spot_img
spot_img

CYBER CALLER TUNE : ಸರ್ಕಾರಿ ಅಲರ್ಟ್ ಕಾಲರ್ ಟ್ಯೂನ್ನಿಂದ ಸಮಸ್ಯೆಯೇ? ಇದನ್ನು ಹೀಗೆ ತಪ್ಪಿಸಿ

spot_img
spot_img

Share post:

Cyber Caller Tune:

ಸೈಬರ್​ ಅಪರಾಧಿಗಳ ಬಗ್ಗೆ ಜನರನ್ನು ರಕ್ಷಿಸಲು ಸರ್ಕಾರ ಫ್ರಾಡ್​​ ಅಲರ್ಟ್​ ಕಾಲರ್​ ಟ್ಯೂನ್​ ಪರಿಚಯಿಸಿದೆ. ಸದ್ಯ ಈ CYBER CALLER TUNEಕೆಲ ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.ಈ ಟ್ಯೂನ್ ಮುಗಿದ ನಂತರವೇ ನಿಮ್ಮ ಕರೆ ಕನೆಕ್ಟ್​ಗೊಳ್ಳುತ್ತದೆ. ಇದು ಮುಖ್ಯವಾದ ಮಾಹಿತಿಯಾಗಿದ್ದರೂ, ಕೆಲವರು ಇದನ್ನು ಮತ್ತೆ ಮತ್ತೆ ಕೇಳಿ ಬೇಸರಗೊಳ್ಳುತ್ತಿದ್ದಾರೆ.

ನಿಮಗೂ ಸಹ ಈ ಕಾಲರ್ ಟ್ಯೂನ್​ನಿಂದ ಸಮಸ್ಯೆ ಆಗುತ್ತಿದ್ರೆ, ನೀವು ಈ CYBER CALLER TUNE​ ಅನ್ನು ಸುಲಭವಾಗಿ ಬಂದ್​ ಮಾಡಬಹುದು. ಸೈಬರ್ ವಂಚನೆಯ ವಿರುದ್ಧ ಜನರನ್ನು ಎಚ್ಚರಿಸಲು ಸರ್ಕಾರ ಕಾಲರ್ ಟ್ಯೂನ್ ಅಲರ್ಟ್​ ಪ್ರಾರಂಭಿಸಿರುವುದು ಗೊತ್ತಿರುವ ಸಂಗತಿ. ನೀವು ಯಾರಿಗಾದರೂ ಕರೆ ಮಾಡಿದಾಗಲೆಲ್ಲಾ ಫೋನ್​ನಲ್ಲಿ ಮೊದಲು ಕೇಳುವುದು ಈ CYBER CALLER TUNE ಅವೇರ್​​ನಸ್​ ಕಾಲರ್ ಟ್ಯೂನ್.

ನೀವು ಯಾರಿಗಾದ್ರೂ ಕಾಲ್​ ಮಾಡಿದಾಗ ಕಾಲರ್ ಟ್ಯೂನ್ ಪ್ಲೇ ಆಗುತ್ತದೆ. ಆಗ ನೀವು ಕೀಪ್ಯಾಡ್ ಅಥವಾ ಡಾಲರ್ ಪ್ಯಾಡ್ ಓಪನ್​ ಮಾಡಿ ಸಂಖ್ಯೆ ಒಂದು ಒತ್ತಿರಿ. ನಂತರ ಕಾಲರ್ ಟ್ಯೂನ್ ಬಂದ್ ಆಗಿ ನಿಮ್ಮ ಕಾಲ್​ ಡೈರೆಕ್ಟ್​ ಆಗಿ ಕನೆಕ್ಟ್​ ಆಗುತ್ತದೆ. ಇದನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವಾಗದಿದ್ದರೂ, ಪ್ರತಿ ಬಾರಿ ಕರೆಯ ಸಮಯದಲ್ಲಿ ನೀವು ಮ್ಯಾನುವಲ್​ ಆಗಿ ಬಂದ್​ ಮಾಡಬಹುದು.

CYBER CALLER TUNE ನೀವು ಸೈಬರ್ ಅವೇರ್​​ನಸ್​​ ಕಾಲರ್ ಟ್ಯೂನ್ ಕೇಳಲು ಬಯಸದಿದ್ದರೆ, ಈ ಸುಲಭ ಟಿಪ್ಸ್​ ಪಾಲಿಸಿ.ಪದೇ ಪದೇ ಕರೆ ಮಾಡುವವರಿಗೆ ಮತ್ತು ಪ್ರತಿ ಬಾರಿಯೂ ಕಾಲರ್ ಟ್ಯೂನ್ ಕೇಳುವುದನ್ನು ತಪ್ಪಿಸಲು ಬಯಸುವವರಿಗೆ ಈ ವಿಧಾನವು ತುಂಬಾ ಉಪಯುಕ್ತವಾಗಿದೆ. ದೇಶದಲ್ಲಿ ಸೈಬರ್ ವಂಚನೆ ಮತ್ತು ಬ್ಯಾಂಕಿಂಗ್ ವಂಚನೆ ಪ್ರಕರಣಗಳು ವೇಗವಾಗಿ ಹೆಚ್ಚಾದಾಗ ಸರ್ಕಾರ ಈ ಕಾಲರ್ ಟ್ಯೂನ್ ಅಲರ್ಟ್​ ಅನ್ನು ಜಾರಿಗೆ ತಂದಿತು.

2021 ರ ಆರ್ಥಿಕ ವರ್ಷದಲ್ಲಿ 7,338 ಪ್ರಕರಣಗಳು ದಾಖಲಾಗಿದ್ದು, ಇದರಿಂದಾಗಿ 1,32,389 ಕೋಟಿ ನಷ್ಟವಾಗಿದೆ. ಮತ್ತು 2022 ರ ಆರ್ಥಿಕ ವರ್ಷದಲ್ಲಿ, 9,046 ಪ್ರಕರಣಗಳು ದಾಖಲಾಗಿದ್ದು, ಇದರಿಂದಾಗಿ 5,458 ಕೋಟಿ ನಷ್ಟವಾಗಿದೆ. ಆರ್‌ಬಿಐ ವರದಿಯ ಪ್ರಕಾರ 2020 ರ ಆರ್ಥಿಕ ವರ್ಷದಲ್ಲಿ ಒಟ್ಟು 8,703 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿದ್ದು, ಸುಮಾರು 1,85,468 ಕೋಟಿ ರೂ. ನಷ್ಟ ಉಂಟಾಗಿದೆ.

ಹೆಚ್ಚುತ್ತಿರುವ ಈ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ವಂಚನೆ ಕರೆಗಳನ್ನು ತಪ್ಪಿಸಲು ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಯನ್ನು ತಕ್ಷಣ ಗುರುತಿಸಲು ಸರ್ಕಾರವು ಕಾಲರ್ ಟ್ಯೂನ್ ಮೂಲಕ ಜನರನ್ನು ಜಾಗೃತಿಗೊಳಿಸಲು ನಿರ್ಧರಿಸಿದೆ.

ಸೈಬರ್ ಭದ್ರತಾ ಜಾಗೃತಿಯನ್ನು ಹೆಚ್ಚಿಸಲು ಸರ್ಕಾರ ಈ ಕಾಲರ್ ಟ್ಯೂನ್ ಅನ್ನು ಕಡ್ಡಾಯಗೊಳಿಸಿದೆ. ಆದರೆ ಇದನ್ನು ಪದೇ ಪದೇ ಕೇಳುವುದು ನಿಮಗೆ ಸ್ವಲ್ಪ ಕಿರಿಕಿರಿ ಉಂಟುಮಾಡಬಹುದು. ನೀವು ಪ್ರತಿ ಬಾರಿಯೂ ಆ ಕಾಲರ್​ ಟ್ಯೂನ್​ ಅನ್ನು ಬಂದ್​ ಮಾಡಲು ಬಯಸಿದರೆ, ಕಾಲರ್​ ಟ್ಯೂನ್​ ಅನ್ನು ತ್ವರಿತವಾಗಿ ತೆಗೆದುಹಾಕಲು ಮತ್ತು ಕರೆಯನ್ನು ನೇರವಾಗಿ ಸಂಪರ್ಕಿಸಲು ಒನ್ ಸಂಖ್ಯೆಯನ್ನು ಒತ್ತಿದ್ರೆ ಸಾಕು.

ಇದನ್ನು ಓದಿರಿ : Cristiano Ronaldo On His 40th Birthday Declares Himself Football GOAT Ahead Of Messi, Maradona & Pele

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...