spot_img
spot_img

CHAMPIONS TROPHY : ಚಾಂಪಿಯನ್ಸ್ ಟ್ರೋಫಿ ಮಿಸ್ ಮಾಡಿಕೊಂಡ 2 ದಿಗ್ಗಜ ತಂಡಗಳು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

CHAMPIONS TROPHY:

CHAMPIONS TROPHY ಇಂದಿನಿಂದ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿವೆ. ಟೂರ್ನಿಯಲ್ಲಿ ಎರಡು ಗ್ರೂಪ್​ಗಳನ್ನು ಮಾಡಲಾಗಿದೆ. ಗ್ರೂಪ್​-ಎ ನಲ್ಲಿ ಬಾಂಗ್ಲಾ, ಭಾರತ, ಪಾಕ್​ ಹಾಗೂ ನ್ಯೂಜಿಲೆಂಡ್ ಇವೆ. ಗ್ರೂಪ್​- ಬಿ ನಲ್ಲಿ ಅಫ್ಘಾನ್, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ಆಫ್ರಿಕಾ ತಂಡಗಳಿವೆ. ಆದರೆ ಈ ಮಿನಿವಿಶ್ವಕಪ್​ಗೆ ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್​ ಏಕೆ ಆಯ್ಕೆ ಆಗಿಲ್ಲ ಎನ್ನವುದಕ್ಕೆ ಉತ್ತರ ಇಲ್ಲಿದೆ.

2023ರ ವಿಶ್ವಕಪ್‌ನಲ್ಲಿ ಅಗ್ರ ಏಳು ಕ್ರಮಾಂಕಗಳನ್ನು ಪಡೆದ ಅಫ್ಘಾನಿಸ್ತಾನ ಸೇರಿ 8 ತಂಡಗಳು ಆಯ್ಕೆ ಆಗಿವೆ. ಇನ್ನು ಪಾಕಿಸ್ತಾನವು CHAMPIONS TROPHY ಗೆ ಆತಿಥೇಯ ನೀಡುತ್ತಿರುವುದರಿಂದ ಸ್ವಯಂಚಾಲಿತವಾಗಿ ಅರ್ಹತೆ ಪಡೆದಿದೆ. ಆದರೆ ಶ್ರೀಲಂಕಾ, ವೆಸ್ಟ್​ ಇಂಡೀಸ್, ಕೀನ್ಯಾ, ಜಿಂಬಾಬ್ವೆ ಹಾಗೂ ಐರ್ಲೆಂಡ್, ನೆದರ್​ಲ್ಯಾಂಡ್​ ತಂಡಗಳು ಅರ್ಹತೆ ಪಡೆದಿಲ್ಲ.

ಶ್ರೀಲಂಕಾ ತಂಡ ಇಲ್ಲದೇ ಇದೇ ಮೊದಲ ಬಾರಿಗೆ CHAMPIONS TROPHY ನಡೆಯುತ್ತಿದೆ. 2002ರಲ್ಲಿ ಮಳೆಯ ಕಾರಣದಿಂದ ಶ್ರೀಲಂಕಾ-ಭಾರತ ಟ್ರೋಫಿಯನ್ನು ಹಂಚಿಕೊಂಡಿದ್ದವು. ಇದರ ಜೊತೆಗೆ 2004ರಲ್ಲಿ ಚಾಂಪಿನ್ ಆಗಿದ್ದ ವೆಸ್ಟ್​ ಇಂಡೀಸ್​ ಕೂಡ 2ನೇ ಬಾರಿಗೆ ಚಾಂಪಿಯನ್ ಟ್ರೋಫಿ (2017, 2025) ತಪ್ಪಿಸಿಕೊಂಡಿರುವುದು ಅಲ್ಲಿನ ಅಭಿಮಾನಿಗಳಿಗೆ ಬೇಸರದ ಸಂಗತಿ ಆಗಿದೆ.

2023ರ ವಿಶ್ವಕಪ್​ ಟೂರ್ನಿಗೆ ವಿಶ್ವದ ಒಟ್ಟು 13 ತಂಡಗಳಲ್ಲಿ 10 ತಂಡಗಳು ಆಯ್ಕೆ ಆಗಿದ್ದವು. ಈ ಟೂರ್ನಿಯಲ್ಲಿ ಕೀನ್ಯಾ, ಜಿಂಬಾಬ್ವೆ, ಐರ್ಲೆಂಡ್ ಹಾಗೂ ವೆಸ್ಟ್​ ಇಂಡೀಸ್ ತಂಡಗಳು ಟೂರ್ನಿಗೂ ಮೊದಲೇ ಹೊರಗುಳಿದಿದ್ದವು. ಈಗ ಚಾಂಪಿಯನ್ ಟ್ರೋಫಿ ಆಡುತ್ತಿರುವ 8 ಟೀಮ್​ಗಳು ಹಾಗೂ ಶ್ರೀಲಂಕಾ, ನೆದರ್​ಲ್ಯಾಂಡ್​ ವಿಶ್ವಕಪ್​ನಲ್ಲಿ ಸ್ಥಾನ ಪಡೆದಿದ್ದವು.

ಚಾಂಪಿಯನ್​ ಟ್ರೋಫಿಗೆ ಇವುಗಳ ನೆಟ್​ ರನ್​ರೇಟ್​ ಅನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿತ್ತು. ರನ್​ರೇಟ್​ನಲ್ಲಿ ಬಾಂಗ್ಲಾ ವಿರುದ್ಧ ಅರ್ಹತೆ ಪಡೆಯುವಲ್ಲಿ ಶ್ರೀಲಂಕಾ ವಿಫಲವಾಯಿತು. ನೆದರ್​ಲ್ಯಾಂಡ್ -1.825, ಬಾಂಗ್ಲಾದ ನೆಟ್​ ರನ್​ ರೇಟ್ 1.087 ಇದ್ರೆ ಶ್ರಿಲಂಕಾದ ನೆಟ್​ ರನ್​ ರೇಟ್ -1.419 ಇತ್ತು.

ನೆಟ್ ರೇಟ್​ನಲ್ಲಿ ಬಾಂಗ್ಲಾದ ಪರ್ಫಾಮೆನ್ಸ್​ ಚೆನ್ನಾಗಿದ್ದ ಕಾರಣ 8ನೇ ಸ್ಥಾನ ಪಡೆದು ಶ್ರೀಲಂಕಾವನ್ನು ಹಿಂದಿಕ್ಕಿ ಆಯ್ಕೆ ಆಗಿದೆ. ಅದರಂತೆ ವೆಸ್ಟ್ ಇಂಡೀಸ್​ ವಿಶ್ವಕಪ್​ನ ಅರ್ಹತೆ ಪಡೆಯುವಲ್ಲಿ ಮೊದಲೇ ವಿಫಲವಾಗಿತ್ತು. ಇದರಿಂದ ಚಾಂಪಿಯನ್ಸ್ ಟ್ರೋಫಿಗೂ ಅದು ಆಯ್ಕೆ ಆಗಿಲ್ಲ.

ಇದನ್ನು ಓದಿರಿ : RISHAB SHETTY : ಛತ್ರಪತಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ರಿಷಬ್ ಶೆಟ್ಟಿ

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...