Bangalore News:
CM SIDDARAMAIAH ಅವರು ಎಡಗಾಲು ಮಂಡಿನೋವಿನಿಂದ ಬಳಲುತ್ತಿದ್ದು, ಸರ್ಕಾರಿ ಕಾರಿನಲ್ಲಿ ಕಾಲು ಮಡಚಿ ಇಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೊಸ ಕಾರು ಖರೀದಿಸುವ ಯೋಜನೆಯಲ್ಲಿ ಸಿಎಂ ಪ್ರಯೋಗಾರ್ಥವಾಗಿ ಬೇರೊಂದು ಕಾರನ್ನು ಬಳಸುತ್ತಿದ್ದಾರೆ.
ಸಿಎಂ ಮೊದಲು ತಮ್ಮ ಸರ್ಕಾರಿ ಫಾರ್ಚೂನರ್ ಕಾರನ್ನು ಬಳಸುತ್ತಿದ್ದರು. ಈಗ ಮಂಡಿ ನೋವಿದ್ದು, ಕಾಲಿಗೆ ಬೆಲ್ಟ್ ಅಳವಡಿಸಲಾಗಿದೆ. ಹೀಗಾಗಿ ಮುಖ್ಯಮಂತ್ರಿಗಳಿಗೆ ಅವರ ಸರ್ಕಾರಿ ಕಾರಿನಲ್ಲಿ ಹತ್ತಲು ಮತ್ತು ಇಳಿಯಲು, ಕಾಲನ್ನು ಮುಂದಕ್ಕೆ ಚಾಚಿ ಇಡಲು ಕಷ್ಟವಾಗುತ್ತಿದೆ.
ಈ ಹಿನ್ನೆಲೆ ಹೊಸ ಕಾರು ಖರೀದಿಗೆ ಮುಂದಾಗಿದ್ದಾರೆ.ಮಂಡಿನೋವಿನಿಂದ ಬಳಲುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಇದೀಗ ಹೊಸ Toyota Vellfire ಕಾರು ಖರೀದಿ ಮಾಡಲು ಮುಂದಾಗಿದ್ದಾರೆ.
Drive in Toyota Vellfire:
ಕಳೆದ ಒಂದು ವಾರದಿಂದ ಸಿದ್ದರಾಮಯ್ಯ ಅವರು ತಮ್ಮ ಅಧಿಕೃತ ಕಾರ್ಯಕ್ರಮಗಳಿಗೆ ಸರ್ಕಾರಿ ಕಾರು ಬದಲಿಗೆ Toyota Vellfire ಕಾರಲ್ಲೇ ಓಡಾಟ ನಡೆಸುತ್ತಿದ್ದಾರೆ. ವಿಧಾನಸೌಧದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲು ಸಹ CM SIDDARAMAIAH ಇದೇ ಕಾರಲ್ಲಿ ಆಗಮಿಸಿದ್ದರು.
ಬಳಿಕ ಕಾರಿನಿಂದ ಇಳಿದು ವ್ಹೀಲ್ ಚೇರ್ನಲ್ಲಿ ಕುಳಿತು ವಿಧಾನಸೌಧದ ಒಳಕ್ಕೆ ಹೋದರು. ವೈದ್ಯರ ಸಲಹೆ ಮೇರೆಗೆ ಗಾಲಿ ಕುರ್ಚಿಯಲ್ಲೇ ಸಿಎಂ ಕೆಲ ದಿನಗಳ ಕಾಲ ಕೂರಬೇಕಾಗಿದೆ.
ತಮ್ಮ ಆಪ್ತರು ಹೊಸ ಕಾರು ಖರೀದಿಸಲು ನೀಡಿದ ಸಲಹೆ ಹಿನ್ನೆಲೆ ಸದ್ಯ ಸಿಎಂ ಪ್ರಯೋಗಾರ್ಥವಾಗಿ ಟೊಯೋಟಾ ವೆಲ್ಫೈರ್ ಕಾರನ್ನು ಬಳಲಸುತ್ತಿದ್ದು, ಬಹುತೇಕ ಅದೇ ಕಾರನ್ನು ಖರೀದಿಸುವ ಸಾಧ್ಯತೆ ಇದೆ ಎಂದು CM SIDDARAMAIAH ಸಚಿವಾಲಯದ ಮೂಲಗಳು ತಿಳಿಸಿವೆ.
ತಮ್ಮ ಆಪ್ತರು ಹೊಸ ಕಾರು ಖರೀದಿಸಲು ನೀಡಿದ ಸಲಹೆ ಹಿನ್ನೆಲೆ ಸದ್ಯ ಸಿಎಂ ಪ್ರಯೋಗಾರ್ಥವಾಗಿ ಟೊಯೋಟಾ ವೆಲ್ಫೈರ್ ಕಾರನ್ನು ಬಳಲಸುತ್ತಿದ್ದು, ಬಹುತೇಕ ಅದೇ ಕಾರನ್ನು ಖರೀದಿಸುವ ಸಾಧ್ಯತೆ ಇದೆ ಎಂದು ಸಿಎಂ ಸಚಿವಾಲಯದ ಮೂಲಗಳು ತಿಳಿಸಿವೆ.
ಇದನ್ನು ಓದಿರಿ : Kolkata Triple Dead Bodies: Autopsy Report Confirms Murder By Sharp Weapons