಸಾಕ್ಷ್ಯಗಳು ಲಭ್ಯವಾಗಿವೆ ಎಂದರು.ಆತನನ್ನು ಬಂಧಿಸಿದ ಬಳಿಕ ಜೋರ್ಹತ್ ಪೊಲೀಸ್ ಠಾಣೆಯಿಂದ ಫೆಬ್ರವರಿ 6ರಂದು ದೆಹಲಿಗೆ ಕರೆ ತರಲಾಗಿದ್ದು, ಅಲ್ಲಿ ವಿಮಾನದ ಮೂಲಕ ಶುಕ್ರವಾರ ಟೊರೊಂಟೊಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನು ಓದಿರಿ :WHAT HAPPENS IF DIABETES DO GYM:ಮಧುಮೇಹಿಗಳು ಜಿಮ್ ಮಾಡಿದರೆ ಏನಾಗುತ್ತೆ?