ಭಾರತೀಯ ಕ್ರಿಕೆಟ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಅಸಾಧ್ಯವಾದ ಒಂದು ದಾಖಲೆಯನ್ನು ಇದೀಗ ಸಂಜು ಸ್ಯಾಮ್ಸನ್ ಅವರು ಮಾಡಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಭಾನುವಾರ ಹೈದರಾಬಾದ್ ನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್ ಅವರು ಶತಕದೊಂದಿಗೆ ತಂಡದ ಗೆಲುವಿಗೂ ಕಾರಣರಾದರು.
ಅವರು 111 ರನ್ ಬಾರಿಸಿ ಔಟಾಗುವಷ್ಟರಲ್ಲಿ ಅನೇಕ ದಾಖಲೆಗಳು ಸೃಷ್ಟಿಯಾದವು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಭಾರತೀಯ ವಿಕೆಟ್ ಕೀಪರ್ ಒಬ್ಬ ಬಾರಿಸಿದ ಮೊದಲ ಶತಕ ಮತ್ತು ಅತಿ ಹೆಚ್ಚು ರನ್ ಎಂದು ಪರಿಗಣಿತವಾಗಿದೆ. ನಂಬಿದರೆ ನಂಬಿ ಬಿಟ್ಟರೆ ಬಿಡಿ ಮಹೇಂದ್ರ ಸಿಂಗ್ ಧೋನಿ ಸಹ ಟಿ20 ಕ್ರಿಕೆಟ್ ನಲ್ಲಿ ಒಂದೂ ಶತಕ ಗಳಿಸಿಲ್ಲ.
ತಮ್ಮ ಒಟ್ಟೂ ಅಂತಾರಾಷ್ಟ್ರೀಯ ಟಿ20 ವೃತ್ತಿ ಜೀವನದಲ್ಲಿ ಅವರು 2 ಅರ್ಧಶತಕ ಗಳಿಸಿದ್ದಾರೆ. 2022ರಲ್ಲಿ ಇಶಾನ್ ಕಿಶನ್ ಅವರು ಶ್ರೀಲಂಕಾ ವಿರುದ್ಧ ಬಾರಿಸಿದ್ದ 89 ರನ್ ಈವರೆಗೆ ಭಾರತೀಯ ವಿಕೆಟ್ ಕೀಪರ್ ಒಬ್ಬ ಟಿ20 ಪಂದ್ಯದಲ್ಲಿ ಗಳಿಸಿದ ಅತಿ ಹೆಚ್ಚು ರನ್ ಆಗಿತ್ತು.
ಈವರೆಗೂ ಶತಕದ ಗಡಿ ತಲುಪಿಲ್ಲ. ಇನ್ನು ಐಪಿಎಲ್ ನಲ್ಲಿ ಅವರು 2 ಶತಕಗಳ ಗಳಿಸಿದ ಸಾಧನೆ ಮಾಡಿದ್ದಾರೆ. ಈ ಅಮೋಘ ಇನ್ನಿಂಗ್ಸ್ ನ ಮೂಲಕ ಸಂಜು ಸ್ಯಾಮ್ಸನ್ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟಿ20 ಸರಣಿಗೂ ಆಯ್ಕೆಯಾಗುತ್ತಾರೆ. ಎರಡನೇ ಪಂದ್ಯದಲ್ಲಿ 10 ರನ್ ಗಳಿಸಿ ನಿರಾಸೆ ಮೂಡಿಸಿದರು. ಆದರೆ ಮೂರನೇ ಪಂದ್ಯದಲ್ಲಿ ಕೇವಲ 47 ಎಸೆತಗಳಲ್ಲಿ 111 ರನ್ ಬಾರಿಸಿರುವುದು ಟಿ20 ತಂಡದಲ್ಲಿ ಅವರ ಸ್ಥಾನವನ್ನು ಭದ್ರಗೊಳಿಸಿದೆ.