Hassan/ Mysore News:
ನಟ DALI WEDDING ಮೂಲತಃ ಹಾಸನ ಜಿಲ್ಲೆಯ, ಅರಸೀಕೆರೆ ತಾಲ್ಲೂಕಿನ ಕಾಳೇಹಳ್ಳಿ ಗ್ರಾಮದವರು. ವಿದ್ಯಾಭ್ಯಾಸ ಹಾಗೂ ಅವರ ಚಿತ್ರರಂಗದ ಪಯಣ ಆರಂಭವಾಗಿದ್ದು ಮೈಸೂರಿನಲ್ಲಿ. ಈಗ ಅವರ ಅದ್ಧೂರಿ ಮದುವೆ ಸಹ ಮೈಸೂರಿನಲ್ಲೇ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಸಿದ್ಧತೆಗಳು ಆರಂಭವಾಗಿದ್ದು, ಹುಟ್ಟೂರಿನ ಮನೆಯಲ್ಲಿ ಸಾಂಪ್ರದಾಯಿಕ ಮದುವೆ ಶಾಸ್ತ್ರಗಳಲ್ಲಿ ಡಾಲಿ ಧನಂಜಯ ಭಾಗಿಯಾದರು.
ನಟ ಡಾಲಿ ಧನಂಜಯ್ ಅವರು ಇದೇ ತಿಂಗಳು 15 ಮತ್ತು 16ರಂದು ಮೈಸೂರಿನ ವಸ್ತುಪ್ರದರ್ಶನ ಆವರಣದಲ್ಲಿ ಅದ್ಧೂರಿಯಾಗಿ DALI WEDDING . ಇದಕ್ಕೂ ಮುನ್ನ ತಮ್ಮ ಹುಟ್ಟೂರಾದ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಮದುವೆಯ ಸಾಂಪ್ರದಾಯಿಕ ಮನೆ ಶಾಸ್ತ್ರದಲ್ಲಿ ಡಾಲಿ ಧನಂಜಯ್ ಭಾಗವಹಿಸಿದರು.
ತಮ್ಮ ಮನೆ ದೇವರಾದ ಅರಸೀಕೆರೆಯ ಜೇನುಕಲ್ಲು ಸಿದ್ದೇಶ್ವರ ದೇವರ ಉತ್ಸವ ಮೂರ್ತಿಯ ಮೆರವಣಿಗೆಯಲ್ಲಿ ಭಾಗಿಯಾಗಿ, ಮನೆಗೆ ಉತ್ಸವ ಮೂರ್ತಿಯನ್ನು ತಂದು ಪೂಜೆ ಸಲ್ಲಿಸಿ, ಕೆಂಡ ಹಾಯುವ ಸಂಪ್ರದಾಯವನ್ನು ಡಾಲಿ ಧನಂಜಯ ಪೂರೈಸಿದರು.
DALI WEDDING ಇದೇ ಶನಿವಾರ ಹಾಗೂ ಭಾನುವಾರ ಡಾಲಿ ಧನಂಜಯ ಹಾಗೂ ಧನ್ಯತಾ ಅವರ ವಿವಾಹ ನೆರವೇರಲಿದೆ. ಅಭಿಮಾನಿಗಳಿಗೆ ಮುಕ್ತ ಅವಕಾಶವಿದ್ದು, ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರು ಸೇರಿದಂತೆ ಹಲವಾರು ಪ್ರಮುಖರು ಈ ಮದುವೆ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ಇದನ್ನು ಓದಿರಿ : JK Govt Issues Bid For Golden Card Scheme Insurer With Curtailed Surgeries, Decreased Budget