ಕನ್ನಡದ ಬಿಗ್ಬಾಸ್ ಸೀಸನ್ 11ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಸಖತ್ ಸದ್ದು ಮಾಡುತ್ತಿದ್ದಾರೆ. ತಮ್ಮ ಹಳ್ಳಿ ಸೊಗಡಿನ ರೀತಿಯಲ್ಲೇ ಹಾಡು ಹಾಡಿ ವೀಕ್ಷಕರಿಗೆ ಮನರಂಜನೆ ನೀಡುತ್ತಿರೋ ಹನುಮಂತ ಸಖತ್ ಶೈನ್ ಆಗಿದ್ದಾರೆ.
ಈಗ ಹನುಮಂತ ಜವಾರಿ ಮಂದಿ ತಂಡದ ನಾಯಕರಾಗಿದ್ದಾರೆ. 11ರ ಅಬ್ಬರ ತಂಡದ ನಾಯಕಿ ಗೌತಮಿ ಆಗಿದ್ದಾರೆ. ಇದೇ ತಂಡಕ್ಕೆ ಬಿಗ್ಬಾಸ್ ಒಂದು ಟಾಸ್ಕ್ವೊಂದನ್ನು ಕೊಟ್ಟಿದ್ದಾರೆ. ಎರಡು ತಂಡಕ್ಕೆ ಚೆಂಡು ಅಡೆತಡೆಗಳನ್ನು ದಾಟಿ ಅಲ್ಲಿರುವ ಬುಟ್ಟಿಗೆ ಬಂದು ಬೀಳಬೇಕಾಗಿತ್ತು. ಇದೇ ಟಾಸ್ಕ್ನಲ್ಲಿ ಗೌತಮಿ, ಐಶ್ವರ್ಯಾ ಆಡುತ್ತಿದ್ದರು.
ಇದೇ ಟಾಸ್ಕ್ ಆಡದೇ ಸ್ಪರ್ಧಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಸಾಕಷ್ಟು ಚೆಂಡುಗಳನ್ನು ಹಾಕಿದ್ರೂ ಟಾಸ್ಕ್ ಆಡಲು ವಿಫಲ ಆಗುತ್ತಿದ್ದರು. ಹೀಗಾಗಿ ಜವಾರಿ ಮಂದಿ ತಂಡದ ನಾಯಕ ಹನುಮಂತ ತಾಳಲಾರದೇ ಯಾಕ್ ಆದ್ರೂ ಕ್ಯಾಪ್ಟನ್ ಆದ್ನೋ ಅಂತ ಕೂಗಾಡಿದ್ದಾನೆ.
ಇನ್ನೂ, ಇದೇ ಪ್ರೋಮೋ ನೋಡಿದ ವೀಕ್ಷಕರು ಹನುಮಂತನ ಕೂಗಾಟ ನೋಡಿ ಖುಷಿ ಆಗಿದ್ದಾರೆ. ಜೊತೆಗೆ ಅವರ ಭಾಷೆಯ ಮೂಲಕವೇ ಸಾಕಷ್ಟು ಅಭಿಮಾನಿಗಳು ಫಿದಾ ಆಗಿದ್ದಾರೆ. ಜೊತೆಗೆ ಅವರು ಹಾಡುವ ಹಾಡಿಗೂ ಸಾಕಷ್ಟು ಮಂದಿ ಅಭಿಮಾನಿಗಳು ಆಗಿದ್ದಾರೆ.