spot_img
spot_img

CM SIDDARAMAIAH : ಅಪಾಯಕಾರಿ ವೈರಸ್ ಅಲ್ಲ, ಆದರೂ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Bangalore News:

ಆರೋಗ್ಯ ಇಲಾಖೆಯವರು ಏನೇನು ಕ್ರಮ ಕೈಗೊಳ್ಳಬೇಕು ಮಾಡ್ತಾರೆ. Minister Dinesh Gundurao ಸಭೆ ಮಾಡ್ತಿದ್ದಾರೆ. ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ ಸಭೆ ನಡೆಸ್ತಿದೆ ಎಂದರು.  ಹೆಚ್​ಎಂಪಿವಿ ಅಪಾಯಕಾರಿ ವೈರಸ್ ಅಲ್ಲ, ಆದರೂ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದು CM SIDDARAMAIAH ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಚೈನಾ ವೈರಸ್ ಕಾಣಿಸಿಕೊಂಡಿದೆ. ಕರ್ನಾಟಕಕ್ಕೆ HMPV ವೈರಸ್ ಬಂದಿದೆ ಎಂಬ ಮಾಹಿತಿ ಬಂದಿದೆ. ಮುಂಜಾಗ್ರತಾ ಕ್ರಮಕ್ಕೆ ಆರೋಗ್ಯ ಇಲಾಖೆಗೆ ದಿನೇಶ್ ಗುಂಡೂರಾವ್ ಅವರಿಗೆ ಸೂಚನೆ ಕೊಟ್ಟಿದ್ದೇನೆ. ಈಗಾಗಲೇ ಇದರ ಬಗ್ಗೆ ಸಭೆ ನಡೆಯುತ್ತಿದೆ. ಈ ವೈರಸ್ ಎರಡು ಮಕ್ಕಳಲ್ಲಿ ಕಾಣಿಸಿಕೊಂಡಿದೆ ಎಂದರು.ನಕ್ಸಲರ ಶರಣಾಗತಿ ವಿಚಾರವಾಗಿ ಪ್ರತಿಕ್ರಿಯಿಸಿ, ನಕ್ಸಲರಿಗೆ ಶರಣಾಗಿ ಎಂದು ನಾನೇ ಕರೆ ಕೊಟ್ಟಿದ್ದೇನೆ.

ಬಹುಶಃ ಅವರ ಮನಃ ಪರಿವರ್ತನೆ ಆಗುತ್ತೆ ಅಂತ ನಾನು ಅಂದುಕೊಂಡಿದ್ದೇನೆ. ನನ್ನೊಂದಿಗೆ ಮಾತನಾಡಿಲ್ಲ, ಮನಃ ಪರಿವರ್ತನೆ ಆಗುವ ಸಾಧ್ಯತೆ ಇದೆ ಎಂದು ಹೇಳಿದರು. ವಿದೇಶದಿಂದ ಬರುವವರೆಗೆ ಸ್ಕ್ರೀನಿಂಗ್ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನೋಡೋಣ, ಆರೋಗ್ಯ ಇಲಾಖೆಯವರು ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನ ತೆಗೆದುಕೊಳ್ಳುವುದಕ್ಕೆ ಹೇಳಿದ್ದೇನೆ. ಸರ್ಕಾರ ಏನೇನು ಕ್ರಮ ಬೇಕೋ ಅದನ್ನು ತೆಗೆದುಕೊಳ್ಳುತ್ತದೆ. ದಿನೇಶ್ ಗುಂಡೂರಾವ್ ಸಭೆ ಮಾಡುತ್ತಿದ್ದಾರೆ, ಅಗತ್ಯ ಬಿದ್ದರೆ ನಾನು ಸಭೆ ಮಾಡುತ್ತೇನೆ ಎಂದರು.

What is HMPV virus? How is it spread?:

ಹ್ಯೂಮನ್ ಮೆಟಾನ್ಯೂಮೋ ವೈರಸ್ (HMPV) ಎಂಬುದು ಉಸಿರಾಟಕ್ಕೆ ಸಂಬಂಧಿಸಿದ ವೈರಸ್. ಹೆಚ್ಚಿನ ಜನರಲ್ಲಿ ಕಡಿಮೆ ತೀವ್ರತೆಯ (ಶೀತ ತರಹದ ಲಕ್ಷಣ) ರೋಗಲಕ್ಷಣಗಳು ಕಂಡುಬರುತ್ತವೆ. ಅಲ್ಲದೆ ಮಕ್ಕಳು, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಬ್ರಾಂಕೈಟಿಸ್ ಮತ್ತು ನ್ಯುಮೋನಿಯಾದಂತಹ ತೀವ್ರ ಲಕ್ಷಣಗಳು ಕಾಣಿಸುತ್ತವೆ.

What are the symptoms?:

  • ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ ತಿಳಿಸುವ ಪ್ರಕಾರ, HMPV ವೈರಸ್ ರೋಗಲಕ್ಷಣಗಳು ಚಳಿಗಾಲದಲ್ಲಿ ಸಾಮಾನ್ಯವಾದ ಇತರ ವೈರಲ್ ಸೋಂಕುಗಳಂತೆಯೇ ಇರುತ್ತವೆ.
  • ಜ್ವರ, ಕೆಮ್ಮು, ಮೂಗು ಕಟ್ಟುವಿಕೆ, ಉಸಿರಾಟದ ಸಮಸ್ಯೆಯಾಗುತ್ತದೆ.
  • ಸೋಂಕಿನ ಕ್ಲಿನಿಕಲ್ ರೋಗಲಕ್ಷಣಗಳು ಹೆಚ್ಚಾಗುತ್ತವೆ, ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ವೈರಸ್​ ಉಸಿರಾಟದ ಸೋಂಕುಗಳಿಗೂ ಕಾರಣವಾಗುವಂತಹ ಇತರ ವೈರಸ್‌ಗಳಂತೆ ಇದೆ.
  • ಸೋಂಕಿನ ತೀವ್ರತೆ 2ರಿಂದ 6 ದಿನಗಳವರೆಗೆ ಇರುತ್ತದೆ. ಸೋಂಕಿಗೆ ಒಳಗಾದವರಲ್ಲಿ ಮೂರರಿಂದ ಆರು ದಿನಗಳ ಬಳಿಕ ಈ ವೈರಸ್​ನ ರೋಗಲಕ್ಷಣಗಳು ಕಂಡುಬರುತ್ತವೆ.
  • ಅನಾರೋಗ್ಯದ ಸಮಯದಲ್ಲಿ ವೈರಸ್​ನ ಅದರ ತೀವ್ರತೆ ಅವಲಂಬಿಸಿ ಬದಲಾಗುವ ಸಾಧ್ಯತೆ ಇದೆ.

How to prevent HMPV virus?:

  • ಹೊರಗಡೆ ಹೋಗಿ ಮನೆಗೆ ವಾಪಸ್​ ಬಂದಾಗ ಸೋಪು ಅಥವಾ ಸಾಬೂನಿನಿಂದ ಕೈ ತೊಳೆಯಿರಿ.
  • ನಿಮ್ಮ ಕೈಗಳಿಂದ ಆಗಾಗ ಕಣ್ಣು, ಮೂಗು, ಬಾಯಿಯನ್ನು ಮುಟ್ಟುವುದನ್ನು ತಪ್ಪಿಸಬೇಕು.
  • ಸೋಂಕಿಗೆ ಒಳಗಾದವರೊಂದಿಗೆ ಅಂತರ ಕಾಯ್ದುಕೊಳ್ಳುವುದು ಉತ್ತಮ. ನೀವು ವೈರಸ್‌ನ ಲಕ್ಷಣಗಳನ್ನು ಹೊಂದಿದ್ದರೆ, ಜನರ ಗುಂಪಿನಲ್ಲಿ ಬೆರೆಯಬೇಡಿ.
  • ಕೆಮ್ಮುವಾಗ ಹಾಗೂ ಸೀನುವಾಗ ಕೈ, ಬಾಯಿಯನ್ನು ಮುಚ್ಚಿಕೊಳ್ಳಿ.
  • ಈ ಸೋಂಕಿತರು ಬಳಸಿದ ಕಪ್‌, ತಟ್ಟೆ ಹಾಗೂ ಪಾತ್ರೆಗಳನ್ನು ಉಪಯೋಗಿಸಬೇಡಿ.
  • ಸೋಂಕಿತರು ಅನಾರೋಗ್ಯದ ವೇಳೆಯಲ್ಲಿ ಮನೆಯಲ್ಲೇ ಇರುವುದು ಒಳ್ಳೆಯದು.

ಇದನ್ನು ಓದಿರಿ : PYARI DIDI SCHEME FOR WOMEN : ದೆಹಲಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ₹2,500

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

CRICKET : ಆಸೀಸ್ ವಿರುದ್ಧ ಒಂದೇ ಒಂದು ಪಂದ್ಯ

Hyderabad News: ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್​ ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯಲ್ಲಿ ಭಾರತದ ಯುವ ಆಟಗಾರ ಒಂದೇ ಒಂದು ಪಂದ್ಯ ಆಡದಿದ್ದರು ಕೋಟಿಗಟ್ಟಲೇ ಸಂಪಾದನೆ ಮಾಡಿದ್ದಾರೆ.ಜಾಹೀರಾತುಗಳಿಂದ...

HARBHAJAN SINGH : ಕನ್ನಡಿಗ ಇರುವ ತನಕ ತಂಡದಲ್ಲಿ ಎಲ್ಲವೂ ಚೆನ್ನಾಗಿತ್ತು,

Hyderabad News: ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್​ ಸರಣಿಯಲ್ಲಿ ಭಾರತ ಕಳಪೆ ಪ್ರದರ್ಶನ ತೋರಿರುವ ಕುರಿತು HARBHAJAN SINGH ​ಅಸಮಾಧಾನ ಹೊರಹಾಕಿದ್ದಾರೆ. ಕಳೆದ ವರ್ಷ ತವರಿನಲ್ಲಿ...

ICC CHAMPIONS TROPHY : ಶಾಕಿಂಗ್ ನ್ಯೂಸ್! ಚಾಂಪಿಯನ್ಸ್ ಟ್ರೋಫಿಗೂ ಮೊದಲೇ ಭಾರತಕ್ಕೆ ಆಘಾತ

Hyderabad News: ICC CHAMPIONS TROPHY ಮೊದಲೇ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದ್ದು, ವೇಗದ ಬೌಲರ್​ ಈ ಸರಣಿ ಆಡುವುದು ಅನುಮಾನ ಎನ್ನಲಾಗುತ್ತಿದೆ.ಪಾಕಿಸ್ತಾನ ಇದರ ಆತಿಥ್ಯ...

LPG CONNECTIONS : ಗೃಹಬಳಕೆ ಎಲ್ಪಿಜಿ ಸಂಪರ್ಕಗಳ ಸಂಖ್ಯೆ ದಶಕದಲ್ಲಿ ದ್ವಿಗುಣ

New Delhi News: ಸಬ್ಸಿಡಿ ದರದಲ್ಲಿ ಅಡುಗೆ ಅನಿಲ ಪಡೆಯುವ ಬಡ ಕುಟುಂಬಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿಯಲ್ಲಿ 10.33 ಕೋಟಿ ಎಲ್​​ಪಿಜಿ...