Champions Trophy 2025 Update!
ಭಾರತ ಆಡಲು ಬರೆದೆ ಹೋದರೆ ಆಟ ಬೇಡವೇ ಬೇಡ ಎಂದ ಪಾಕಿಸ್ತಾನದ ದೊಡ್ಡ ಆಟಗಾರ! ಏನು ಸುದ್ದಿ ಎಂದು ನೀವೇ ಓದಿರಿ:
>ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿಯಲಿರುವ 8 ತಂಡಗಳು:
1.ಭಾರತ
2.ಪಾಕಿಸ್ತಾನ್
3.ಸೌತ್ ಆಫ್ರಿಕಾ
4.ನ್ಯೂಝಿಲೆಂಡ್
5.ಅಫ್ಘಾನಿಸ್ತಾನ್
6.ಇಂಗ್ಲೆಂಡ್
7.ಬಾಂಗ್ಲಾದೇಶ್
8.ಆಸ್ಟ್ರೇಲಿಯಾ
ಈ ಎಂಟು ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ಅದರಂತೆ ಎರಡು ಗ್ರೂಪ್ಗಳಲ್ಲಿ ತಲಾ 4 ಟೀಮ್ಗಳು ಕಾಣಿಸಿಕೊಳ್ಳಲಿದೆ. ಅಲ್ಲದೆ ಮೊದಲ ಸುತ್ತಿನಲ್ಲಿ ಗ್ರೂಪ್ ತಂಡಗಳ ನಡುವೆ ಪಂದ್ಯಗಳು ನಡೆಯಲಿದೆ. ಅಂದರೆ ಗ್ರೂಪ್-ಎ ನಲ್ಲಿರುವ ಭಾರತ ತಂಡವು, ಪಾಕಿಸ್ತಾನ್, ಬಾಂಗ್ಲಾದೇಶ್ ಮತ್ತು ನ್ಯೂಝಿಲೆಂಡ್ ತಂಡಗಳನ್ನು ಎದುರಿಸಲಿದೆ.
Champions Trophy 2025 IND VS PAK ಮ್ಯಾಚ್ ಯಾವಾಗ?
ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಒಟ್ಟು 8 ತಂಢಗಳು ಕಣಕ್ಕಿಳಿಯಲಿದೆ. ಈ ತಂಡಗಳನ್ನು ಎರಡು ಗ್ರೂಪ್ಗಳಾಗಿ ವಿಂಗಡಿಸಲಾಗಿದ್ದು, ಅದರಂತೆ ಮೊದಲ ಸುತ್ತಿನಲ್ಲಿ ಆಯಾ ಗ್ರೂಪ್ಗಳಲ್ಲಿನ ತಂಡಗಳ ನಡುವೆ ಪಂದ್ಯಗಳು ನಡೆಯಲಿದೆ. ಇಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಒಂದೇ ಗ್ರೂಪ್ನಲ್ಲಿರುವುದರಿಂದ ಮೊದಲ ಸುತ್ತಿನಲ್ಲೇ ಮುಖಾಮುಖಿಯಾಗಲಿದೆ.
ಪಾಕಿಸ್ತಾನದಲ್ಲಿ ಮ್ಯಾಚ್, ಭಾರತ ಎಂಟ್ರಿ?
ಚಾಂಪಿಯನ್ಸ್ ಟ್ರೋಫಿ 2025 ರಲ್ಲಿ ಭಾರತ ತಂಡದ ಪಾಲ್ಗೊಳ್ಳುವಿಕೆಯ ಬಗ್ಗೆ ಇನ್ನೂ ಸಹ ಖಚಿತತೆ ಏರ್ಪಟ್ಟಿಲ್ಲ. ಹೀಗೆಂದು ವರದಿಗಳು ಹೇಳಿತ್ತಿವೆ, ಈ ವರದಿಗಳ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಪಾಕ್ ತಂಡದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಅವರು ಬರದಿದ್ದರೆ, ಬೇಡ ಅಷ್ಟೇ… ನಾನು ಟೂರ್ನಿಯನ್ನು ಆಯೋಜಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡ ಪಾಕ್ಗೆ ತೆರಳಿದೆಯಾ?
2006 ರ ಬಳಿಕ ಭಾರತ ತಂಡವು ಪಾಕಿಸ್ತಾನಕ್ಕೆ ತೆರಳಿಲ್ಲ. ಏಕೆಂದರೆ ಐಸಿಸಿ ಟೂರ್ನಿಗಳನ್ನು ಸ್ಥಳಾಂತರಿಸಬೇಕಿದ್ದರೆ ನಿರ್ದಿಷ್ಠ ಕಾರಣಗಳಿರಬೇಕಾಗುತ್ತದೆ. ಇಲ್ಲಿ ಬಿಸಿಸಿಐ ಟೂರ್ನಿಯನ್ನು ಸ್ಥಳಾಂತರಿಸಲು ಸುರಕ್ಷತೆಯ ಕಾರಣಗಳನ್ನು ನೀಡಿದರೂ, ಅದಕ್ಕೆ ಇತರೆ ಕ್ರಿಕೆಟ್ ಮಂಡಳಿಗಳೂ ಕೂಡ ಕೈ ಜೋಡಿಸಬೇಕಾಗುತ್ತದೆ.
ಮಾಜಿ ಆಟಗಾರ ಹೇಳಿದ್ದೇನು?
ಭಾರತವು ಆಡಲು ಬಯಸಿದರೆ ಪಾಕಿಸ್ತಾನಕ್ಕೆ ಬರಲಿ. ಅವರು ಬರಲು ಬಯಸದಿದ್ದರೆ, ಪರವಾಗಿಲ್ಲ. ಅವರ ನಿರ್ಧಾರದ ಬಗ್ಗೆ ವಿವಾದ ಸೃಷ್ಟಿಸುವುದರಲ್ಲಿ ಅರ್ಥವಿಲ್ಲ. ಇದು ಯಾರನ್ನೂ ಕೆಟ್ಟದಾಗಿ ಮಾಡುವುದಿಲ್ಲ. ಇದು ಐಸಿಸಿಯ ಟೂರ್ನಮೆಂಟ್. ಅವರು ಸಮಸ್ಯೆಯನ್ನು ಪರಿಶೀಲಿಸುತ್ತಾರೆ ಎಂದು ಸಕ್ಲೇನ್ ಮುಷ್ತಾಕ್ ಹೇಳಿದ್ದಾರೆ. ಇದಾಗ್ಯೂ ಭಾರತ ತಂಡವು ಪಾಕ್ನಲ್ಲಿ ಟೂರ್ನಿ ಆಡಲು ಮುಂದಾಗದಿದ್ದರೆ, ಅವರು ಹೊರಗುಳಿಯಲಿ. ಇದರಿಂದ ಏನೂ ಆಗುವುದಿಲ್ಲ. ನಾವು ಟೂರ್ನಿಯನ್ನು ಆಯೋಜಿಸಿದರೆ ಸಾಕಲ್ವಾ ಎಂದು ಸಕ್ಲೇನ್ ಮುಷ್ತಾಕ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಓದಿರಿ:
India vs Sri Lanka 2nd ODI 2024: ಶ್ರೀಲಂಕಾ ಟೀಮ್ ನಲ್ಲಿ ದೊಡ್ಡ ಬದಲಾವಣೆ!
Yadgir news: ಭ್ರಷ್ಟ ಅಧಿಕಾರಿ ಅಮಾನತ್ತು!