spot_img
spot_img

ಸಿಎನ್​ಜಿ ಬೆಲೆ 4 ರಿಂದ 6 ರೂ. ಹೆಚ್ಚಳ ಸಾಧ್ಯತೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ನವದೆಹಲಿ: ಅನಿಲ ವಿತರಕರಿಗೆ ಪೂರೈಸಲಾಗುವ ಅಗ್ಗದ ದೇಶೀಯ ಅನಿಲ ಪೂರೈಕೆಯನ್ನು ಸರ್ಕಾರ ಸುಮಾರು ಶೇಕಡಾ 20 ರಷ್ಟು ಕಡಿತಗೊಳಿಸಿ ದೇಶಾದ್ಯಂತ ಸಂಕುಚಿತ ನೈಸರ್ಗಿಕ ಅನಿಲ (ಸಿಎನ್​ಜಿ) ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ.
ಅಕ್ಟೋಬರ್ 16 ರಿಂದ ಕಂಪನಿಗೆ ಶೇಕಡಾ 21ರಷ್ಟು ಕಡಿಮೆ ಎಪಿಎಂ ಅನಿಲ ಪೂರೈಕೆಯಾಗುತ್ತಿರುವುದರಿಂದ ಕಂಪನಿಯ ಲಾಭ ಕಡಿಮೆಯಾಗುತ್ತಿದೆ ಎಂದು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ಹೇಳಿದೆ.
ಸರ್ಕಾರವು ಬೆಲೆ-ನಿಯಂತ್ರಿತ ದೇಶೀಯ ಅನಿಲ ಸಿಎನ್​ಜಿ ವಾಹನಗಳ ಚಾಲಕರಿಗೆ ಮತ್ತು ಮನೆಗಳಿಗೆ ಮಾರಾಟ ಮಾಡಲು ಅನಿಲ ವಿತರಕರಿಗೆ ಹಂಚಿಕೆ ಮಾಡುತ್ತದೆ.
ಈ ರೀತಿಯ ಅನಿಲ ಪೂರೈಕೆಯನ್ನು ಸದ್ಯ ಸರ್ಕಾರವು ಶೇ 20ರಷ್ಟು ಕಡಿತ ಮಾಡಿದೆ.
ಮಂಗಳವಾರದವರೆಗೆ ಸುಮಾರು ಶೇ 68ರಷ್ಟು ಮತ್ತು ಕಳೆದ ಅಕ್ಟೋಬರ್​ನಲ್ಲಿ ಸುಮಾರು ಶೇ 88 ಕ್ಕಿಂತ ತೀವ್ರವಾಗಿ ಕಡಿಮೆಯಾಗಿದೆ.
ಮಾರಾಟ ಮಾಡುವ ಸಿಎನ್​ಜಿ ಮಾರಾಟದ ಸುಮಾರು ಶೇ 50 ಕ್ಕೆ ಇಳಿದಿದೆ.
ನೈಸರ್ಗಿಕ ಅನಿಲವನ್ನು ಅರೇಬಿಯನ್ ಸಮುದ್ರ, ಬಂಗಾಳ ಕೊಲ್ಲಿಗಳಲ್ಲಿ ಸಮುದ್ರ ತಳಗಳು ಸೇರಿದಂತೆ ಭಾರತದೊಳಗೆ ನೆಲದಾಳದಿಂದ ಪಂಪ್ ಮಾಡಿ ಹೊರ ತೆಗೆಯಲಾಗುತ್ತದೆ.
ಪಂಪ್ ಮಾಡಿ ಹೊರತೆಗೆಯಲಾದ ಅನಿಲವನ್ನು ವಾಹನಗಳಲ್ಲಿ ಬಳಸಲು ಸಿಎನ್​ಜಿಯಾಗಿ ಮತ್ತು ಮನೆಗಳಲ್ಲಿ ಬಳಸಲು ಅಡುಗೆ ಅನಿಲವಾಗಿ ಪರಿವರ್ತಿಸಲಾಗುತ್ತದೆ.
ಸರ್ಕಾರದಿಂದ ನಿಯಂತ್ರಿಸಲ್ಪಡುವ ಮತ್ತು ನಗರ ಅನಿಲ ಚಿಲ್ಲರೆ ವ್ಯಾಪಾರಿಗಳಿಗೆ ಪೂರೈಸಲಾಗುವ ಸಾಂಪ್ರದಾಯಿಕ ತೈಲ ಉತ್ಪಾದನೆಯು ನೈಸರ್ಗಿಕವಾಗಿ ವಾರ್ಷಿಕ ಶೇಕಡಾ 5 ರಷ್ಟು ಕುಸಿಯುತ್ತಿದೆ.
ನಗರ ಅನಿಲ ಚಿಲ್ಲರೆ ವ್ಯಾಪಾರಿಗಳಿಗೆ ಪೂರೈಸಲಾಗುವ ಸಿಎನ್​ಜಿಯ ಪೂರೈಕೆಯನ್ನು ಕಡಿಮೆ ಮಾಡಲಾಗಿದೆ ಎಂದುತಿಳಿಸಿವೆ.
ನಗರ ಅನಿಲ ಚಿಲ್ಲರೆ ವ್ಯಾಪಾರಿಗಳು ಈ ಪೂರೈಕೆ ಕೊರತೆಯನ್ನು ಸರಿದೂಗಿಸಲು ದುಬಾರಿ ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್ ಜಿ)ವನ್ನು ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗುತ್ತಿದೆ.
ಸಿಎನ್​ಜಿ ಬೆಲೆ ಕೆಜಿಗೆ 4 ರಿಂದ 6 ರೂ.ಗಳಷ್ಟು ಹೆಚ್ಚಾಗಲಿದೆ ಎಂದು ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ತಿಳಿಸಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

IRAN SATELLITES : ದೇಶೀಯವಾಗಿ ತಯಾರಿಸಿದ 3 ಉಪಗ್ರಹಗಳನ್ನು ಅನಾವರಣಗೊಳಿಸಿದ ಇರಾನ್

Tehran News: IRAN SATELLITES ತಾನು ದೇಶೀಯವಾಗಿ ತಯಾರಿಸಿದ ಮೂರು ಉಪಗ್ರಹಗಳನ್ನು ಅನಾವರಣಗೊಳಿಸಿದೆ. ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಚಿವ...

AAMIR KHAN : ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಆ ದಿನವನ್ನು ಎಂದಿಗೂ ಮರೆಯಲಾಗದು

Hyderabad News: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಇಂಗ್ಲೆಂಡ್​ ವಿರುದ್ಧದ ರೋಚಕ 5ನೇ ಟಿ20 ಪಂದ್ಯಕ್ಕೆ ನಟ AAMIR KHAN ​ ಕೂಡಾ ಸಾಕ್ಷಿಯಾಗಿದ್ದರು....

VIRAT KOHLI RANJI TROPHY : ವಿರಾಟ್ ಕೊಹ್ಲಿ ಔಟ್ ಮಾಡುವುದರ ಹಿಂದೆ ಬಸ್ ಚಾಲಕನ ಮಾಸ್ಟರ್ ಪ್ಲಾನ್

New Delhi News: VIRAT KOHLI RANJI TROPHY​ ಪಡೆಯುತ್ತಿದ್ದಂತೆ ಹಿಮಾಂಶು ಸಾಂಗ್ವಾನ್​ ಕುರಿತು ಭಾರೀ ಚರ್ಚೆಯಾಗಿದ್ದವು. ವಿಶ್ವದ ಶ್ರೇಷ್ಠ ಬ್ಯಾಟರ್​ನನ್ನೇ ಔಟ್​ ಮಾಡಿದ ಹಿಮಾಂಶು...

DEEP RESEARCH : ಮತ್ತೊಂದು ಏಜೆಂಟ್ ಪರಿಚಯಿಸಿದ ಓಪನ್ಎಐ

Deep Research: ಹಣಕಾಸು, ನೀತಿ, ವಿಜ್ಞಾನ ಮತ್ತು ಎಂಜಿನಿಯರಿಂಗ್ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಮತ್ತು ಆಳ ಮತ್ತು ವಿಶ್ವಾಸಾರ್ಹ ಸಂಶೋಧನೆಯ ಅಗತ್ಯವಿರುವವರಿಗಾಗಿ ಇದನ್ನು ರಚಿಸಲಾಗಿದೆ...