spot_img
spot_img

ಕೋಸ್ಟಲ್ ಫ್ರೆಂಡ್ಸ್ ​ವತಿಯಿಂದ ಅನಾಥ ಮಕ್ಕಳಿಗೆ ‘ಸಾಂತ್ವನ ಸಂಚಾರ’

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಮಂಗಳೂರು(ದಕ್ಷಿಣ ಕನ್ನಡ): ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ವತಿಯಿಂದ ಅನಾಥ ಮಕ್ಕಳಿಗಾಗಿ ಸಾಂತ್ವನ ಸಂಚಾರ ಎಂಬ ಸಾಮಾಜಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೋಸ್ಟಲ್ ಫ್ರೆಂಡ್ಸ್ ಸಂಘಟನೆ ಅನಾಥ ಮಕ್ಕಳಿಗೆ ಸಾಂತ್ವನ ಸಂಚಾರ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಈ ಬಗ್ಗೆ ಕಾರ್ಯಕ್ರಮದ ಸಂಯೋಜಕ ನಝೀರ್‌ ಬೆದ್ರೋಡಿ ಮಾತನಾಡಿ, “ನಾವು ಮಕ್ಕಳನ್ನು ‘ಅನಾಥರು’ ಎಂದು ಕರೆಯುವುದಿಲ್ಲ. ಅವರು ನಮ್ಮ ಕುಟುಂಬದ ಸದಸ್ಯರೆಂದು ನೋಡಿದ್ದೇವೆ. ಬೇರೆ ಮಕ್ಕಳಂತೆ ಈ ಮಕ್ಕಳು ಖುಷಿ ಅನುಭವಿಸಬೇಕು ಎಂದು ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಸುಮಾರು 87 ಅನಾಥ ಮಕ್ಕಳನ್ನು ಆಯ್ದುಕೊಂಡಿದ್ದೇವೆ” ಎಂದರು.

ಪಾಲಕರ ಅನುಮತಿ ಪಡೆದು ಮಕ್ಕಳನ್ನು ಅವರಿದ್ದ ಸ್ಥಳದಿಂದಲೇ ಕರೆದುಕೊಂಡು ಬಂದು ಮಂಗಳೂರಿನ ಖ್ಯಾತ ಹೋಟೆಲ್​ನಲ್ಲಿ ಉಪಹಾರ, ಪಿಲಿಕುಳ ಮೃಗಾಲಯ, 3ಡಿ ಪ್ಲಾನಿಟೋರಿಯಂ, ಮಧ್ಯಾಹ್ನ ನಂತರ ರೆಸಾರ್ಟ್​ನಲ್ಲಿ ಆಟೋಟ, ಮನೋರಂಜನೆ ಕಾರ್ಯಕ್ರಮ ನಡೆಸಿ ನಂತರ ಅವರನ್ನು ಸುರಕ್ಷಿತವಾಗಿ ಮನೆಗೆ ಬಿಟ್ಟು ಬರಲಾಗುತ್ತದೆ.

ಬಾಲಕಿಯರ ನಿಗಾಕ್ಕೆ ಮಹಿಳಾ ಸದಸ್ಯರು, ಬಾಲಕರ ನಿಗಾಕ್ಕೆ ಪುರುಷ ಸದಸ್ಯರನ್ನು ನಿಯೋಜಿಸಲಾಗಿದೆ. ಇಷ್ಟೇ ಅಲ್ಲದೇ ಪ್ರತಿ ಮಕ್ಕಳಿಗೂ ಸುಮಾರು 10 ಸಾವಿರ ಮೌಲ್ಯದ ಗಿಫ್ಟ್​ ಅನ್ನು ಸಹ ನೀಡಲಾಗುತ್ತಿದೆ.

“ಅನೇಕರು ಈ ಕಾರ್ಯಕ್ರಮಕ್ಕೆ ತಮ್ಮ ಬೆಂಬಲ ನೀಡಿ ಆರ್ಥಿಕ ಸಹಾಯ ಮಾಡಿದ್ದಾರೆ. ಈ ವಿಶೇಷ ಪ್ರಯತ್ನವು ಸಮಾಜದಲ್ಲಿ ಪ್ರೀತಿ ಮತ್ತು ಸಮಾನತೆಯ ಸಂದೇಶವನ್ನು ಹಂಚಲಿದೆ.

ಕಲಾ ಕಾರ್ಯಕ್ರಮಗಳು, ಮನರಂಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮೂಲಕ ಮಕ್ಕಳನ್ನು ಮನರಂಜಿಸಲು ವ್ಯವಸ್ಥೆ ಮಾಡಲಾಗಿದೆ. ಈ ಪ್ರಯತ್ನವು ಮಕ್ಕಳ ಮನಸ್ಸಿನಲ್ಲಿ ಸಂತೋಷ ಮೂಡಿಸಲಿದೆ” ಎಂದು ಹೇಳಿದರು.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SPECIAL VILLAGE SAGA : 20 ಕುಟುಂಬ, 60 ಜನರಿರುವ ಒಂದು ಹಳ್ಳಿಯ ಕಥೆ: ಸ್ವಾವಲಂಬನೆಯ ಯಶೋಗಾಥೆ

Nalgonda, Telangana News: ಮೂಡು ಗುಡಿಸೆಲಾ ತಾಂಡಾ ಅಂದರೆ ಮೂರು ಗುಡಿಸಲುಗಳ ತಾಂಡಾ ಎಂಬ ಈ ವಿಶಿಷ್ಟ ತಾಂಡಾವನ್ನು 70 ವರ್ಷಗಳ ಹಿಂದೆ ನೇನಾವತ್ ಚಂದ್ರು...

ULLAL BANK ROBBERY : ಎಲ್ಲ ಟೋಲ್ಗಳಲ್ಲಿ ತಪಾಸಣೆ ಮಾಡುವಂತೆ ಸಿಎಂ ಸೂಚನೆ

Mangalore News: ಕೋಟೆಕಾರು ULLAL BANK ROBBERY ಪ್ರಕರಣ ಬಗ್ಗೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಿಎಂ, ಎಲ್ಲ ಟೋಲ್​ಗಳಲ್ಲಿ ತಪಾಸಣೆ ಹಾಗೂ ಕೇರಳ ಗಡಿಯಲ್ಲಿನ ಸಿಸಿ...

HIGH COURT : ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ

Bangalore News: HIGH COURT ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಕೋರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ...

SAIF ALI KHAN : ಸೈಫ್ ಐಸಿಯುನಿಂದ ಹೊರಕ್ಕೆ, ತನಿಖೆಗೆ 20 ಪೊಲೀಸ್ ತಂಡಗಳ ರಚನೆ

Mumbai (Maharashtra) News: ಬಾಲಿವುಡ್​​ ನಟ SAIF ಅಲಿ ಖಾನ್ ಅವರ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ.ಈ ಘಟನೆ ಬಾಲಿವುಡ್ ಮಾತ್ರವಲ್ಲದೇ...