Bangalore News:
ಅತಿಯಾದ ಜಾಹೀರಾತುಗಳಿಂದ ಸಿನಿಮಾ ಪ್ರದರ್ಶನವನ್ನು ತಡ ಮಾಡಿದ್ದರಿಂದ ಗ್ರಾಹಕರ ಸಮಯ ವ್ಯರ್ಥವಾಗಿದೆ ಎಂದು ಪಿವಿಆರ್ಗೆ CONSUMER COURTವ್ಯಾಜ್ಯ ಪರಿಹಾರ ಆಯೋಗ ದಂಡ ವಿಧಿಸಿದೆ. ನಗರದ ಮಲ್ಲೇಶ್ವರದ ಅಭಿಷೇಕ್ ಎಂಬುವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರು ನಗರ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷರಾದ ಎಂ.ಶೋಭಾ, ಸದಸ್ಯರಾದ ಕೆ.ಅನಿತಾ ಶಿವಕುಮಾರ್ ಮತ್ತು ಸುಮಾ ಅನಿಲ್ ಕುಮಾರ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ನಿಗದಿತ ಸಮಯ ಮೀರಿ ಅತಿಯಾದ ಜಾಹೀರಾತು ಪ್ರಸಾರ ಮಾಡುವ ಮೂಲಕ CONSUMER COURT ಸಮಯ ವ್ಯರ್ಥ ಮಾಡಿದ್ದರ ಪರಿಣಾಮ ಪಿವಿಆರ್ ಸಿನಿಮಾ ಮತ್ತು ಪಿವಿಆರ್ ಐನಾಕ್ಸ್ ಲಿಮಿಟೆಡ್‌ಗೆ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಒಂದು ಲಕ್ಷ ರೂ.ಗಳ ದಂಡ ವಿಧಿಸಿದೆ. CONSUMER COURT ಈ ಮೊತ್ತವನ್ನು ಗ್ರಾಹಕರ ಕಲ್ಯಾಣ ನಿಧಿಗೆ ಪಾವತಿಸಲು ಆದೇಶಿಸಿದೆ.
ಜೊತೆಗೆ, ಅತಿಯಾದ ಜಾಹೀರಾತು ಪ್ರದರ್ಶನದಿಂದ ದೂರುದಾರರಿಗೆ ಉಂಟಾದ ಅನಾನುಕೂಲತೆ ಮತ್ತು ಮಾನಸಿಕ ತೊಂದರೆಗಾಗಿ 20,000 ರೂ, ಪ್ರಕರಣದ ಕಾನೂನು ಹೋರಾಟದ ವೆಚ್ಚ ಭರಿಸಲು 8,000 ರೂ. ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
Time is of the utmost importance:
ಸದ್ಯ ಸಮಯಕ್ಕೆ ಅತ್ಯಂತ ಮೌಲ್ಯವಿದೆ. ಗ್ರಾಹಕರ ಸಮಯ ಮತ್ತು ಹಣದಿಂದ ಅನ್ಯಾಯದ ರೀತಿಯಲ್ಲಿ ಲಾಭ ಪಡೆಯುವ ಹಕ್ಕನ್ನು ಯಾವುದೇ ವ್ಯವಹಾರ ಹೊಂದಿಲ್ಲ. CONSUMER COURT ಜಾಹೀರಾತುಗಳನ್ನು ವೀಕ್ಷಿಸಲೆಂದೇ ಜನರು 25 ರಿಂದ 30 ನಿಮಿಷಗಳನ್ನು ಕಳೆಯುವುದು ಒತಡದ ವ್ಯಕ್ತಿಗಳಿಗೆ ಸಮಯ ವ್ಯರ್ಥವಾಗುತ್ತದೆ.
ಜನರು ವಿಶ್ರಾಂತಿಗಾಗಿ ಮನರಂಜನೆಯನ್ನು ಬಯಸುತ್ತಾರೆ. ಸಿನಿಮಾ ನೋಡುವುದೆಂದರೆ ಅವರಿಗೆ ಬೇರೆ ಯಾವುದೇ ಕೆಲಸವಿಲ್ಲ ಅಥವಾ ಜವಾಬ್ದಾರಿಗಳಿಲ್ಲ ಎಂದು ಅರ್ಥೈಸುವುದಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ. ಜೊತೆಗೆ, ಯಾವುದೇ ಚಲನಚಿತ್ರಗಳು ಪ್ರಾರಂಭವಾಗುವ ನಿಖರ ಸಮಯ ಎಷ್ಟೆಂದು ವೀಕ್ಷಕರಿಗೆ ಸ್ಪಷ್ಟವಾಗಿ ತಿಳಿಸುವಂತೆ ಸೂಚನೆ ನೀಡಿದೆ.
Maximum 10 minutes time slot only:
ದೂರುದಾರರು ಜಾಹೀರಾತುಗಳನ್ನು ಸಾಕ್ಷ್ಯವಾಗಿ ದಾಖಲಿಸಿದ್ದಾರೆ. ಇದು ಪೈರಸಿ ವಿರೋಧಿ ಕಾನೂನುಗಳನ್ನು ಉಲ್ಲಂಘನೆ ಎಂದು ಪಿವಿಆರ್ ಪರ ವಕೀಲರ ವಾದವನ್ನು ತಿರಸ್ಕರಿಸಿದ ಪೀಠ, ಕೇವಲ ಜಾಹೀರಾತುಗಳನ್ನು ಮಾತ್ರ ರೆಕಾರ್ಡ್ ಮಾಡಲಾಗಿದೆ, ಚಿತ್ರವನ್ನಲ್ಲ ಮತ್ತು ಅನೇಕ ಪ್ರೇಕ್ಷಕರ ಮೇಲೆ ಪರಿಣಾಮ ಬೀರುವ ಸಮಸ್ಯೆಯನ್ನು ಎತ್ತಿ ತೋರಿಸುವ ಕಾರಣದಿಂದಾಗಿ ರೆಕಾರ್ಡ್ ಮಾಡಲಾಗಿದೆ.
ಬೇರೆ ಉದ್ದೇಶಕ್ಕಾಗಿ ಅಲ್ಲ ಎಂದು ತಿಳಿಸಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ಪಿವಿಆರ್ ಸಿನಿಮಾ ಪ್ರದರ್ಶನಕ್ಕೂ ಮುನ್ನ ಸಾರ್ವಜನಿಕ ಸೇವಾ ಪ್ರಕಟಣೆಗಳನ್ನು ಪ್ರದರ್ಶನ ಮಾಡಬೇಕು. ಆದರೆ, ಸರ್ಕಾರದ ಈ ರೀತಿಯ ಪ್ರಕಟಣೆಗಳಿಗೆ ಗರಿಷ್ಠ 10 ನಿಮಿಷಗಳ ಸಮಯಾವಕಾಶ ಮಾತ್ರ ಇದೆ ಎಂದು ಪೀಠ ಹೇಳಿದೆ.
Background of the case:
ನಗರದ ನಿವಾಸಿ ಅಭಿಷೇಕ್ ಎಂಬುವರು 2023ರ ಡಿಸೆಂಬರ್ ‘ಶ್ಯಾಮ್ ಬಹದ್ದೂರ್’ ಸಿನಿಮಾ ಶೋಗೆ ಕುಟುಂಬ ಸದಸ್ಯರೊಂದಿಗೆ ಓರಿಯನ್ ಮಾಲ್‌ನ ಪಿವಿಆರ್ ಐನಾಕ್ಸ್‌ಗೆ ಹೋಗಿದ್ದರು. CONSUMER COURT ಟಿಕೆಟ್‌ನಲ್ಲಿ ತಿಳಿಸಿರುವಂತೆ ಸಿನಿಮಾ ಸಂಜೆ 4.05ಕ್ಕೆ ಸಿನಿಮಾ ಆರಂಭವಾಗಬೇಕಿತ್ತು.
ಆದರೆ, ದೀರ್ಘಾವಧಿಯಲ್ಲಿ ಜಾಹೀರಾತುಗಳ ಪ್ರಸಾರ ಮಾಡಿದ ನಂತರ ಚಿತ್ರ ಸಂಜೆ 4.30ಕ್ಕೆ ಆರಂಭವಾಗಿದೆ. ಇದು ತನ್ನ ಸಮಯವನ್ನು ವ್ಯರ್ಥ ಮಾಡಲಾಗಿದೆ ಎಂದು ಆರೋಪಿಸಿ ಅವರು ದೂರು ದಾಖಲಿಸಿದ್ದರು.
ಇದನ್ನು ಓದಿರಿ : Aprilia Tuono 457 Streetfighter Launched In India: Check Price, Delivery Details, Features, And More