spot_img
spot_img

ಅಮೆರಿಕದಲ್ಲಿ ಹಣದುಬ್ಬರ ಇಳಿಕೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ವಾಷಿಂಗ್ಟನ್: ಕಡಿಮೆಯಾಗುತ್ತಿರುವ ಹಣದುಬ್ಬರ ಮತ್ತು ದುರ್ಬಲ ಕಾರ್ಮಿಕ ಮಾರುಕಟ್ಟೆಗಳ ಮಧ್ಯೆ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು 25 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತಗೊಳಿಸಿದೆ.

“ವರ್ಷದ ಆರಂಭದಿಂದ ಕಾರ್ಮಿಕ ಮಾರುಕಟ್ಟೆ ಪರಿಸ್ಥಿತಿಗಳು ಸರಾಗವಾಗಿವೆ ಮತ್ತು ನಿರುದ್ಯೋಗ ದರ ಹೆಚ್ಚಾಗಿದ್ದರೂ ಕೆಳಮಟ್ಟದಲ್ಲಿದೆ. ಹಣದುಬ್ಬರವು ಸಮಿತಿಯ ಶೇಕಡಾ 2 ರ ಗುರಿಯತ್ತ ಪ್ರಗತಿ ಸಾಧಿಸಿದೆ, ಆದರೂ ಸ್ವಲ್ಪಮಟ್ಟಿಗೆ ಏರಿಕೆಯಾಗಿದೆ ” ಎಂದು ಕೇಂದ್ರ ಬ್ಯಾಂಕಿನ ನೀತಿ ನಿರೂಪಣಾ ಸಂಸ್ಥೆಯಾದ ಫೆಡರಲ್ ಓಪನ್ ಮಾರ್ಕೆಟ್ ಕಮಿಟಿ (ಎಫ್ಒಎಂಸಿ) ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.

ತನ್ನ ಗುರಿಗಳಿಗೆ ಬೆಂಬಲವಾಗಿ, ಫೆಡರಲ್ ಫಂಡ್ಸ್ ದರದ ಗುರಿ ವ್ಯಾಪ್ತಿಯನ್ನು ಶೇಕಡಾ 0.25 ಪಾಯಿಂಟ್ ಗಳಿಂದ ಶೇಕಡಾ 4.5 ರಿಂದ 4.75 ಕ್ಕೆ ಇಳಿಸಲು ಸಮಿತಿ ನಿರ್ಧರಿಸಿದೆ ಎಂದು ಹೇಳಿಕೆ ತಿಳಿಸಿದೆ.

ದುರ್ಬಲ ಉದ್ಯೋಗ ಮಾರುಕಟ್ಟೆಯ ವರದಿಯ ನಂತರ ಫೆಡ್​ ಬಡ್ಡಿದರ ಇಳಿಸುವ ನಿರ್ಧಾರ ಕೈಗೊಂಡಿದೆ. ಅಮೆರಿಕದ ಉದ್ಯೋಗದಾತರು ಅಕ್ಟೋಬರ್​ನಲ್ಲಿ ಕೇವಲ 12,000 ಉದ್ಯೋಗಗಳನ್ನು ಹೊಸದಾಗಿ ಸೃಷ್ಟಿಸಿದ್ದಾರೆ ಎಂದು ವರದಿ ಹೇಳಿದೆ. ಮುಷ್ಕರ ಮತ್ತು ಇತ್ತೀಚಿನ ಚಂಡಮಾರುತಗಳ ಪರಿಣಾಮದಿಂದ ಈ ಮಂದಗತಿ ಉಲ್ಬಣಗೊಂಡಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇತ್ತೀಚಿನ ವರದಿಯು ಆಗಸ್ಟ್ ಮತ್ತು ಸೆಪ್ಟೆಂಬರ್​ನಲ್ಲಿ ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆಯನ್ನು ಕ್ರಮವಾಗಿ 78,000 ಮತ್ತು 2,23,000 ಪರಿಷ್ಕರಿಸಿದೆ. ಈ ಪರಿಷ್ಕರಣೆಗಳೊಂದಿಗೆ, ಎರಡು ತಿಂಗಳಲ್ಲಿ ಉದ್ಯೋಗಗಳ ಸಂಖ್ಯೆಯು ಈ ಹಿಂದೆ ವರದಿಯಾದುದಕ್ಕಿಂತ 1,12,000 ಕಡಿಮೆಯಾಗಿದೆ.

ಸೆಪ್ಟೆಂಬರ್ 17-18 ರ ಸಭೆಯ ನಂತರ, ಕೇಂದ್ರ ಬ್ಯಾಂಕ್ ಫೆಡರಲ್ ನಿಧಿಗಳ ದರದ ಗುರಿ ವ್ಯಾಪ್ತಿಯನ್ನು 50 ಬೇಸಿಸ್ ಪಾಯಿಂಟ್​ಗಳಷ್ಟು ಕಡಿತಗೊಳಿಸಿತ್ತು. ಇದು ನಾಲ್ಕು ವರ್ಷಗಳಲ್ಲಿ ಮಾಡಲಾದ ಮೊದಲ ಬಡ್ಡಿದರ ಕಡಿತವಾಗಿದೆ. ಅಲ್ಲದೆ ಇದು ಬಡ್ಡಿದರ ಇಳಿಕೆಯು ಮುಂದುವರಿಯಲಿದೆ ಎಂಬ ಮುನ್ಸೂಚನೆಯನ್ನು ನೀಡಿತ್ತು.
ಫೆಡ್ ನ ಎರಡು ದಿನಗಳ ನೀತಿ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫೆಡ್ ಅಧ್ಯಕ್ಷ ಜೆರೋಮ್ ಪೊವೆಲ್, ಕಳೆದ ಎರಡು ವರ್ಷಗಳಲ್ಲಿ ಹಣದುಬ್ಬರವು ಗಮನಾರ್ಹವಾಗಿ ಕಡಿಮೆಯಾಗಿದೆ. ಆದರೆ ಪ್ರಮುಖ ಹಣದುಬ್ಬರವು ಸ್ವಲ್ಪಮಟ್ಟಿಗೆ ಹೆಚ್ಚಾಗಿದೆ ಎಂದು ಹೇಳಿದರು.

ಸೆಪ್ಟೆಂಬರ್ ನಲ್ಲಿ ಕೊನೆಗೊಂಡ 12 ತಿಂಗಳಲ್ಲಿ ಫೆಡ್ ನ ಆದ್ಯತೆಯ ಹಣದುಬ್ಬರ ಮಾಪಕವಾದ ಒಟ್ಟು ವೈಯಕ್ತಿಕ ಬಳಕೆ ವೆಚ್ಚ (ಪಿಸಿಇ) ಬೆಲೆಗಳು ಶೇಕಡಾ 2.1 ರಷ್ಟು ಏರಿಕೆಯಾಗಿವೆ. ಅಸ್ಥಿರ ಆಹಾರ ಮತ್ತು ಇಂಧನ ವಿಭಾಗಗಳನ್ನು ಹೊರತುಪಡಿಸಿ, ಪ್ರಮುಖ ಪಿಸಿಇ ಬೆಲೆಗಳು ಶೇಕಡಾ 2.7 ರಷ್ಟು ಏರಿಕೆಯಾಗಿವೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SPECIAL VILLAGE SAGA : 20 ಕುಟುಂಬ, 60 ಜನರಿರುವ ಒಂದು ಹಳ್ಳಿಯ ಕಥೆ: ಸ್ವಾವಲಂಬನೆಯ ಯಶೋಗಾಥೆ

Nalgonda, Telangana News: ಮೂಡು ಗುಡಿಸೆಲಾ ತಾಂಡಾ ಅಂದರೆ ಮೂರು ಗುಡಿಸಲುಗಳ ತಾಂಡಾ ಎಂಬ ಈ ವಿಶಿಷ್ಟ ತಾಂಡಾವನ್ನು 70 ವರ್ಷಗಳ ಹಿಂದೆ ನೇನಾವತ್ ಚಂದ್ರು...

ULLAL BANK ROBBERY : ಎಲ್ಲ ಟೋಲ್ಗಳಲ್ಲಿ ತಪಾಸಣೆ ಮಾಡುವಂತೆ ಸಿಎಂ ಸೂಚನೆ

Mangalore News: ಕೋಟೆಕಾರು ULLAL BANK ROBBERY ಪ್ರಕರಣ ಬಗ್ಗೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಸಿಎಂ, ಎಲ್ಲ ಟೋಲ್​ಗಳಲ್ಲಿ ತಪಾಸಣೆ ಹಾಗೂ ಕೇರಳ ಗಡಿಯಲ್ಲಿನ ಸಿಸಿ...

HIGH COURT : ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣ

Bangalore News: HIGH COURT ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಕೋರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ...

SAIF ALI KHAN : ಸೈಫ್ ಐಸಿಯುನಿಂದ ಹೊರಕ್ಕೆ, ತನಿಖೆಗೆ 20 ಪೊಲೀಸ್ ತಂಡಗಳ ರಚನೆ

Mumbai (Maharashtra) News: ಬಾಲಿವುಡ್​​ ನಟ SAIF ಅಲಿ ಖಾನ್ ಅವರ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ.ಈ ಘಟನೆ ಬಾಲಿವುಡ್ ಮಾತ್ರವಲ್ಲದೇ...