ಕಲಬುರಗಿ: ಕಳೆದ ವರ್ಷದಲ್ಲಿ ಗರಿಷ್ಟ ಅಕ್ಟೋಬರ್‌ನಲ್ಲಿ ಗರಿಷ್ಠ 7000 ರೂ. ತಲುಪಿದ್ದ ಬಿಲಿಜೋಳ ಬೆಲೆ ಈ ವರ್ಷ ಸರಾಸರಿ ಬೆಲೆ 3400 ರೂ.ಗೆ ಇಳಿಕೆಯಾಗಿದೆ.
ಪ್ರಸ್ತುತ ಎಪಿಎಂಸಿಗಳಲ್ಲಿ ಸ್ಟಾಕ್ ಇರುವುದು ಮಾರಾಟವಾಗುತ್ತಿದೆ. ಈ ಹಿಂದಿನ ವರ್ಷ ಮಾರುಕಟ್ಟೆಯಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ 7000 ರೂ.ಯಿಂದ 8000 ರೂ.ವರೆಗೆ ಕಲಬುರಗಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ತಲುಪಿತ್ತು. ಈ ಬಾರಿ ಬಿಳಿ ಜೋಳದ ಬೆಲೆ ಇಳಿಮುಖ ಕಂಡು ಸಾಧಾರಣ ಧಾರಣೆಗೆ ಮಾರಾಟವಾಗುತ್ತಿರುವುದು ಗ್ರಾಹಕರಿಗೆ ತುಸು ನೆಮ್ಮದಿ
ಹಿಂದಿನ ವರ್ಷ ಬಿಳಿಜೋಳದ ಅಭಾವ ಹೆಚ್ಚಿದ್ದರಿಂದ ಮಹಾರಾಷ್ಟ್ರದಿಂದ ಬಿಳಿಜೋಳ ಆಮದು ಆಗಿ ಗರಿಷ್ಠ ಮಟ್ಟಕ್ಕೆ ತಲುಪಿತ್ತು.
ಪ್ರಸ್ತುತ ಎಪಿಎಂಸಿಗಳಿಗೆ ಬಿಳಿಜೋಳದ ಆವಕ ಕಡಿಮೆಯಿದೆ. ಬಿಳಿ ಜೋಳವನ್ನು ಸ್ಟಾಕ್ ಇಟ್ಟಿರುವವರು ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದಾರೆ.
ರೊಟ್ಟಿ ಪ್ರಿಯರಿಗೆ ಕಳೆದ ವರ್ಷದ ಬೆಲೆ ಬಿಸಿ ಮುಟ್ಟಿಸಿತ್ತು. ಆದರೆ, ಈ ವರ್ಷ ಬಿಳಿ ಜೋಳ ಎಂದಿಗೂ ಮಾರಾಟವಾಗುವ ಬೆಲೆಗೆ ಮಾರಾಟವಾಗುತ್ತಿರುವುದರಿಂದ ಬಹುತೇಕ ಉತ್ತರ ಕರ್ನಾಟಕದ ರೊಟ್ಟಿ ಪ್ರಿಯರಿಗೆ ಸಮಾಧಾನ ತಂದಿದೆ. “ಕಳೆದ ವರ್ಷ ಎಪಿಎಂಸಿಯಲ್ಲಿ ಬಿಳಿಜೋಳ ಕೊರತೆಯಿಂದ ಕಲಬುರಗಿಗೆ ಮಹಾರಾಷ್ಟ್ರದಿಂದ ಬಿಳಿಜೋಳ ಆವಕ ಆಗಿದ್ದರಿಂದ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿತ್ತು. ಒಂದು ಕೆಜಿಗೆ 90 ರೂ.ವರೆಗೂ ಮಾರಾಟವಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಬೆಲೆ ಕಡಿಮೆಯಿದೆ” ಎನ್ಜುತ್ತಾರೆ ವ್ಯಾಪಾರಿ ಶ್ರೀನಿವಾಸ ಎಂದು ತಿಳಿಸಿದ್ದಾರೆ.