ಬೆಂಗಳೂರು: ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಮಳೆಯಿಂದಾಗಿ ಯಲಹಂಕ ಪ್ರದೇಶದ ಇಲ್ಲಿನ ನಿವಾಸಿಗಳು ಮೇಘಸ್ಫೋಟದಿಂದ
ಕಂಗಾಲಾಗಿದ್ದಾರೆ.
ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಯಲಹಂಕ ಪ್ರದೇಶದಲ್ಲಿ ಉಂಟಾದ ಮೇಘಸ್ಫೋಟದಿಂದ ಇಲ್ಲಿನ ನಿವಾಸಿಗಳು ಬಹಳ ಕಷ್ಟಪಡುತ್ತಿದ್ದಾರೆ.
ಭಾರೀ ಮಳೆಯಿಂದಾಗಿ ಪ್ರದೇಶ ಜಲಾವೃತಗೊಂಡಿದೆ. 10 ಲೇಔಟ್‌ಗಳು ಮತ್ತು ಸುತ್ತಮುತ್ತಲಿನ ಸಾವಿರಾರು ನಿವಾಸಿಗಳು ಆಹಾರ, ವಿದ್ಯುತ್ ಮತ್ತು ಇಂಟರ್ನೆಟ್ ಸಂಪರ್ಕವಿಲ್ಲದೆ ಕಷ್ಟಕ್ಕೀಡಾಗಿದ್ದರೆ.
ಎಲ್ಲಾ ದಿಕ್ಕುಗಳಿಂದಲೂ ನೀರಿನಿಂದ ಆವೃತವಾದ ಪ್ರದೇಶಗಳ ಜನರನ್ನು ದೋಣಿಗಳಲ್ಲಿ ರಕ್ಷಿಸಲಾಯಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಕಾರ್ಯಾಚರಣೆಯಲ್ಲಿ ತೊಡಗಿದ್ದು, ನಾಗರಿಕರನ್ನು ಸುರಕ್ಷಿತವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಕರೆದೊಯ್ಯಲು ರಕ್ಷಣಾ ಸಿಬ್ಬಂದಿ ಮತ್ತು ದೋಣಿಗಳನ್ನು ನಿಯೋಜಿಸಿವೆ.
ಪ್ರತಿ ವರ್ಷವೂ ಯಲಹಂಕದ ಕೆರೆಗಳು ತುಂಬಿ ಸ್ಥಳೀಯ ಪ್ರದೇಶಗಳು ಜಲಾವೃತಗೊಂಡು ನಿವಾಸಿಗಳಿಗೆ ಸಂಕಷ್ಟ ತಂದೊಡ್ಡುವುದು ಸಾಮಾನ್ಯವಾಗಿದೆ.
ಹವಾಮಾನ ಇಲಾಖೆ ಚೌಡೇಶ್ವರಿ ನಗರದಲ್ಲಿ 157ಮಿಮೀ, ಯಲಹಂಕದಲ್ಲಿ 141ಮಿಮೀ, ವಿದ್ಯಾರಣ್ಯಪುರದಲ್ಲಿ 109ಮಿಮೀ, ಜಕ್ಕೂರಿನಲ್ಲಿ 98ಮಿಮೀ, ಕೊಡಿಗೇಹಳ್ಳಿಯಲ್ಲಿ 81.5ಮಿಮೀ ಮಳೆ ದಾಖಲಾಗಿದೆ ಎಂದು ವರದಿ ನೀಡಿದೆ.