ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣನಲ್ಲಿ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಈಗಾಗಲೇ ದಾಸನ ವಿರುದ್ಧ ಪೊಲೀಸರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ಬೆನ್ನಲ್ಲೇ ದರ್ಶನ್ ಪರ ವಕೀಲರು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಡಲು ಮುಂದಾಗಿದ್ದಾರೆ.
ಇದನ್ನೂ ಓದಿ :3 ವರ್ಷದ ಹಿಂದೆ ಸಾವಾಗಿದ್ದ ವ್ಯಕ್ತಿಯ ಬಗ್ಗೆ ಮಹತ್ವದ ಅಪ್‌ಡೇಟ್ : ಏನ್ ವಿಷ್ಯಾ ಗೊತ್ತಾ..?
ದರ್ಶನ್ ವಿರುದ್ಧ ಪೊಲೀಸರು ತನಿಖೆ ಮಾಡಿ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ಆದರೆ ಇದರಲ್ಲಿನ ಗೌಪ್ಯ ಮಾಹಿತಿಗಳು ಸಾರ್ವಜನಿಕವಾಗಬಾರದು ಎಂದು ದರ್ಶನ್ ಪರ ವಕೀಲರು ಹೈಕೋರ್ಟ್ ಗೆ ಮೊರೆ ಹೋಗಿದ್ದಾರೆ. ಚಾರ್ಜ್ಶೀಟ್ನಲ್ಲಿ ಮಾಹಿತಿಗಳನ್ನು ಸೋರಿಕೆ ಮಾಡದಂತೆ ನಿರ್ಬಂಧ ಕೋರಿ ದರ್ಶನ್ ಪರ ವಕೀಲರು ಹೈಕೋರ್ಟ್ಗೆ ಅಪ್ಲಿಕೇಶನ್ ಸಲ್ಲಿಸಿದ್ದಾರೆ. ಇಂದು ಬೆಳಗ್ಗೆ ವಕೀಲರು ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ : ರಾಹುಲ್ ದ್ರಾವಿಡ್ ಬೆನ್ನಿಗೆ ಬಿದ್ದ ಟಾಪ್ IPL ಫ್ರಾಂಚೈಸಿಗಳು.. ಬ್ಲ್ಯಾಂಕ್ ಚೆಕ್ ಆಫರ್ ತಿರಸ್ಕರಿಸಿದ ಕನ್ನಡಿಗ ಏಕೆ ಗೊತ್ತಾ..?
ರೇಣುಕಾಸ್ವಾಮಿ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು ದರ್ಶನ್ ಸೇರಿ 17 ಆರೋಪಿಗಳ ವಿರುದ್ಧ ಪೊಲೀಸರು 3,991 ಪುಟಗಳ ಚಾರ್ಜ್ಶೀಟ್ ಕೋರ್ಟ್‌ಗೆ ಸಲ್ಲಿಸಿದ್ದಾರೆ. 3991 ಪುಟಗಳ ಚಾರ್ಜ್ಶೀಟ್ ಬಗ್ಗೆ ಕೇಳಿ ಆರೋಪಿ ದರ್ಶನ್ ಶಾಕ್ ಆಗಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ದರ್ಶನ್ ಪತ್ನಿ ವಿಜಯಲಕ್ಷ್ಮಿ, ತಮ್ಮ ದಿನಕರ ತೂಗುದೀಪ ಬಳ್ಳಾರಿ ಕಾರ್ಯಾಗೃಹಕ್ಕೆ ಭೇಟಿ ನೀಡಿದ್ದರು. ಈ ವೇಳೆ ಜಾಮೀನು ಅರ್ಜಿಗೆ ಸಹಿ ಹಾಕಿಸಿಕೊಂಡಿದ್ದರು. ಇದರ ಬೆನ್ನಲ್ಲೇ ದರ್ಶನ್ ಪರ ವಕೀಲರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.