ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಗಾಯಕ ದಿಲ್ಜಿತ್ ದೋಸಾಂಜ್ (Diljit Dosanjh) ಅವರ ಲೈವ್ ರಸಮಂಜರಿಯಲ್ಲಿ (Live show) ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (deepika padukone), ತಾವು ತಾಯಿಯಾದ ಬಳಿಕ ಮೊದಲ ಬಾರಿಗೆ ಪಬ್ಲಿಕ್ ವೇದಿಕೆಯಲ್ಲಿ ಕಾಣಿಸಿಕೊಂಡರು. ಇದರ ವಿಡಿಯೋಗಳು ಇದೀಗ ಎಲ್ಲೆಡೆ ವೈರಲ್ ಆಗುತ್ತಿವೆ. ಇದರ ನಡುವೆ, ಅವರು ಲೈವ್ ಶೋಗೆ ಬೆಂಗಳೂರಿನ ಟ್ರಾಫಿಕ್‌ನಲ್ಲಿ (Bangalore traffic) ಕಾರಿಳಿದು ನಡೆದುಕೊಂಡೇ ಬಂದದ್ದು ಕೂಡ ಗೊತ್ತಾಗಿದೆ.
ವೈರಲ್ ಭಯಾನಿ ಅವರು ಹಂಚಿಕೊಂಡಿರುವ ವೀಡಿಯೊದಲ್ಲಿ, ದೀಪಿಕಾ ಪಡುಕೋಣೆ ಅಭಿಮಾನಿಗಳೊಂದಿಗೆ ನಡೆದುಕೊಂಡು ಹೋಗುವುದನ್ನು ಮತ್ತು ಗಾಯಕನನ್ನು ಹುರಿದುಂಬಿಸುತ್ತಿರುದನ್ನು ನಾವು ನೋಡಬಹುದು. ವಿಡಿಯೋದಲ್ಲಿ ದೀಪಿಕಾ ಚಿಯರ್‌ಫುಲ್ ಆಗಿದ್ದಾರೆ. ರಸ್ತೆಯಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಸ್ಥಗಿತಗೊಂಡಿದ್ದರಿಂದ, ನಟಿ ತನ್ನ ಕಾರಿನಿಂದ ಇಳಿದು ಲೈವ್ ಶೋ ಸ್ಥಳಕ್ಕೆ ತೆರಳಲು ನಿರ್ಧರಿಸಿದರು. ವೈಟ್ ಡ್ರೆಸ್‌ನಲ್ಲಿದ್ದ ದೀಪಿಕಾ ಬೀದಿಗಳಲ್ಲಿ ಯಾವುದೇ ಮುಜುಗರ ಇಲ್ಲದೆ ನಡೆದು ಬಂದರು ಎನ್ನಲಾಗಿದೆ.
ಸೆಪ್ಟೆಂಬರ್‌ನಲ್ಲಿ ದೀಪಿಕಾ ಮಗಳಿಗೆ ಜನ್ಮ ನೀಡಿದ್ದರು. ಮಗಳ ಹೆಸರು ದುವಾ ಪಡುಕೋಣೆ ಸಿಂಗ್ ಎಂದು ಇಡಲಾಗಿದೆ. ಡೆಲಿವರಿ ಬಳಿಕ ದೀಪಿಕಾ ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನದಲ್ಲಿ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ದಿಲ್ಜಿತ್ ಅವರು ದೀಪಿಕಾ ಅವರನ್ನು ವೇದಿಕೆಗೆ ಬರಲು ಕೇಳಿಕೊಂಡಾಗ, ಪ್ರೇಕ್ಷಕರು ಹರ್ಷೋದ್ಗಾರದ ಮೂಲಕ ಸ್ವಾಗತಿಸಿದರು. ದೀಪಿಕಾ ಅವರ ಕಾಂತಿಯುತವಾದ ನಗು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ದೀಪಿಕಾ ಪಡುಕೋಣೆ ಮೊನ್ನೆ ನಡೆದ ಲೈವ್ ಕಾನ್ಸರ್ಟ್‌ನಲ್ಲಿ ಗಾಯಕ ದೋಸಾಂಜ್ ಜೊತೆಗೆ ವೇದಿಕೆಯಲ್ಲಿ ಸೇರಿಕೊಂಡರು. ಅವರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅಲ್ಲದೆ, ಮತ್ತೊಂದು ವಿಡಿಯೋ ಹೊರಬಿದ್ದಿದ್ದು, ಇದರಲ್ಲಿ ಆಕೆ ಬೆಂಗಳೂರಿನ ಟ್ರಾಫಿಕ್ ನಡುವೆ ರಸ್ತೆಯಲ್ಲಿ ತಮ್ಮ ಫ್ಯಾನ್‌ಗಳ ಜೊತೆಗೆ ನಡೆದು ಬರುತ್ತಿರುವುದನ್ನು ಕಾಣಬಹುದು.
ದೀಪಿಕಾ ಲೆವಿಯ ದಿಲ್-ಲುಮಿನಾಟಿ ಟೂರ್ ಸರಕುಗಳ ಸಂಗ್ರಹದಿಂದ ‘ಲವರ್’ ಸ್ವೆಟ್‌ಶರ್ಟ್ ಅನ್ನು ಧರಿಸಿದ್ದರು. ಕ್ಯಾಶುಯಲ್ ಆದರೆ ಗಮನ ಸೆಳೆಯುವ ಶೈಲಿಯಲ್ಲಿದ್ದರು. ಕ್ಲಾಸಿಕ್ ನೀಲಿ ಜೀನ್ಸ್ ಅನ್ನು ಬಿಳಿ ಟಿ-ಶರ್ಟ್‌ನೊಂದಿಗೆ ಧರಿಸಿದ್ದರು. ದೀಪಿಕಾ ಅವರ ಕನಿಷ್ಠ ಮೇಕ್ಅಪ್, ಲೆವಿಸ್ ಮತ್ತು ನ್ಯಾಚುರಲ್ ಮೋಡಿಗಳು ದಿಲ್ಜಿತ್ ಸಹಯೋಗದ ರಸಸಂಜೆಯನ್ನು ಅದ್ಭುತವಾಗಿಸಿದವು.
ಇದೇ ರಸಸಂಜೆಯಲ್ಲಿ ದೀಪಿಕಾ, ದಿಲ್ಜಿತ್‌ಗೆ ಕನ್ನಡ ಕಲಿಸಿಕೊಡಲು ಮಾಡಿದ ಪ್ರಯತ್ನವೂ ವೈರಲ್ ಆಗಿದೆ. ʼಲವ್ ಯು ಬೆಂಗಳೂರುʼ ಎಂದ ದೀಪಿಕಾ, ʼನಾನು ನಿನಗೆ ಪ್ರೀತಿಸುತ್ತೇನೆʼ ಎಂದು ದಿಲ್ಜಿತ್‌ಗೆ ಕನ್ನಡದ ಮೂಲಕ ಮಾತಾಡಿ ಕನ್ನಡಿಗರ ಮನ ಗೆದ್ದರು.