Bangalore News:
ನಿರ್ಮಾಪಕ ಸೂರಪ್ಪ ಬಾಬುಗೆ ಹಣ ವಾಪಸ್ ಕೊಟ್ಟ ವಿಚಾರ ಕುರಿತು ಮಾತನಾಡಿದ DARSHAN, ನನ್ನ ಸೆಲೆಬ್ರಿಟಿಗಳು ಯಾವುದೇ ಊಹಾಪೋಹಗಳಿಗೆ ಕಿವಿಗೆ ಹಾಕೋಬೇಡಿ. ಸೂರಪ್ಪ ಬಾಬು ಅವರಿಗೆ ಹಣ ವಾಪಸ್ ಕೊಟ್ಟಿದ್ದು ಸತ್ಯ. ಅದು ಏನಕ್ಕೆ ಎಂದರೆ ಇಂಡಸ್ಟ್ರಿಯಲ್ಲಿ ನನಗೆ ತುಂಬಾ ಪರಿಚಯ ಇರೋರು ಬಂದು ಅವರಿಗೆ ಕಮಿಟ್ಮೆಂಟ್ಸ್ ಇವೆ.
ಸಿನಿಮಾ ಮಾಡಿಕೊಡಬೇಕು ಎಂದಿದ್ದರು. ಅದರಂತೆ ಮಾಡಿಕೊಡಣ ಎಂದು ಹೇಳಿದ್ದೆ. ಪ್ರಕರಣದಲ್ಲಿ ಜಾಮೀನು ಪಡೆದು ನಟ DARSHAN ಬಳ್ಳಾರಿ ಜೈಲಿನಿಂದ ಹೊರ ಬಂದಿದ್ದಾರೆ. ಜೈಲಿನಿಂದ ಹೊರ ಬಂದು ದಿನಗಳು ಕಳೆದರೂ ನಟ ಎಲ್ಲಿಯೂ ಮಾತನಾಡಿರಲಿಲ್ಲ.
ಈ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿತ್ತು. ಅದರಂತೆ DARSHAN ಅವರು ಮೊದಲ ಬಾರಿಗೆ ಸಾರ್ವಜನಿಕವಾಗಿ ಸಿನಿಮಾ ಕುರಿತು ಮಾತನಾಡಿದ್ದಾರೆ. ನಾನು ಪ್ರೇಮ್ ಖಂಡಿತಾ ಸಿನಿಮಾ ಮಾಡೇ ಮಾಡುತ್ತೇವೆ. ಏಕೆಂದರೆ ನನ್ನ ಗುರುಗಳು, ನನ್ನ ಪ್ರೀತಿಯ ಸ್ನೇಹಿತೆ ರಕ್ಷಿತಾ ಅವರ ಆಸೆ ಆಗಿದೆ.
ಸಿನಿಮಾ ಮಾಡೇ ಮಾಡೋಣ. ಆದರೆ ಈಗ ಕೆವಿಎನ್ ಪ್ರೊಡಕ್ಷನ್ ಅವರು ಈಗಾಗಲೇ ಬೇರೆ ಪ್ರೊಡಕ್ಷನ್ ಮಾಡುತ್ತಿದ್ದಾರೆ. ಮಧ್ಯೆಕ್ಕೆ ಹೋಗಲು ಆಗಲ್ಲ. ನಿರ್ಮಾಪಕರು ಎಂದರೆ ಕೇವಲ ದುಡ್ಡು ಹೊಂದಿಸುವುದು ಮಾತ್ರ ಅಲ್ಲ. ಅಡ್ವಾನ್ಸ್ ಕೊಟ್ಟು ರಿಲೀಸ್ ಆಗೋವರೆಗೆ ಅವರದೇ ಕೆಲಸ ಇರುತ್ತದೆ ಎಂದು ಹೇಳಿದ್ದಾರೆ. ಆದರೆ ಆ ಮೇಲೆ ಏನ್ ನಡೆದಿದೆ ಎಂದು ನಿಮಗೆಲ್ಲಾ ಗೊತ್ತು.
ಟೈಮ್ ಎಲ್ಲ ವೇಸ್ಟ್ ಆಗಿದೆ. ಇಂತಹ ಸಮಯದಲ್ಲಿ ಅವರ ದುಡ್ಡನ್ನು ನಾನೇ ಇಟ್ಟುಕೊಂಡರೇ ಅವರಿಗೆ ಕಮಿಟ್ಮೆಂಟ್ಸ್ ಜಾಸ್ತಿ ಆಗುತ್ತದೆ. ಅದಕ್ಕಾಗಿಯೇ ಹಣ ವಾಪಸ್ ಮಾಡಿದೆ. ಮುಂದೆ ಒಳ್ಳೆಯ ವಿಷಯ ಸಿಕ್ಕಾಗ ಸಿನಿಮಾ ಮಾಡೋಣ ಎಂದು ಹೇಳಿ ಹಣ ಕೊಟ್ಟಿದ್ದೇನೆ ಎಂದು DARSHAN ಅವರು ಹೇಳಿದ್ದಾರೆ.
ಇದನ್ನು ಓದಿರಿ : Indian Nationals Received Over 72 Per Cent Of All H1B Visas Issued From Oct 2022-Sept 2023: Govt