Darshan Thoogudeepa Caseನಲ್ಲಿ ಎಸ್ಪಿ ಶೋಭಾ ರಾಣಿ ಭೇಟಿ Darshanಗೆ Warn?
ಬಳ್ಳಾರಿ ಕೇಂದ್ರ ಕಾರಗೃಹದಲ್ಲಿ ನಟ ದರ್ಶನ್ ಸೆರೆ ಹಿನ್ನೆಲೆ ಜೈಲಿಗೆ ಎಸ್ಪಿ ಶೋಭಾ ರಾಣಿ ಭೇಟಿ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದರ್ಶನ್ ಅನಾರೋಗ್ಯ ವದಂತಿ ಸುಳ್ಳು, ಯಾವುದೇ ಸಮಸ್ಯೆ ಇಲ್ಲ. ವದಂತಿಗಳಿಗೆ ಕಿವಿಕೊಡಬೇಡಿ ಎಂದಿದ್ದಾರೆ.ದರ್ಶನ್ ಜೈಲಿಗೆ ಬಂದಾಗ ಕಡಗ, ದಾರ, ಚೇನ್ ಗಳನ್ನ ಬಿಚ್ಚಿಸಲಾಗಿದೆ. ದರ್ಶನ್ ಹಾಕಿಕೊಂಡಿದ್ದು, ಕೂಲಿಂಗ್ ಗ್ಲಾಸ್ ಅಲ್ಲ, ಪಾಯಿಂಟೆಡ್ ಗ್ಲಾಸ್ ಅಂತಾ ಹೇಳಲಾಗುತ್ತಿದ್ದು, ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಅವರು ಹೇಳಿದರು.
ಬಳ್ಳಾರಿ ಜೈಲಿನ ಅನುಭವ
ಸೆಂಟ್ರಲ್ ಜೈಲಿನಲ್ಲಿ ರಾಜಾತಿಥ್ಯ ಸಿಕ್ಕಿ ಫುಲ್ ಬಿಂದಾಸ್‌ನಲ್ಲಿದ್ದ ಆರೋಪಿ ದರ್ಶನ್‌ಗೆ ಈಗ ಬಳ್ಳಾರಿ ಜೈಲಿನ ದರ್ಶನವಾಗಿದೆ. ನಿನ್ನೆ ದರ್ಶನ್‌ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದು, ದರ್ಶನ್‌ನ ಒಂದು ದಿನ ಬಳ್ಳಾರಿ ಜೈಲಿನ ಅನುಭವ ಪಡೆದಿದ್ದಾರೆ. ನಾನ್ ಬರೋದಿಲ್ಲ ಅಂತಿದ್ದ ದರ್ಶನ್ ಮಾತು ಪೊಲೀಸರು ಕೇಳ್ಬೇಕು ಅಲ್ವಾ. ನಿನ್ನೆ ನಸುಕಿನ ಜಾವದಲ್ಲಿಯೇ ಪರಪ್ಪನ ಅಗ್ರಹಾರದಿಂದ ಪೊಲೀಸ್ ವಾಹನದಲ್ಲಿ ದರ್ಶನ್‌ನನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಫಿ ಕುಡ್ಕೊಂಡು.. ಸಿಗರೇಟ್ ಸೇದ್ಕೊಂಡು ಆರಾಮಾಗಿದ್ದ ದರ್ಶನ್‌ಗೆ ಈಗ ಬಳ್ಳಾರಿ ಜೈಲಿನ ಸೆರೆವಾಸ ಶುರುವಾಗಿದೆ.
ಕೋಳ ಯಾವುದನ್ನೂ ಹಾಕಿಕೊಂಡು ಬಂದಿಲ್ಲ!
ಪವರ್ ಗ್ಲಾಸ್ ಜೈಲಿನಲ್ಲಿ ಅನುಮತಿ ಇದೆ. ಯಾರಿಗಾದರೂ ಕಣ್ಣಿನ ಸಮಸ್ಯೆ ಇದ್ದರೆ ಅಂಥವರಿಗೆ ಅನುಮತಿ ಇದೆ. ಕೈಗೆ ಕೋಳ ಹಾಕಿಲ್ಲ. ಅದು ಸುಳ್ಳು. ಕೋಳ ಯಾವುದನ್ನೂ ಹಾಕಿಕೊಂಡು ಬಂದಿಲ್ಲ. ಅಂತಹ ಯಾವುದೇ ಅವಶ್ಯಕತೆಯೂ ಇಲ್ಲ. ಸ್ಪೆಕ್ಟ್ ಅಲ್ಲ.ಇನ್ನು ಎಲ್ಲರಿಗೂ ನಾರ್ಮಲ್ ಫುಡ್ ಇರುತ್ತದೆಯೋ? ಅದೇ ತೆಗೆದುಕೊಂಡಿರುತ್ತಾರೆ. ಭೇಟಿ ಮಾಡಲು ವಾರಕ್ಕೆ ಒಮ್ಮೆ ಮಾತ್ರ ಅವಕಾಶ ಇರುತ್ತದೆ ಎಂದು ಎಸ್ಪಿ ಶೋಭಾರಾಣಿ ತಿಳಿಸಿದ್ದಾರೆ.
ಜೈಲಿನ ನಿಯಮಗಳನ್ನ ಪಾಲನೆ!
ಜೈಲಿನ ನಿಯಮಗಳನ್ನ ಪಾಲನೆ ಮಾಡುತ್ತಿದ್ದಾರೆ. ಕುಟುಂಬಸ್ಥರಿಗೆ ಭೇಟಿಗೆ ಅವಕಾಶ ಇರುತ್ತದೆ. ಸದ್ಯ ಯಾರು ಅವರ ಭೇಟಿಗೆ ಬರುತ್ತಾರೆಂಬ ಮಾಹಿತಿ ಇಲ್ಲ ಎಂದರು.ಬ್ರಾಂಡೆಡ್ ಟೀ ಶರ್ಟ್ ಧರಿಸಿ ಜೈಲಿಗೆ ಎಂಟ್ರಿ! ನಿಯಮ ಏನು ಹೇಳುತ್ತೆ ಕೈಗೆ ಬೇಡಿ ಹಾಕಿದ್ರಾ ಎನ್ನವ ವಿಚಾರಕ್ಕೆ ಸ್ಪಂದಿಸಿದ ಎಸ್ಪಿ, ದರ್ಶನ್ ಅವರಿಗೆ ಬೇಡಿ ಹಾಕಿಲ್ಲ. ಕೈಗೆ ನೋವಾಗಿರೋದ್ರಿಂದ ಬಟ್ಟೆ ಕಟ್ಟಿಕೊಂಡಿದ್ದರು. ದರ್ಶನ್ ಗೆ ಊಟ ನೀಡಲಾಗಿದೆ. ಬ್ಯಾಂಡ್ ಬಟ್ಟಿ ಧರಿಸಿದ ವಿಚಾರಕ್ಕೆ ಪ್ರತಿಕ್ರಯಿಸಿ, ವಿಚಾರಣಾಧೀನ ಕೈದಿ ಯಾವುದೇ ರೀತಿಯ ಬಟ್ಟೆ ಹಾಕಿಕೊಳ್ಳಬಹುದು. ಆದರೆ ಶಿಕ್ಷೆಯಾಗಿರೋ ಕೈದಿಗೆ ಅ ರೀತಿಯಲ್ಲಿ ಅವಕಾಶ ಇರೋದಿಲ್ಲ ಎಂದು ಸ್ಪಷ್ಟಪಡಿಸಿದರು.
ದರ್ಶನ್‌ಗೆ ಕೂಲಿಂಗ್ ಗ್ಲಾಸ್ ಧರಿಸಲು ಅವಕಾಶ?
ಆರೋಪಿ ದರ್ಶನ್‌ಗೆ ಕೂಲಿಂಗ್ ಗ್ಲಾಸ್ ಧರಿಸಲು ಅವಕಾಶ ನೀಡಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಡಿಐಜಿ ಶೇಷ ಅವರು ಡಿಜಿಪಿಗೆ ವರದಿ ನೀಡಿದ್ದಾರೆ.ಪೊಲೀಸರು ಕೊಲೆ ಆರೋಪಿ ದರ್ಶನ್‌ರನ್ನು ಬಳ್ಳಾರಿ ಜೈಲಿಗೆ ಕರೆದೊಯ್ಯುವ ವೇಳೆ ಅವರಿಗೆ ಕೂಲಿಂಗ್ ಗ್ಲಾಸ್ ಧರಿಸಲು ಅವಕಾಶ ಕೊಟ್ಟು ಕರ್ತವ್ಯ ನಿರ್ಲಕ್ಷ್ಯ ತೋರಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಉತ್ತರ ವಲಯ ಡಿಐಜಿ ಟಿ.ಪಿ.ಶೇಷ ಅವರು ಇಲಾಖೆಯ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿದ್ದು, ಇದರಿಂದ ಇಲಾಖೆಯ ಘನತೆಗೆ ಧಕ್ಕೆ ಬಂದಿದೆ. ದರ್ಶನ್ ಸೆಲೆಬ್ರಿಟಿ ಆಗಿದ್ದರಿಂದ ಈ ಪ್ರಕರಣದಲ್ಲಿ ಹೆಚ್ಚು ಎಚ್ಚರಿಕೆ ವಹಿಸಬೇಕಿತ್ತು. ಈಗಾಗಲೇ ಆರೋಪಿ ಕುರಿತ ಸಣ್ಣ ತಪ್ಪುಗಳು ಸಹ ದೊಡ್ಡ ಸುದ್ದಿಗಳಾಗುತ್ತಿವೆ. ಆದರೆ, ಬೆಂಗಳೂರಿನಿಂದ ಆರೋಪಿಯನ್ನು ಕರೆತಂದ ಬೆಂಗಾವಲು ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎನ್ನಲಾಗಿತ್ತು.
ಇನ್ನಷ್ಟು ಓದಿರಿ: