ಬೆಂಗಳೂರು/ನವದೆಹಲಿ:- ಮಹಿಳೆಯರಿಗೆ ಬಂಪರ್ ಸುದ್ದಿ ಒಂದು ಸಿಕ್ಕಿದ್ದು, ಅಡುಗೆ ಎಣ್ಣೆ ಬೆಲೆ ದಿಢೀರ್ ಕುಸಿತ ಕಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ಒಂದು ವಾರದ ಹಿಂದಷ್ಟೇ ಪ್ರತಿ ಟನ್‌ಗೆ 1,235-1,240 ಡಾಲರ್‌ಗಳಷ್ಟಿದ್ದ ಸೋಯಾಬೀನ್ ಎಣ್ಣೆಯ ಬೆಲೆ, ಬರೀ ಒಂದೇ ವಾರದಲ್ಲಿ 1,155-1,160 ಡಾಲರ್‌ಗಳಿಗೆ ಇಳಿದಿದೆ.
ಇದಲ್ಲದೆ, ಖಾದ್ಯ ತೈಲ ವಿಮರ್ಶಕರು ಇಂಡೋನೇಷ್ಯಾ ಮತ್ತು ಮಲೇಷ್ಯಾದಲ್ಲಿ ಪಾಮ್ ಮತ್ತು ಪಾಮೋಲಿನ್ ಸಂಗ್ರಹದ ಕೊರತೆಯೂ ಎದುರಾಗುತ್ತಿದೆ. ಆದರೂ ಬೆಲೆಯಲ್ಲಿ ಇಳಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಕಳೆದ ವಾರದ ಆರಂಭದಲ್ಲಿ ಹತ್ತಿಯಿಂದ ಪಡೆದ ಬೀಜಗಳನ್ನು ಕಾಟನ್ ಕಾರ್ಪೊರೇಷನ್ ಆಫ್ ಇಂಡಿಯಾ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡಿದೆ ಎಂದು ಮೂಲಗಳು ತಿಳಿಸಿವೆ . ಇದು ಇತರ ರಾಜ್ಯಗಳಲ್ಲಿ ಹತ್ತಿ ಬೆಲೆಯ ಮೇಲೆ ಪರಿಣಾಮ ಬೀರಿತು.
ಅದೇ ರೀತಿ ಕಳೆದ ವಾರಾಂತ್ಯಕ್ಕೆ ಹೋಲಿಸಿದರೆ ಶೇಂಗಾ ಎಣ್ಣೆ ಮತ್ತು ಬೀಜದ ಬೆಲೆ ಕ್ವಿಂಟಾಲ್‌ಗೆ 6,350-6,625 ರೂ.ಗೆ ಕುಸಿದಿದ್ದು, ಗುಜರಾತ್‌ನಲ್ಲಿ ರೂಪಾಯಿ 975ರಿಂದ 14,700ಕ್ಕೆ ಇಳಿಕೆಯಾಗಿದೆ ಮತ್ತು ನೆಲಗಡಲೆ ತೈಲದ ಬೆಲೆ 150 ರೂ.ಗಳಷ್ಟು ಕುಸಿದು ಪ್ರತಿ ಟಿನ್‌ಗೆ 2,220-2,520 ರೂಪಾಯಿಯಾಗಿದೆ.
ಕಚ್ಚಾ ಪಾಮ್ ಆಯಿಲ್ (ಸಿಪಿಒ) ಬೆಲೆ 900 ರೂಪಾಯಿಗಳಷ್ಟು ಕುಸಿದು ಕ್ವಿಂಟಲ್ಗೆ 12,400 ರೂಪಾಯಿಯಾಗಿದೆ. ಪಾಮೊಲಿನ್ ಬೆಲೆ ದೆಹಲಿಯಲ್ಲಿ ಕ್ವಿಂಟಲ್‌ಗೆ 850 ರೂ.ನಿಂದ 14,000 ರೂ.ಗೆ ಕುಸಿದಿದೆ ಮತ್ತು ಪಾಮೊಲಿನ್ ಎಕ್ಸ್ ಕಾಂಡ್ಲಾ ಎಣ್ಣೆಯ ಬೆಲೆ 800 ರೂ.ನಷ್ಟು ಕುಸಿದು 13,000 ರೂಪಾಯಿಯಷ್ಟು ಇಳಿಕೆಯಾಗಿದೆ.
ಇಂಡೋನೇಷ್ಯಾದಲ್ಲಿ ರಫ್ತುಗಳಲ್ಲೂ ಸುಮಾರು 30 ಪ್ರತಿಶತದಷ್ಟು ಕುಸಿತ ಕಂಡಿದೆ. ಆದರೆ ಪಾಮ್ ಮತ್ತು ಪಾಮೊಲಿನ್ ಎಣ್ಣೆಯ ಸಂಗ್ರಹವು ಹಿಂದಿನ 2.3 ಕೋಟಿ ಟನ್‌ಗಳಿಂದ ಸುಮಾರು 3 ಕೋಟಿ ಟನ್‌ಗಳಿಗೆ ಹೆಚ್ಚಾಗಿದೆ. ಈ ಮೂಲಕ ಸೆಪ್ಟೆಂಬರ್‌ನಲ್ಲಿ ಶೇ.23ರಷ್ಟು ಸಂಗ್ರಹ ಏರಿಕೆಯಾಗಿತ್ತು. ಈ ಪರಿಸ್ಥಿತಿಯಿಂದಾಗಿ, ವಿದೇಶಗಳಲ್ಲಿ ಪಾಮೋಲಿನ್ ಬೆಲೆಗಳು ಕುಸಿದವು, ಇದರ ಪರಿಣಾಮವಾಗಿ ಇತರ ತೈಲಗಳು ಮತ್ತು ಎಣ್ಣೆಕಾಳುಗಳ ಮೇಲೂ ಕಂಡುಬಂದಿದೆ ಎಂದು ಹೇಳಲಾಗಿದೆ.