New Delhi News:
ನಾಳೆ ರಾಷ್ಟ್ರಪತಿಗಳ ಜಂಟಿ ಸದನ ಭಾಷಣದೊಂದಿಗೆ CENTRAL BUDGET SESSION ಆರಂಭವಾಗಲಿದೆ. ಅದಕ್ಕೂ ಮುನ್ನ, ಇಂದು ಕೇಂದ್ರ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದಿದೆ. CENTRAL BUDGET SESSION ದ ಮೊದಲ ದಿನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ಮಂಡಿಸಲಿದ್ದು, ಶನಿವಾರ ಬಜೆಟ್ ಮಂಡಿಸುವರು. ಫೆಬ್ರವರಿ 3ರಂದು ಲೋಕಸಭಾ ಮತ್ತು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನ ನಿರ್ಣಯದ ಚರ್ಚೆ ನಡೆಯಲಿದೆ.
CENTRAL BUDGET SESSION ಆರಂಭಕ್ಕೂ ಮುನ್ನ ಕೇಂದ್ರ ಸರ್ಕಾರ ಇಂದು ಸರ್ವ ಪಕ್ಷಗಳ ಸಭೆ ಕರೆದಿದೆ. CENTRAL BUDGET SESSION ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತ ಜನವರಿ 31ರಿಂದ ಪ್ರಾರಂಭವಾಗಿ ಫೆ.13ರವರೆಗೆ ಸಾಗುತ್ತದೆ. ಈ ಹಂತದಲ್ಲಿ ಫೆ.1ರಂದು ಬಜೆಟ್ ಮಂಡನೆಯಾಗುತ್ತದೆ. ಎರಡನೇ ಹಂತ ಮಾರ್ಚ್ 10ರಿಂದ ಪ್ರಾರಂಭವಾಗಿ ಏಪ್ರಿಲ್ 4ರವರೆಗೆ ನಡೆಯುತ್ತದೆ.
ಇದೇ ವೇಳೆ, ಕಳೆದ ಚಳಿಗಾಲ ಅಧಿವೇಶನದ ಕುರಿತು ಪ್ರಸ್ತಾಪಿಸಿದ ಸಚಿವರು, ಕಳೆದೆರಡು ಅಧಿವೇಶನದಲ್ಲಿ ನಡೆದ ಗಲಾಟೆ-ಗದ್ದಲಗಿಂದ ಸಂಸತ್ತಿನ ಮೇಲಿನ ದೃಷ್ಟಿಕೋನ ಬದಲಾಗಿದೆ. ಪ್ರತಿಪಕ್ಷಗಳು ಸುಗಮ ಕಲಾಪಕ್ಕೆ ಅವಕಾಶ ನೀಡಿದರೆ, ಚರ್ಚೆಗಳು ಸರಾಗವಾಗಿ ನಡೆಯುತ್ತವೆ. ಈ ಬಾರಿ ಬಜೆಟ್ ಅಧಿವೇಶನದಲ್ಲಿ ಭಾಗಿಯಾಗುವ ವಿಪಕ್ಷಗಳು ಮತ್ತು ಇತರೆ ಸಂಸದರಿಗೆ ಈ ಕುರಿತಾಗಿ ಮನವಿ ಮಾಡುತ್ತೇನೆ ಎಂದರು.(ಐಎಎನ್ಎಸ್)
ನಾಳೆಯಿಂದ (ಜನವರಿ 31) ಬಜೆಟ್ ಅಧಿವೇಶನ ಆರಂಭವಾಗಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಮೊದಲು ಮಾಧ್ಯಮಗಳೆದುರು ಮಾತನಾಡಿದ್ದ ಸಂಸದೀಯ ವ್ಯವಹಾರಗಳ ಸಚಿವ ಸಚಿವ ಕಿರಣ್ ರಿಜಿಜು, ಕೇಂದ್ರ ಬಜೆಟ್ ಆಶಾದಾಯಕವಾಗಿರಲಿದೆ. ಅಧಿವೇಶನದ ವೇಳೆ ಉತ್ತಮ ಚರ್ಚೆಗೆ ಪ್ರತಿಪಕ್ಷಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದರು.
ಇದನ್ನು ಓದಿರಿ : MAHAKUMBH STAMPEDE : ಹಠ ಮಾಡಿ ಪ್ರಯಾಗ್ರಾಜ್ಗೆ ಹೋದ ಮಗಳು, ಸಾವಿಗೂ ಮುನ್ನ ಫೇಸ್ಬುಕ್ ಲೈವ್