spot_img
spot_img

DARSHAN :ಮೈಸೂರು: ಆಸ್ಪತ್ರೆಗೆ ಬಂದ ದರ್ಶನ್

spot_img
spot_img

Share post:

Mysore News:

ಬೆನ್ನು ನೋವು ಹಿನ್ನೆಲೆ, ನಟ DARSHAN​ ಅವರಿಂದು ಮೈಸೂರಿನ ಡಾ.ಅಜಯ್‌ ಹೆಗ್ಡೆ ಅವರನ್ನು ಭೇಟಿಯಾದರು.ನಟ DARSHAN ಮಂಗಳವಾರದಂದು ತಮ್ಮ ತೋಟದ ಮನೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ಇಂದು ನಗರದ ಮಣಿಪಾಲ ಆಸ್ಪತ್ರೆಗೆ ಆಗಮಿಸಿ, ತಾವು ಹಿಂದಿನಿಂದಲೂ ಚಿಕಿತ್ಸೆ ಹಾಗೂ ಸಲಹೆ ಪಡೆಯುತ್ತಿದ್ದ ಡಾ.ಅಜಯ್‌ ಹೆಗ್ಡೆ ಅವರನ್ನು ಭೇಟಿಯಾದರು.

ಬಳಿಕ ಅವರಿಂದ ಕೆಲ ಸಲಹೆ ಸೂಚನೆ ಪಡೆದು ವಾಪಸ್​ ಆಗಿದ್ದಾರೆ.ಬೆನ್ನು ನೋವು ಹಿನ್ನೆಲೆ ನಟ DARSHAN ವೈದ್ಯರ ಸಲಹೆ ಪಡೆಯಲು ತಮ್ಮ ತೋಟದ ಮನೆಯಿಂದ ಖಾಸಗಿ ಆಸ್ಪತ್ರೆಗೆ ಆಗಮಿಸಿದ್ದರು. ತಮ್ಮ ಬೆನ್ನು ನೋವಿನ ಸಮಸ್ಯೆಗೆ ಸಲಹೆ ಕೊಡುತ್ತಿದ್ದ, ವೈದ್ಯರನ್ನು ಭೇಟಿಯಾಗಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಒಳಗಾಗಿ ಪುನಃ ತೋಟದ ಮನೆಗೆ ವಾಪಸ್​ ಆಗಿದ್ದಾರೆ.

What did the doctor say? ಈ ಬಗ್ಗೆ ಡಾ.ಅಜಯ್‌ ಹೆಗ್ಡೆ ಅವರನ್ನು ಸಂಪರ್ಕಿಸಿದಾಗ, DARSHAN ತಮ್ಮ ಬೆನ್ನು ನೋವಿನ ಬಗ್ಗೆ ಚರ್ಚಿಸಲು ಬಂದಿದ್ದರಷ್ಟೇ. ಮತ್ತೇನೂ ಇಲ್ಲ ಎಂದು ದೂರವಾಣಿಯಲ್ಲಿ ಈಟಿವಿ ಭಾರತ್​ಗೆ ವೈದ್ಯರು ಮಾಹಿತಿ ನೀಡಿದರು

Darshan Post: ನಿಮ್ಮ ಜೀವನದಲ್ಲಿ ಸಂತೋಷವೆಂಬ ಗಾಳಿಪಟಗಳು ಎತ್ತರಕ್ಕೆ ಹಾರಲಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಎಳ್ಳು ಬೆಲ್ಲ ಹಂಚಿ ಹೊಸ ಭರವಸೆಯೊಂದಿಗೆ ಮಕರ ಸಂಕ್ರಾಂತಿಯನ್ನು ಬರಮಾಡಿಕೊಳ್ಳೋಣ ಎಂದು ಬರೆದುಕೊಂಡಿದ್ದರು.

ಕಳೆದ ದಿನ ಭಾರತ ಮಕರ ಸಂಕ್ರಾಂತಿಯನ್ನು ಬಹಳ ಅದ್ಧೂರಿಯಾಗಿ ಆಚರಿಸಿದೆ. DARSHAN​ ಕೂಡಾ ತಮ್ಮ ತೋಟದ ಮನೆಯಲ್ಲಿ ಹಬ್ಬವನ್ನು ಆಚರಿಸಿದ್ದಾರೆ. ಕುದುರೆ ಜೊತೆಗಿನ ತಮ್ಮ ಫೋಟೋ ಹಂಚಿಕೊಂಡ ನಟ, ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು.

Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್‌ 11ರಂದು ದರ್ಶನ್‌ ಸೇರಿ ಹಲವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದರು. ಜೂನ್‌ 22ರಿಂದ ನ್ಯಾಯಾಂಗ ಬಂಧನದಲ್ಲಿದ್ದರು.

2024ರ ಡಿಸೆಂಬರ್​ 13ರಂದು ಪ್ರಕರಣದ ಆರೋಪಿಗಳಾದ ನಟ DARSHAN, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿಗೆ ಹೈಕೋರ್ಟ್ ಜಾಮೀನು ನೀಡಿದೆ.ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿದ ನಟ ದರ್ಶನ್​​ ಕೆಲ ಸಮಯದವರೆಗೆ ಜೈಲುವಾಸ ಅನುಭವಿಸಿ ಬಂದಿದ್ದಾರೆ.

ಇದನ್ನು ಓದಿರಿ : SANKRANTI HOROSCOPE 2025 : ಸಂಕ್ರಾಂತಿ ರಾಶಿ ಭವಿಷ್ಯ

 

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...