ಪೂರ್ವಜರ ಆಸ್ತಿಯಲ್ಲಿ ಮಗಳ ಹಕ್ಕುಗಳು ತನ್ನ ಕುಟುಂಬದ ಪೂರ್ವಜರ ಆಸ್ತಿಯ ಮೇಲೆ ಹೊಂದಿರುವ ಕಾನೂನು ಹಕ್ಕುಗಳನ್ನು ಉಲ್ಲೇಖಿಸುತ್ತವೆ.
2005ರಲ್ಲಿ ಕಾನೂನಿನಲ್ಲಿ ಬದಲಾವಣೆ ತರಲಾಯಿತು. 1965ರಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆ (Hindu Succession Act) ಯನ್ನು ಅಂಗೀಕರಿಸಲಾಗಿತ್ತು. 2005ರಲ್ಲಿ ಅದಕ್ಕೆ ತಿದ್ದುಪಡಿ ತರಲಾಯ್ತು. ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಕ್ ರ, ಆಸ್ತಿ ಹಂಚಿಕೆ, ಉತ್ತರಾಧಿಕಾರ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಿಸಿದ ಕಾನೂನನ್ನು ಪಾಲಿಸ್ತಾರೆ.
ಮದುವೆಯಾದ ಮಹಿಳೆಗೆ ಆಕೆಯ ಪೂರ್ವಜರ ಆಸ್ತಿಯನ್ನು ಕೂಡ ನೀಡ್ತಾ ಇರಲಿಲ್ಲ. ಮನೆಯಲ್ಲಿರುವ ಗಂಡು ಮಕ್ಕಳು ಮಾತ್ರ ಅಪ್ಪನ ಆಸ್ತಿಯಲ್ಲಿ ಪಾಲು ಪಡೆಯುತ್ತಿದ್ದರು.
2005 ರ ಮೊದಲು ಹಿಂದೂ ಉತ್ತರಾಧಿಕಾರ ಕಾನೂನಿನ ಅಡಿಯಲ್ಲಿ, ಅವಿವಾಹಿತ ಹೆಣ್ಣುಮಕ್ಕಳನ್ನು ಮಾತ್ರ ಹಿಂದೂ ಅವಿಭಜಿತ ಕುಟುಂಬದ ಸದಸ್ಯರನ್ನಾಗಿ ಪರಿಗಣಿಸಲಾಗುತ್ತಿತ್ತು.
2005 ರಲ್ಲಿ ಹಿಂದೂ ಉತ್ತರಾಧಿಕಾರ ಕಾಯ್ದೆಗೆ ತಿದ್ದುಪಡಿ ಮಾಡಿದ ನಂತ್ರ ಮಗಳನ್ನು ಆಸ್ತಿಯ ಸಮಾನ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿದೆ. ಮದುವೆ ಆದ್ಮೇಲೂ ಮಗನಿಗೆ ಸಮಾನವಾಗಿ ಮಗಳು ಆಸ್ತಿಯಲ್ಲಿ ಪಾಲು ಪಡೆಯುತ್ತಾಳೆ.
ತಂದೆ ಸಾವನ್ನಪ್ಪಿದ್ರೆ ಮಾತ್ರ ಮಗಳು ತನ್ನ ಪಾಲನ್ನು ಪಡೆಯಬಹುದು. ಇತ್ತೀಚಿಗೆ ಸುಪ್ರೀಂ ಕೋರ್ಟ್ ಈ ಸಮಯವನ್ನು ತೆಗೆದುಹಾಕಿದೆ.
ಸಂಪೂರ್ಣ ಹಕ್ಕನ್ನು ಮಗನಿಗಾಗ್ಲಿ, ಮಗಳಿಗಾಗ್ಲಿ ಇಲ್ಲ ಇಬ್ಬರಿಗೂ ಸಮಾನವಾಗಿ ಹಂಚಬಹುದು. ಇಲ್ಲವೇ ಅವರ ಇಚ್ಛೆಯಿಂದ ಬೇರೆಯವರಿಗೂ ಆಸ್ತಿ ನೀಡಬಹುದು. ಒಂದ್ವೇಳೆ ವಿಲ್ ಬರೆಯದೆ ತಂದೆ ಸಾವನ್ನಪ್ಪಿದ್ರೆ ಆಗ, ಆತನ ಪ್ರಥಮ ಶ್ರೇಣಿಯಲ್ಲಿರುವ ಜನರು ಆಸ್ತಿ ಮೇಲೆ ಹಕ್ಕನ್ನು ಹೊಂದಿರುತ್ತಾರೆ.
ಹೆಂಡತಿಗೆ ತನ್ನ ಅತ್ತೆಯ ಅಥವಾ ಗಂಡನ ಪೂರ್ವಜರ ಆಸ್ತಿಯ ಮೇಲೆ ಯಾವುದೇ ಹಕ್ಕಿರುವುದಿಲ್ಲ. ಹೆಂಡತಿ ತನ್ನ ಪತಿ ಸಂಪಾದಿಸಿದ ಆಸ್ತಿಯ ಮೇಲೆ ಮಾತ್ರ ಹಕ್ಕುಗಳನ್ನು ಹೊಂದಿರುತ್ತಾಳೆ.
ಮದುವೆ ಎಷ್ಟೇ ವರ್ಷದ ಮೊದಲಾಗಿರಲಿ, ತಂದೆಯ ನಿಧನ ಯಾವುದೇ ಸಮಯದಲ್ಲಿ ಆಗಿರಲಿ, ಮಗಳು ಆಸ್ತಿಯನ್ನು ಪಡೆಯುತ್ತಾಳೆ ಎಂದು ಕೋರ್ಟ್ ಹೇಳಿದೆ.
ತವರಿನ ಆಸ್ತಿ ಎಂದಾಗ್ಲೂ ಅದನ್ನು ಎರಡು ಭಾಗ ಮಾಡಲಾಗುತ್ತದೆ. ಒಂದು ಸ್ವಯಾರ್ಜಿತ ಆಸ್ತಿಯಾದ್ರೆ ಇನ್ನೊಂದು ಪಿತ್ರಾರ್ಜಿತ ಆಸ್ತಿ. ಪಿತ್ರಾರ್ಜಿತ ಆಸ್ತಿ ಅಂದರೆ ತಂದೆಯಿಂದ ಮಕ್ಕಳಿಗೆ, ಮಕ್ಕಳಿಂದ ಮಕ್ಕಳಿಗೆ ಹೀಗೆ ನಾನಾ ತಲೆಮಾರುಗಳಿಗೆ ಅದು ಹಸ್ತಾಂತರವಾಗ್ತಾ ಬಂದಿರುತ್ತದೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now