spot_img
spot_img

CONGRESS DECLARED 70 CANDIDATES : ದೆಹಲಿ ವಿಧಾನಸಭೆ ಚುನಾವಣೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

New Delhi News:

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಅಧಿಕಾರದ ಗದ್ದುಗೆ ಏರಲು ಹವಣಿಸುತ್ತಿರುವ CONGRESS ಎಲ್ಲ 70 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.ದೆಹಲಿ ವಿಧಾನಸಭೆ ಚುನಾವಣೆಯನ್ನು ಗೆದ್ದೇ ತೀರುವಂತೆ ಸಿದ್ಧತೆ ನಡೆಸುತ್ತಿರುವ CONGRESS ಎಲ್ಲ 70 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಅಖೈರು ಮಾಡಿದೆ. ಬಾಕಿ ಉಳಿಸಿಕೊಂಡಿದ್ದ 2 ಸ್ಥಾನಗಳಿಗೂ ಗುರುವಾರ ಉಮೇದುವಾರರನ್ನು ಪ್ರಕಟಿಸಿತು.

ಬುಧವಾರ 5 ಕ್ಷೇತ್ರಗಳಾದ ಬವಾನಾ (ಎಸ್​ಸಿ) ಕ್ಷೇತ್ರದಿಂದ ಸುರೇಂದ್ರಕುಮಾರ್​, ರೋಹಿಣಿ ಕ್ಷೇತ್ರದಿಂದ ಸುಮೇಶ್​ ಗುಪ್ತಾ, ಕರೋಲ್​ಬಾಗ್​ (ಎಸ್​ಸಿ) ಕ್ಷೇತ್ರದಿಂದ ರಾಹುಲ್​ ಧನಕ್​, ತುಘಲಕಾಬಾದ್​ನಿಂದ ವೀರೇಂದ್ರ ಬಿಧೂರಿ ಮತ್ತು ಬದರ್​ಪುರದಿಂದ ಅರ್ಜುನ್​ ಭದಾನ ಅವರನ್ನು ಕಣಕ್ಕಿಳಿಸಿತ್ತು.ಇದುವರೆಗೂ 68 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದ CONGRESS​ ಇಂದು ತಿಮಾರ್​ಪುರ ಮತ್ತು ರೋಹ್ತಾಸ್​ ನಗರ ಕ್ಷೇತ್ರಗಳಿಗೆ ಇಬ್ಬರನ್ನು ಘೋಷಿಸಿತು.

ತಿಮಾರ್​ಪುರದಿಂದ ಲೋಕೇಂದ್ರ ಚೌಧರಿ, ಸುರೇಶ್ ವತಿ ಚೌಹಾಣ್ ಅವರನ್ನು ರೋಹ್ತಾಸ್ ನಗರದಿಂದ ಸ್ಪರ್ಧಿಸಲಿದ್ದಾರೆ.CONGRESS​ ಮಂಗಳವಾರ 15 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ಪಟೇಲ್​ ನಗರದಿಂದ ಕೇಂದ್ರ ಮಾಜಿ ಸಚಿವ ಕೃಷ್ಣಾ ತೀರತ್​​, ಓಖ್ಲಾ ಕ್ಷೇತ್ರದಿಂದ ಆರಿಬಾ ಖಾನ್​ ಅವರನ್ನು ಕಣಕ್ಕಿಳಿಸಿತ್ತು.

CM Atishi Vs Alka Lamba: ಚುನಾವಣಾ ಕಣದಲ್ಲಿ ಕಲ್ಕಾಜಿ ಕ್ಷೇತ್ರವು ಜಿದ್ದಾಜಿದ್ದಿನ ಕ್ಷೇತ್ರವಾಗಿದೆ. ಆಮ್​ ಆದ್ಮಿ ಪಕ್ಷದ (ಆಪ್​) ಅಭ್ಯರ್ಥಿ, ಸಿಎಂ ಅತಿಶಿ ವಿರುದ್ಧ CONGRESS​ ತನ್ನ ಪಕ್ಷದ ಫೈರ್​​ಬ್ರ್ಯಾಂಡ್​, ಮಾಜಿ ಶಾಸಕಿ ಅಲ್ಕಾ ಲಂಬಾ ಅವರನ್ನು ಕಣಕ್ಕಿಳಿಸಿದೆ.

ಮಾಜಿ ಸಿಎಂ ಅರವಿಂದ್​​ ಕೇಜ್ರಿವಾಲ್​ ಅವರ ವಿರುದ್ಧ ಮಾಜಿ ಸಂಸದ ಸಂದೀಪ್ ದೀಕ್ಷಿತ್ ಅವರನ್ನು ಎದುರಾಳಿಯಾಗಿ ಕಣಕ್ಕೆ ಇಳಿಸಿದೆ.ವಿಪಕ್ಷಗಳ I.N.D.I.A. ಕೂಟದ ಎರಡು ಪ್ರಮುಖ ಪಕ್ಷಗಳಾದ CONGRESS​ ಮತ್ತು ಆಪ್​ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಪ್ರತಿಸ್ಪರ್ಧಿಗಳಾಗಿವೆ. ಇಲ್ಲಿ ಬಿಜೆಪಿಯೂ ಕಠಿಣ ಸ್ಪರ್ಧೆ ನೀಡಿದ್ದರೂ, ಕಾಂಗ್ರೆಸ್​ ಮತ್ತು ಆಪ್​ ನಡುವಿನ ಹೋರಾಟ ಗಮನಾರ್ಹವಾಗಿದೆ.

ಫೆಬ್ರವರಿ 5 ರಂದು ದೆಹಲಿ ವಿಧಾನಸಭೆಗ ಮತದಾನ ನಡೆಯಲಿದ್ದು, ಫೆಬ್ರವರಿ 8 ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನು ಓದಿರಿ : GAZA TRUCE HOSTAGE RELEASE : ಹಮಾಸ್-ಇಸ್ರೇಲ್ ಕದನ ವಿರಾಮ

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

WOMAN DONATES 35 YEARS OF SAVINGS:35 ವರ್ಷದ ಉಳಿತಾಯದ ಹಣವನ್ನು ಶಿಕ್ಷಣ ಸಂಸ್ಥೆಗೆ ದಾನ ಮಾಡಿದ ಮಹಿಳೆ.

Tirupati (Andhra Pradesh) News: ರೇಣಿಗುಂಟದ ಸಿ.ಮೋಹನ ದಾನ ಮಾಡಿದ WOMAN. ಇವರು ವಿಶ್ವಸಂಸ್ಥೆಯ ಅಭಿವೃದ್ಧಿ ಮತ್ತು ನಿರ್ವಹಣೆ ವಲಯದಲ್ಲಿ ಕೊಸೊವೊ, ಅಲ್ಬೇನಿಯಾ, ಯೆಮೆನ್, ಸೌದಿ...

BOMB THREAT CALLS TO AIRLINES : 2024ರಲ್ಲಿ ವಿಮಾನಗಳಿಗೆ ಬಂದಿದ್ದು ಬರೋಬ್ಬರಿ 728 ಹುಸಿ ಬಾಂಬ್ ಕರೆ, ಇಂಡಿಗೋಗೆ ಅತಿ ಹೆಚ್ಚು

New Delhi News: 2024ರಲ್ಲಿ ಒಟ್ಟು 728 ಹುಸಿ ಬಾಂಬ್​ ಕರೆಗಳು ವಿವಿಧ ವಿಮಾನಯಾನ ಸಂಸ್ಥೆಗಳಿಗೆ ಬಂದಿವೆ. ಅದರಲ್ಲಿ 714 ದೇಶಿಯ ವಿಮಾನ ಸಂಸ್ಥೆಗಳಿಗೆ ಬಂದಿವೆ....

HOUSE BURGLAR ARREST : ಪ್ರೊಪೆಷನಲ್ ಬಾಕ್ಸರ್ನಿಂದ 150ಕ್ಕೂ ಹೆಚ್ಚು ಮನೆಗಳ್ಳತನ

Bangalore News: HOUSE BURGLAR ARREST  ಬಾಕ್ಸಿಂಗ್ ಬಿಟ್ಟು ಕಳ್ಳತನಕ್ಕಿಳಿದು, 150ಕ್ಕೂ ಹೆಚ್ಚು ಮನೆಗೆ ಕನ್ನ ಹಾಕಿದ್ದ ಕುಖ್ಯಾತ ಅಂತಾರಾಜ್ಯ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.ಸೋಲ್ಹಾಪುರದ ಮಂಗಳವಾರ್...

IRAN SATELLITES : ದೇಶೀಯವಾಗಿ ತಯಾರಿಸಿದ 3 ಉಪಗ್ರಹಗಳನ್ನು ಅನಾವರಣಗೊಳಿಸಿದ ಇರಾನ್

Tehran News: IRAN SATELLITES ತಾನು ದೇಶೀಯವಾಗಿ ತಯಾರಿಸಿದ ಮೂರು ಉಪಗ್ರಹಗಳನ್ನು ಅನಾವರಣಗೊಳಿಸಿದೆ. ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಚಿವ...