spot_img
spot_img

CHAMPIONS TROPHY 2025 : ಆಟಗಾರರೊಂದಿಗೆ ಕುಟುಂಬಸ್ಥರು ಹೋಗುವಂತಿಲ್ಲ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

New Delhi News:

CHAMPIONS TROPHY 2025  ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಫೆ.15ರಂದು ದುಬೈಗೆ ತೆರಳಲಿರುವ ಭಾರತೀಯ ಕ್ರಿಕೆಟ್ ಆಟಗಾರರೊಂದಿಗೆ ಅವರ ಕುಟುಂಬಸ್ಥರಾರೂ ಪ್ರವಾಸ ಬೆಳೆಸುತ್ತಿಲ್ಲ. ಆಟಗಾರರೊಂದಿಗೆ ಕುಟುಂಬಸ್ಥರು ತೆರಳುವಂತಿಲ್ಲ ಎಂಬ ಬಿಸಿಸಿಐನ ಹೊಸ ನಿಯಮ ಇದೇ ಮೊದಲ ಬಾರಿಗೆ ಜಾರಿಗೆ ಬರಲಿದೆ.

India schedule is as follows:

ಭಾರತ ತಂಡ ಫೆಬ್ರವರಿ 20ರಂದು ಬಾಂಗ್ಲಾದೇಶದ ವಿರುದ್ಧ ದುಬೈನಲ್ಲಿ ತನ್ನ ಪ್ರಥಮ ಪಂದ್ಯ ಆಡಲಿದೆ. ನಂತರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಫೆಬ್ರವರಿ 23 ಮತ್ತು ನ್ಯೂಜಿಲೆಂಡ್ ವಿರುದ್ಧ ಮಾರ್ಚ್ 2ರಂದು ಪಂದ್ಯಗಳನ್ನು ಆಡಲಿದೆ.

CHAMPIONS TROPHY 2025 ರೋಹಿತ್ ಶರ್ಮಾ ನೇತೃತ್ವದ ತಂಡವು ದುಬೈನಲ್ಲಿ ತನ್ನ ಪಂದ್ಯಗಳನ್ನು ಆಡಲಿದ್ದು, ಟ್ರೋಫಿಯ ಉಳಿದ ಪಂದ್ಯಗಳು ಫೆಬ್ರವರಿ 19ರಿಂದ ಪಾಕಿಸ್ತಾನದಲ್ಲಿ ಮೂರು ಸ್ಥಳಗಳಲ್ಲಿ ನಡೆಯಲಿವೆ.

What is BCCI’s new rule?:

“ಈ ವಿಷಯದಲ್ಲಿ ಮುಂದಿನ ದಿನಗಳಲ್ಲಿ ಏನಾದರು ಬದಲಾವಣೆಯಾದರೂ ಆಗಬಹುದು. ಆದರೆ ಈಗಿನಂತೆ, ಆಟಗಾರರು ಈ ಪ್ರವಾಸಕ್ಕೆ ತಮ್ಮ ಹೆಂಡತಿ ಅಥವಾ ಸಂಗಾತಿಯನ್ನು ಕರೆದುಕೊಂಡು ಹೋಗುವ ಸಾಧ್ಯತೆಯಿಲ್ಲ. ಹಿರಿಯ ಆಟಗಾರರೊಬ್ಬರು ಈ ಬಗ್ಗೆ ವಿಚಾರಿಸಿದಾಗ ನಿಯಮಾವಳಿಗಳನ್ನು ಪಾಲಿಸಲಾಗುವುದು ಎಂದು ಅವರಿಗೆ ತಿಳಿಸಲಾಗಿದೆ” ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

“ಪ್ರವಾಸವು ಒಂದು ತಿಂಗಳಿಗಿಂತ ಕಡಿಮೆ ಅವಧಿಯದ್ದಾಗಿರುವುದರಿಂದ ಆಟಗಾರರು ಕುಟುಂಬಸ್ಥರನ್ನು ಕರೆದೊಯ್ಯಲು ಅವಕಾಶವಿಲ್ಲ. ಆದರೆ ಈ ನಿಯಮದಲ್ಲಿ ವಿನಾಯಿತಿ ನೀಡಿದರೂ, ತಾವು ಕರೆದುಕೊಂಡು ಹೋಗುವ ಕುಟುಂಬಸ್ಥರ ವೆಚ್ಚವನ್ನು ಆಟಗಾರರೇ ಭರಿಸಬೇಕಾಗುತ್ತದೆ” ಎಂದು ಅವರು ಹೇಳಿದರು.

CHAMPIONS TROPHY 2025  ಮಾರ್ಚ್ 9ರಂದು ನಡೆಯಲಿರುವ ಫೈನಲ್ ಪಂದ್ಯವನ್ನು ಗಣನೆಗೆ ತೆಗೆದುಕೊಂಡರೂ ಪ್ರವಾಸದ ಅವಧಿ ಕೇವಲ ಮೂರು ವಾರಗಳಾಗಿರುವುದರಿಂದ, ಆಟಗಾರರು ತಮ್ಮ ಜೊತೆಗೆ ಕುಟುಂಬಸ್ಥರನ್ನು ಕರೆದೊಯ್ಯಲು ಬಿಸಿಸಿಐ ಅವಕಾಶ ನೀಡುವುದಿಲ್ಲ. ಹೊಸ ನೀತಿಯ ಪ್ರಕಾರ, 45 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಪ್ರವಾಸದ ಸಮಯದಲ್ಲಿ ಮಾತ್ರ ಕುಟುಂಬದವರು ಗರಿಷ್ಠ ಎರಡು ವಾರಗಳವರೆಗೆ ಆಟಗಾರರೊಂದಿಗೆ ಇರಲು ಅವಕಾಶವಿದೆ.

“ಈ ನೀತಿಯಿಂದ ಯಾವುದೇ ವಿನಾಯಿತಿ ಪಡೆಯಲು ಕೋಚ್, ನಾಯಕ ಮತ್ತು ಆಪರೇಶನ್ಸ್​ ಜಿಎಂ ಅವರಿಂದ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಸಂದರ್ಶನದ ಅವಧಿಯ ಹೊರಗಿನ ಹೆಚ್ಚುವರಿ ವೆಚ್ಚಗಳನ್ನು ಬಿಸಿಸಿಐ ಭರಿಸುವುದಿಲ್ಲ. ಆದಾಗ್ಯೂ, ಜೂನ್-ಜುಲೈ-ಆಗಸ್ಟ್​ನಲ್ಲಿ ಇಂಗ್ಲೆಂಡ್​ನಲ್ಲಿ ನಡೆಯುವ ಐದು ಟೆಸ್ಟ್ ಪ್ರವಾಸದಲ್ಲಿ ಐದೂ ಪಂದ್ಯಗಳ ಸಮಯದಲ್ಲಿ ಆಟಗಾರರೊಂದಿಗೆ ಕುಟುಂಬಸ್ಥರು ಇರಲು ಅವಕಾಶ ನೀಡಲಾಗುವುದು. ಪ್ರವಾಸದ ಸಮಯದಲ್ಲಿ ಅವರ ಎರಡು ವಾರಗಳ ವಾಸ್ತವ್ಯದ ಪಟ್ಟಿಯನ್ನು ನಂತರ ರೂಪಿಸಲಾಗುವುದು.” ಎಂದು ಅಧಿಕಾರಿ ತಿಳಿಸಿದರು.

“ವಿದೇಶಿ ಪ್ರವಾಸಗಳಲ್ಲಿ 45 ದಿನಗಳಿಗಿಂತ ಹೆಚ್ಚು ಕಾಲ ಭಾರತದಿಂದ ಹೊರಗಿರುವ ಆಟಗಾರರು ಪ್ರತಿ ಸರಣಿಯ ಸಮಯದಲ್ಲಿ ಎರಡು ವಾರಗಳ ಅವಧಿಗೆ ತಮ್ಮ ಸಂಗಾತಿ ಹಾಗೂ ಮಕ್ಕಳನ್ನು ತಮ್ಮ ಜೊತೆಗೆ ಇಟ್ಟುಕೊಳ್ಳಬಹುದು” ಎಂದು ಬಿಸಿಸಿಐನ ಹೊಸ ನಿಯಮಾವಳಿ ಹೇಳುತ್ತದೆ.

ಇದನ್ನು ಓದಿರಿ : I-T Bill Powers Taxmen To Override Computers, Virtual Digital Space

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

STOCK MARKET: ಸೆನ್ಸೆಕ್ಸ್ 425 ಅಂಶ ಕುಸಿತ, 22,795ಕ್ಕಿಳಿದ ನಿಫ್ಟಿ

Mumbai News: ಎನ್ಎಸ್ಇ ನಿಫ್ಟಿ 50 ಕೂಡ 127.25 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 22,795.90 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ...

PRE BUDGET MEETING:ಮುಂಬರುವ 2025-26ರ ರಾಜ್ಯ ಬಜೆಟ್ನಲ್ಲಿ ಕಾಸಿಯಾದ ನಿರೀಕ್ಷೆಗಳೇನು?

Bangalore News : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ BUDGET ಪೂರ್ವ ಸಭೆ ನಡೆಸಿ...

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...

AYODHYA SHRI RAM TEMPLE:ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ

Ayodhya (Uttar Pradesh) News: ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು AYODHYA ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5...