spot_img
spot_img

ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷೆಗಳು ಫೆ.15ರಿಂದ ಆರಂಭ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ನವದೆಹಲಿ: 2025ನೇ ಶೈಕ್ಷಣಿಕ ವರ್ಷದಲ್ಲಿ ನಡೆಯಲಿರುವ 10 ಮತ್ತು 12ನೇ ತರಗತಿ ಬೋರ್ಡ್‌ ಪರೀಕ್ಷೆಗಳಿಗೆ ಸಿಬಿಎಸ್‌ಇ ವೇಳಾಪಟ್ಟಿ ಪ್ರಕಟಿಸಿದೆ.

ಮಧ್ಯರಾತ್ರಿಯ ಬಳಿಕ ಹೊರಬಂದ ಪರೀಕ್ಷಾ ಅಧಿಸೂಚನೆಯಲ್ಲಿ, 10ನೇ ತರಗತಿಯ ಬೋರ್ಡ್‌ ಪರೀಕ್ಷೆಗಳು ಮಾರ್ಚ್‌ 18ರಂದು ಮತ್ತು 12ನೇ ತರಗತಿ ಬೋರ್ಡ್‌ ಪರೀಕ್ಷೆಗಳು ಏಪ್ರಿಲ್ 4,ರಂದು ಕೊನೆಗೊಳ್ಳಲಿವೆ ಎಂದು ತಿಳಿಸಿದೆ.

2025ರ ಫೆಬ್ರವರಿ 15ರಿಂದ 10 ಮತ್ತು 12ನೇ ತರಗತಿ ಬೋರ್ಡ್‌ ಪರೀಕ್ಷೆಗಳು ಆರಂಭವಾಗಲಿವೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(ಸಿಬಿಎಸ್‌ಇ) ಬುಧವಾರ ಘೋಷಿಸಿದೆ.

ಇದೇ ಮೊದಲ ಬಾರಿಗೆ ಮಂಡಳಿಯು ಕನಿಷ್ಠ 86 ದಿನಗಳಿಗೆ ಮುಂಚಿತವಾಗಿ ಪರೀಕ್ಷೆಯ ಡೇಟಾಶೀಟ್ (ವೇಳಾಪಟ್ಟಿ) ಬಿಡುಗಡೆ ಮಾಡಿದೆ. “ಎರಡು ವಿಷಯಗಳ ಮಧ್ಯೆ ಬೇಕಾಗುವಷ್ಟು ಅವಕಾಶ ನೀಡಲಾಗಿದೆ.

ವಿದ್ಯಾರ್ಥಿ ತೆಗೆದುಕೊಳ್ಳುವ ಎರಡು ವಿಷಯಗಳು ಒಂದೇ ತಾರೀಖಿನಂದು ಬರದೇ ಇರುವಂತೆ ಗಮನದಲ್ಲಿಟ್ಟುಕೊಂಡು, ಕನಿಷ್ಠ 40,000 ವಿಷಯಗಳ ಸಂಯೋಜನೆಯನ್ನು ರಚಿಸಿ ಡೇಟಾಶೀಟ್ (ವೇಳಾಪಟ್ಟಿ) ಸಿದ್ಧಪಡಿಸಲಾಗಿದೆ” ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸಾನ್ಯಮ್ ಭಾರಧ್ವಾಜ್ ತಿಳಿಸಿದ್ದಾರೆ.

ಪರೀಕ್ಷೆ ನಡೆಯುವುದಕ್ಕೆ ಸಾಕಷ್ಟು ಮುಂಚಿತವಾಗಿ ವೇಳಾಪಟ್ಟಿ ಬಿಡುಗಡೆ ಮಾಡಿರುವ ಹಿಂದಿನ ಉದ್ದೇಶಗಳನ್ನು ಸ್ಪಷ್ಟಪಡಿಸಿರುವ ಸಿಬಿಎಸ್‌ಇ, “ಇದರಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಬೇಗನೆ ತಯಾರಿ ಆರಂಭಿಸಬಹುದು.

ಪರೀಕ್ಷಾ ಒತ್ತಡವನ್ನು ದೂರ ಮಾಡಿಕೊಂಡು ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಲು ಅನುವಾಗುತ್ತದೆ. ಪೋಷಕರು ಮತ್ತು ಶಿಕ್ಷಕರು ಕೂಡಾ ತಮ್ಮ ವೇಳಾಪಟ್ಟಿಯನ್ನು ಯೋಜಿಸಬಹುದು.

ಅದೇ ರೀತಿ ಬೇಸಿಗೆ ರಜೆಗಳು ಮತ್ತು ಮೌಲ್ಯಮಾಪನ ಕೆಲಸಗಳನ್ನು ಮಂಡಳಿಯೇತರ ತರಗತಿಗಳ ಅಧ್ಯಯನಕ್ಕೆ ಅಡ್ಡಿಯಾಗದಂತೆ ನಿರ್ವಹಿಸಬಹುದು.

ಪರೀಕ್ಷಾ ಕೇಂದ್ರಗಳಾಗಿರುವ ಶಾಲೆಗಳು ಕೂಡಾ ತಮ್ಮ ಶೈಕ್ಷಣಿಕ ಚಟುವಟಿಕೆಗಳಿಗೆ ಯೋಜನೆ ರೂಪಿಸಿಕೊಳ್ಳಲು ನೆರವಾಗುತ್ತದೆ” ಎಂದು ತಿಳಿಸಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಮೀನುಗಾರಿಕೆಗೆ ಕೇಂದ್ರದಿಂದ ₹4,969 ಕೋಟಿ ಅನುದಾನ

ನವದೆಹಲಿ: 4,969.62 ಕೋಟಿ ರೂ.ಗಳ ಪ್ರಸ್ತಾವನೆಗಳಿಗೆ ಕೇಂದ್ರದ ಮೀನುಗಾರಿಕೆ ಇಲಾಖೆ ಅನುಮೋದನೆ ನೀಡಿದೆ. ಸಣ್ಣ ಮೀನುಗಾರ ಸಮುದಾಯಗಳು ಹಾಗೂ ಸಾಂಪ್ರದಾಯಿಕ ಮೀನುಗಾರರ ಅಭಿವೃದ್ಧಿಗಾಗಿ ಮತ್ತು ಅವರ...

ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್.ಐ.ಆರ್. : ಸಿದ್ದರಾಮಯ್ಯ

ಬೆಂಗಳೂರು : ಚಂದ್ರಶೇಖರ ಸ್ವಾಮೀಜಿ ಅವರ ಪ್ರಕರಣದಲ್ಲಿ ಪೊಲೀಸರು ಕಾನೂನಿನ ದೃಷ್ಟಿಯಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಕಾನೂನಿನ ಚೌಕಟ್ಟಿನೊಳಗೆ ಬಂದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲವಾದರೆ...

ಶಾಂತಿ, ಸೌಹಾರ್ದತೆ ಕಾಪಾಡಬೇಕು : ಸಂಭಲ್ ಜಾಮಾ ಮಸೀದಿ

ಹೊಸದಿಲ್ಲಿ: ಸಂಭಲ್ ಜಾಮಾ ಮಸೀದಿಯ ಆವರಣದಲ್ಲಿನ ಸಮೀಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿದ್ದು, ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಹೇಳಿದೆ. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಲಹಾಬಾದ್...

99.17 crore released to Karnataka

The central government has taken steps to globally develop major tourist destinations that are not so popular in...