Hyderabad News:
ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತದ ಯುವ ಆಟಗಾರ ಒಂದೇ ಒಂದು ಪಂದ್ಯ ಆಡದಿದ್ದರು ಕೋಟಿಗಟ್ಟಲೇ ಸಂಪಾದನೆ ಮಾಡಿದ್ದಾರೆ.ಜಾಹೀರಾತುಗಳಿಂದ ಮಾತ್ರವಲ್ಲದೇ CRICKET ಪಂದ್ಯದ ಮೂಲಕವೂ ದುಪ್ಪಟ್ಟು ಸಂಭಾವನೆ ಪಡೆದುಕೊಳ್ಳುತ್ತಾರೆ. ಇದಕ್ಕೆ ಉದಾರಣೆ ಭಾರತದ ಯುವ ಕ್ರಿಕೆಟರ್.ಭಾರತದಲ್ಲಿCRICKETಗೆ ಇರುವಷ್ಟು ಕ್ರೇಜ್ ಬೇರೆ ಯಾವುದೇ ಕ್ರೀಡೆಗಳಿಗಿಲ್ಲ.
ಅದರಲ್ಲೂ ವಿದೇಶಿ ಆಟಗಾರರಿಗೆ ಹೋಲಿಕೆ ಮಾಡಿದರೇ ಭಾರತೀಯ CRICKETಗರು ಗಳಿಕೆಯಲ್ಲಿ ಬಹಳಷ್ಟು ಮುಂದಿದ್ದಾರೆ.ಆದರೆ ಈ ಸರಣಿಯಲ್ಲಿ ಭಾರತ ತಂಡದ ಭಾಗವಾಗಿದ್ದ ಯುವ CRICKETರ್ ಒಂದೇ ಒಂದು ಪಂದ್ಯವನ್ನಾಡದೇ ಒಂದು ಕೋಟಿಗೂ ಅಧಿಕ ಸಂಭಾವನೆ ಪಡೆದಿದ್ದಾರೆ.ಇತ್ತೀಚೆಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್ ಗವಾಸ್ಕರ್ ಟ್ರೋಫಿ ಭಾಗವಾಗಿ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆದಿತ್ತು.
ಇದರಲ್ಲಿ ಭಾರತ ಕೇವಲ ಒಂದರಲ್ಲಿ ಗೆಲುವು ಸಾಧಿಸಿ ಮೂರು ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ಸರಣಿ ಕಳೆದುಕೊಂಡಿತು. ಇದರೊಂದಿಗೆ ಭಾರತದ WTC ಫೈನಲ್ ಕನಸು ಕೂಡ ಇಲ್ಲಿಗೆ ಕೊನೆಗೊಂಡಿದೆ.ಹೌದು, ಭಾರತ ತಂಡಕ್ಕೆ ಆಯ್ಕೆಯಾಗಿದ್ದ ಯುವ ಬ್ಯಾಟರ್ ಸರ್ಫರಾಜ್ ಖಾನ್ ಆಸ್ಟ್ರೇಲಿಯಾ ವಿರುದ್ಧ ನಡೆದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಅವರಿಗೆ ಸಿಕ್ಕಿರಲಿಲ್ಲ. ಆದರೂ ಅವರು 1.12 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ.
ಆದರೆ, ಕಳೆದ ವರ್ಷ ಬಿಸಿಸಿಐ ಪಂದ್ಯದ ಶುಲ್ಕವನ್ನು ಹೆಚ್ಚಳ ಮಾಡಿ ಆದೇಶ ಮಾಡಿತ್ತು. ಅದರಂತೆ, ಟೆಸ್ಟ್ ಋತುವಿನಲ್ಲಿ ಶೇಕಡಾ 50 ರಷ್ಟು ಹೆಚ್ಚಳ ಮಾಡಿದ್ದರಿಂದ ಟೆಸ್ಟ್ ಪಂದ್ಯವನ್ನು ಆಡಿರುವ ಆಟಗಾರರಿಗೆ ರೂ.30 ಲಕ್ಷ, ನಾನ್ ಪ್ಲೇಯಿಂಗ್ ಇಲೆವೆನ್ ಸದಸ್ಯರಿಗೆ ರೂ. 15 ಲಕ್ಷ ರೂಪಾಯಿ ಸಿಗುತ್ತದೆ.ಬಿಸಿಸಿಐ ಒಪ್ಪಂದದ ಪ್ರಕಾರ, ಟೆಸ್ಟ್ ಪಂದ್ಯ ಆಡುವ ಪ್ರತಿಯೊಬ್ಬ ಆಟಗಾರನಿಗೆ ಪಂದ್ಯದ ಶುಲ್ಕವಾಗಿ ರೂ.15 ಲಕ್ಷ ನೀಡಲಾಗುತ್ತದೆ.
ತಂಡಕ್ಕೆ ಆಯ್ಕೆಯಾಗಿ ಆಡುವ 11 ರಲ್ಲಿ ಸ್ಥಾನ ಪಡೆದಿರದ ಆಟಗಾರರಿಗೆ ರೂ. 7.5 ಲಕ್ಷ ನೀಡಲಾಗುತ್ತದೆ.ಈ ಸರಣಿಯಲ್ಲಿ ತಂಡಕ್ಕೆ ಆಯ್ಕೆಯಾಗಿದ್ದ ಸರ್ಫರಾಜ್ ಖಾನ್ ಜತೆಗೆ, ಅಭಿಮನ್ಯು ಈಶ್ವರನ್ ಮತ್ತು ತನುಷ್ ಕೋಟ್ಯಾನ್ ಬೆಂಚ್ಗೆ ಸೀಮಿತವಾಗಿದ್ದರು. ಈ ಮೂವರಿಗೆ ತಂಡದಲ್ಲಿ ಆಡಲು ಅವಕಾಶ ಸಿಗದಿದ್ದರೂ ಉತ್ತಮ ಹಣ ಗಳಿಸಿದ್ದಾರೆ.
ಪ್ರತಿ ಪಂದ್ಯಕ್ಕೆ 22.5 ಲಕ್ಷ ರೂ ನಂತೆ ಸರ್ಫರಾಜ್ ಐದು ಪಂದ್ಯಗಳ ಮೂಲಕ ಒಟ್ಟು 1,12,50,000 ರೂ. ಪಡೆದಿದ್ದಾರೆ.75 ಪ್ರತಿಶತ ಪಂದ್ಯಗಳನ್ನು ಆಡುವ ಸದಸ್ಯ ರೂ.45 ಲಕ್ಷ ಮತ್ತು ಆಡದ ಸದಸ್ಯರಿಗೆ ರೂ. 22.5 ಲಕ್ಷ ರೂಪಾಯಿಗಳನ್ನು ಬಿಸಿಸಿಐ ಪಾವತಿಸುತ್ತದೆ. ಈ ಹಿನ್ನೆಲೆಯಲ್ಲಿ ಸರ್ಫಾಜ್ ಖಾನ್ 1 ಕೋಟಿಗೂ ಅಧಿಕ ಸಂಭಾವನೆ ಪಡೆದುಕೊಂಡಿದ್ದಾರೆ.
ಇದನ್ನು ಓದಿರಿ : HARBHAJAN SINGH : ಕನ್ನಡಿಗ ಇರುವ ತನಕ ತಂಡದಲ್ಲಿ ಎಲ್ಲವೂ ಚೆನ್ನಾಗಿತ್ತು,