spot_img
spot_img

ದೆಹಲಿ – ಕಾಶ್ಮೀರ ನಡುವೆ ನೇರ ರೈಲು ಸೇವೆಗೆ ಕ್ಷಣಗಣನೆ

spot_img
spot_img

Share post:

ಜಮ್ಮು: ಕಾಶ್ಮೀರಕ್ಕೆ ನೇರ ರೈಲು ಸೇವೆ ಆರಂಭವಾದಲ್ಲಿ ಅದು ಸಾರಿಗೆ ಉದ್ಯಮದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂಬ ಆತಂಕ ಮೂಡಿದೆ.

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ರೈಲು ಸೇವೆ ಒದಗಿಸುವ ಕನಸಿನ ಯೋಜನೆಗೆ ಭಾರತೀಯ ರೈಲ್ವೆ ಸಿದ್ಧತೆ ನಡೆಸುತ್ತಿದ್ದು, ಅಂತಿಮ ಘಟ್ಟದಲ್ಲಿದೆ. ಕಾಶ್ಮೀರಕ್ಕೆ ಒಮ್ಮೆ ರೈಲು ಸೇವೆ ಆರಂಭವಾದರೆ, ಬಹುತೇಕ ಉತ್ಪಾದನೆಗಳು ವಿಶೇಷವಾಗಿ ಇಂಧನ ಮತ್ತು ಗ್ಯಾಸ್​ ಟ್ರೈನ್​ ಮೂಲಕವೇ ಬರಲಿದೆ.

ಇದರಿಂದ ವೆಚ್ಚ ಕಡಿತಗೊಂಡು, ಅಗ್ಗದ ದರದಲ್ಲಿ ಕಣಿವೆ ಜನರು ಉತ್ಪನ್ನಗಳನ್ನು ಕೊಳ್ಳಬಹುದು. ಆದರೆ, ಇದೇ ಸಮಯದಲ್ಲಿ ಹೆದ್ದಾರಿ ಸಂಚಾರದ ಟ್ರಕ್​​ಗಳು ಮತ್ತು ಆಯಿಲ್​ ಟ್ಯಾಂಕರ್​ಗಳಿಗೆ ದೊಡ್ಡ ನಷ್ಟವಾಗಲಿದೆ.
ಇದು ಇಲ್ಲಿನ ವರ್ತಕರಲ್ಲಿ ವ್ಯಾಪಾರ ನಷ್ಟದ ಭಯ ಉಂಟು ಮಾಡಿದೆ.

ಈ ಕುರಿತು ಮಾತನಾಡಿರುವ ವರ್ತಕರು, ಕಾಶ್ಮೀರಕ್ಕೆ ನೇರ ರೈಲು ಸೇವೆ ಬಂದಲ್ಲಿ ಉದ್ಯಮ ವಲಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಸಾರಿಗೆ ಸೇವೆದಾರರು ಹೆಚ್ಚು ನಷ್ಟಕ್ಕೆ ಒಳಗಾಗಲಿದ್ದಾರೆ ಎಂದಿದ್ದಾರೆ.

ಹೆದ್ದಾರಿ ಸಂಚಾರದ ಟ್ರಕ್​​ಗಳು ಮತ್ತು ಆಯಿಲ್​ ಟ್ಯಾಂಕರ್​ಗಳಿಗೆ ದೊಡ್ಡ ನಷ್ಟವಾಗಲಿದೆ. ಕಾಶ್ಮೀರಕ್ಕೆ ಬಹುತೇಕ ಉತ್ಪನ್ನಗಳು ರೈಲು ಸೇವೆ ಮೂಲಕ ದೇಶದ ಇತರ ಭಾಗಗಳಿಂದ ನೇರವಾಗಿ ಲಭ್ಯವಾಗಲಿದ್ದು, ಸಾರಿಗೆ ಮೇಲಿನ ಅವಲಂಬನೆ ನಿಲ್ಲುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ ಎಂದು ಸಾರಿಗೆದಾರರು ತಿಳಿಸಿದ್ದಾರೆ.

ಸದ್ಯಕ್ಕೆ ಪ್ರಮುಖ ವಸ್ತುಗಳಾದ, ದಿನಸಿ, ಇಂಧನ, ಪಾತ್ರೆಗಳು, ಸರಕುಗಳು, ಹಣ್ಣುಗಳು ಮತ್ತು ಇತರ ವಸ್ತುಗಳ ಸರಬರಾಜನ್ನು ವಾಣಿಜ್ಯ ವಾಹನಗಳು ಮತ್ತು ಟ್ರಕ್‌ಗಳು ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿ – 44ರ ಮೂಲಕ ಕಾಶ್ಮೀರಕ್ಕೆ ಸರಬರಾಜು ಮಾಡುತ್ತಿದೆ. ಬೇಸಿಗೆ ಹೊರತಾಗಿ ಮೊಘಲ್ ರಸ್ತೆಯ ಮೂಲಕ ಈ ಸಂಚಾರ ಸಾಗುತ್ತದೆ.

ಜಮ್ಮು ಸಾರಿಗೆ ಅಸೋಸಿಯೇಷನ್​ ಅಧ್ಯಕ್ಷ ಅಜಿತ್​ ಸಿಂಗ್​, ರೈಲು ಸೇವೆಯಿಂದ ಕಾಶ್ಮೀರದ ಜನರು ಮತ್ತು ಪ್ರವಾಸಿಗರಿಗೆ ಲಾಭವಾಗಲಿದೆ. ಕಣಿವೆ ರಾಜ್ಯಕ್ಕೆ ತಲುಪುವ ಮಾರ್ಗವೂ ಸುಲಭವಾಗಲಿದೆ. ಆದರೆ, ಇದೇ ವೇಳೆ ಸಾರಿಗೆ ಉದ್ಯಮ ನಷ್ಟ ಹೊಂದುವ ಭಯ ಎದುರಾಗಿದೆ. ಅದರಲ್ಲೂ ಆಯಿಲ್​ ಟ್ಯಾಂಕರ್ ನಷ್ಟ ಹೆಚ್ಚಿದೆ​.

ಇವು ಕಾಶ್ಮೀರಕ್ಕೆ ಇಂಧನ ಮತ್ತು ಗ್ಯಾಸ್​ ಸೇವೆಯಲ್ಲಿ ಇವು ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿವೆ. ಕಳೆದ 10 ರಿಂದ 15 ವರ್ಷದಲ್ಲಿ ಸಾರಿಗೆ ಉದ್ಯಮವೂ ಕುಗ್ಗುತ್ತಿದೆ. ಇದೀಗ ರೈಲು ಸೇವೆ ಆರಂಭವಾದಲ್ಲಿ ಶವಪೆಟ್ಟಿಗೆ ಮೇಲೆ ಕೊನೆ ಮೊಳೆ ಹೊಡೆದಂತೆ ಆಗಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರಕ್ಕೆ ರೈಲು ಸೇವೆ ಆರಂಭದ ದಿನ ಹತ್ತಿರವಾಗುತ್ತಿದ್ದು, ಸಾರಿಗೆ ಸಿಬ್ಬಂದಿ ಈ ಕುರಿತು ಯಾವುದೇ ಪರಿಹಾರ ಕಾಣದ ಹಿನ್ನೆಲೆ ಪ್ರತಿಭಟನೆ ನಡೆಸುವ ಸಂಬಂಧ ಸಭೆ ನಡೆಸಿದ್ದಾರೆ. ಈಗಾಗಲೇ ಈ ಸಮಸ್ಯೆ ಕುರಿತು ಸರ್ಕಾರಕ್ಕೆ ಪತ್ರ ಬರೆದು, ಮನವಿ ಮಾಡಲಾಗಿದೆ. ಆದರೂ, ಏನು ಮಾಡುವುದು ಎಂದು ತೋಚುತ್ತಿಲ್ಲ.

ಲೆಫ್ಟಿನೆಂಟ್​ ಗವರ್ನರ್​​ ಮತ್ತು ಭಾರತ ಸರ್ಕಾರಕ್ಕೆ ಕೂಡ ಇಲ್ಲಿನ ಸಾರಿಗೆ ಪುನರು​ಜ್ಜೀವನ ನಡೆಸುವ ಸಂಬಂಧ ಪತ್ರ ಬರೆಯಲಾಗುವುದು ಎಂದು ಸಿಂಗ್​ ತಿಳಿಸಿದ್ದಾರೆ.

ರೈಲು ಸೇವೆಯಿಂದಾಗಿ ವಾಣಿಜ್ಯ ಪ್ರಯಾಣಿಕರ ಭಾರೀ ನಷ್ಟವಾಗಲಿದೆ. ಪ್ರವಾಸಿಗರು ಇತರರು ಬಳಕೆ ಮಾಡುವ ವಾಹನದಿಂದ ಇಲ್ಲಿನ ಸಾರಿಗೆಯವರ ಹೊಟ್ಟೆ ತುಂಬುತ್ತಿದೆ. ಒಮ್ಮೆ ರೈಲು ಸೇವೆ ಆರಂಭವಾದರೆ, ಎಲ್ಲಾ ವಾಹನಗಳು ನಷ್ಟಹೊಂದುತ್ತದೆ ಎಂದರು.

ರೈಲು ಸೇವೆ ಆರಂಭ ವಿಚಾರದಲ್ಲಿ ಜಮ್ಮು ಅನೇಕ ಏರಿಳಿತ ಕಂಡಿದೆ. ಮೊದಲಿಗೆ ಉಧಮ್​ಪುರ್​ ಬಳಿಕ ಕತ್ರಾದವರೆಗೆ. ಇದಕ್ಕೆ ಮೊದಲು 1947ಕ್ಕೆ ಮುಂಚೆ ಅವಿಭಜಿತ ಭಾರತದಲ್ಲಿ ಜಮ್ಮು ಮತ್ತು ಸಿಯಾಲ್​ಕೋಟ್​ ನಡುವೆ ನೇರ ರೈಲು ಸೇವೆ ಇತ್ತು. ಇದು 1890ರಲ್ಲಿ ಆರಂಭವಾಗಿತ್ತು.

ಆದರೆ, 1947ರಲ್ಲಿ ಭಾರತ ವಿಭಜನೆ ಬಳಿಕ ಈ ಸೇವೆ ರದ್ದಾಯಿತು. 1965ರಲ್ಲಿ ಭಾರತ ಮತ್ತು ಪಾಕಿಸ್ತಾನ ಯುದ್ಧ ಬಳಿಕ ಪಂಜಾಬ್‌ನ ಪಠಾಣ್‌ಕೋಟ್‌ನಿಂದ ಜಮ್ಮುವಿಗೆ ರೈಲು ಸೇವೆಯ ಕೆಲಸ ಶುರು ಮಾಡಲಾಗಿತ್ತು. ಮತ್ತು ಅದು 1972 ರಲ್ಲಿ ಪ್ರಾರಂಭವಾಯಿತು.

ಜಮ್ಮುವಿಗೆ ಮೊದಲ ರೈಲು ಸೇವೆಯನ್ನು ಶ್ರೀನಗರ ಎಕ್ಸ್​ಪ್ರೆಸ್​ (ಇದೀಗ ಝೇಲುಮ್​ ಎಕ್ಸ್​ಪ್ರೆಸ್​) ಎಂಬ ಹೆಸರಿನಿಂದ ಆರಂಭವಾಯಿತು. ಇತ್ತೀಚಿಗೆ ಜಮ್ಮುವಿಗೆ ಸೇವೆ ಲಭ್ಯವಾದ ಹೊಸ ರೈಲು ಎಂದರೆ ವಂದೇ ಭಾರತ್​ ಎಕ್ಸ್​ಪ್ರೆಸ್​​. ಇದು ದೆಹಲಿಯಿಂದ ನೇರವಾಗಿ ಕಾಶ್ಮೀರಕ್ಕೆ ಇರುವ ಮೊದಲ ರೈಲು ಸೇವೆಯಾಗಲಿದೆ.

1981ರಲ್ಲಿ ಜಮ್ಮು ಮತ್ತು ಉದ್ಧಂಪುರ್​ ನಡುವೆ ರೈಲು ಯೋಜನೆ ಕೈಗೆತ್ತಿಕೊಳ್ಳಲಾಯಿತು. 1983ರ ಏಪ್ರಿಲ್​ 14ರಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ ಇದಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಅನೇಕ ಗಡುವು ಮೀರಿದ ಬಳಿಕ 2005ರಲ್ಲಿ ಏಪ್ರಿಲ್​ 13ರಂದು ಈ ಯೋಜನೆಗೆ ಪ್ರಧಾನಿಯಾಗಿದ್ದ ಮನಮೋನ್​ ಸಿಂಗ್​ ಚಾಲನೆ ನೀಡಿದ್ದರು.

2009ರ ಅಕ್ಟೋಬರ್​ನಿಂದ ಕಾಶ್ಮೀರ ಕಣಿವೆಯಲ್ಲಿ ವಿವಿಧ ವಲುದ ಸ್ಥಳೀಯ ರೈಲು ಸೇವೆ ಆರಂಭವಾಯಿತು. 2014ರ ಜುಲೈ 4ರಂದು ಮಾತಾ ವೈಷ್ಣೋ ದೇವಿ ಯಾತ್ರಾರ್ಥಿಗಳ ಬೇಸ್​ ಕ್ಯಾಂಪ್​ಗೆ ಕತ್ರಾಗೆ ನೇರ ರೈಲು ಸೇವೆ ಆರಂಭವಾಯಿತು. ಇದಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಇದೀಗ ಜನವರಿ 26, 2025ರ ಹೊತ್ತಿಗೆ ಕಾಶ್ಮೀರಕ್ಕೆ ನೇರ ರೈಲು ಸೇವೆ ಲಭ್ಯವಾಗುತ್ತಿದೆ.

ಜಮ್ಮುವಿನ ತವಿ ರೈಲು ನಿಲ್ದಾಣದ ಮುಂದೆ ರೈಲು ಸಾಗಿದಂತೆ ಜಮ್ಮು ಜನರ ಮತ್ತು ವರ್ತಕರಲ್ಲಿ ಕೂಡ ಇದೇ ಆತಂಕ ಮೂಡಿತ್ತು. ಈ ಮೊದಲು ಪಂಜಾಬ್​ನಲ್ಲಿನ ಪಠಾಣ್​ಕೋಟ್​ನಿಂದ ಜಮ್ಮುಗೆ ರೈಲು ಆಗಮಿಸುವ ಮೊದಲು ಜಮ್ಮು ವ್ಯಾಪಾರದ ಹಬ್​ ಆಗಿತ್ತು.

ರೈಲು ಸೇವೆ ಆರಂಭದ ಬಳಿಕ ಆ ಹೊಳಪು ಮಸುಕಾಯಿತು. ಇದೀಗ ಕಾಶ್ಮೀರಕ್ಕೆ ರೈಲು ಸೇವೆ ಆರಂಭದಿಂದಲೂ ಇದೇ ಭೀತಿ ಅಲ್ಲಿನ ವರ್ತಕರಲ್ಲಿ ಉಂಟಾಗಿದೆ.

ಈ ಸಂಬಂಧ ಮಾತನಾಡಿರುವ ಜಮ್ಮು ಉಗ್ರಾಣ ವರ್ತಕರ ಅಸೋಸಿಯೇಷನ್ ಅಧ್ಯಕ್ಷ ದೀಪಕ್​ ಗುಪ್ತಾ, ಖಂಡಿತ ಇದರಿಂದ ನಮಗೆ ನಷ್ಟವಿದೆ. ಆದರೆ, ನಾವು ಈ ನಷ್ಟ ತುಂಬಲು ಈಗಾಗಲೇ ಕ್ರಮ ತೆಗೆದುಕೊಂಡಿದ್ದೇವೆ. ನಾವು ಜಮ್ಮುವಿನ ರಜೌರಿ, ಪೂಂಜ್​, ಚೀನಾಬ್​ ಕಣಿವೆ ಸೇರಿದಂತೆ ಇತರ ಜಿಲ್ಲೆಗಳಿಂದ ನಮ್ಮ ವರ್ತಕರನ್ನು ಹೆಚ್ಚಿಸುವ ಗುರಿ ಹೊಂದಿದ್ದೇವೆ. ​ಇದನ್ನು ಸರಿದೂಗಿಸುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಮ್ಮು ಮತ್ತು ಕಾಶ್ಮೀರದ ನಡುವೆ ಪ್ರಮುಖ ಪೂರೈಕೆ ಎಂದರೆ ಅದು ಪಡಿತರ (ದಿನಸಿ)ಯಾಗಿದೆ. ಜಮ್ಮುನಲ್ಲಿರುವ ಉಗ್ರಾಣಗಳಿಗೆ ಇವು ಸೇರುತ್ತದೆ. ಆದರೆ, ಕಳೆದ 10 ರಿಂದ 15 ವರ್ಷದಲ್ಲಿ ಕಾಶ್ಮೀರ ವ್ಯಾಪಾರಿಗಳು ಪಂಜಾಬ್​ ಮತ್ತು ದೇಶದ ಇತರ ಭಾಗಗಳಿಂದ ನೇರವಾಗಿ ಸರಕು ತರುತ್ತಿದ್ದಾರೆ.

ಕೆಲವು ಸಣ್ಣ ವ್ಯಾಪಾರಿಗಳು ಮಾತ್ರ ಜಮ್ಮುವಿನಲ್ಲಿರುವ ಉಗ್ರಾಣದಿಂದ ತರುತ್ತಿದ್ದಾರೆ. ಆದರೆ, ಒಮ್ಮೆ ಕಾಶ್ಮೀರಕ್ಕೆ ರೈಲು ಸೇವೆ ಆರಂಭವಾದರೆ, ಸ್ಥಳೀಯ ವರ್ತಕರು ಜಮ್ಮು ಉದ್ಯಮಿಗಳು ಬದಲಾಯಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

 

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...