New Delhi News:
DELHI ASSEMBLY ELECTION 2025 ಹಿನ್ನೆಲೆ ಗಸ್ತು ಮತ್ತು ಕಣ್ಗಾವಲು ನಡೆಸಿದ ಅಧಿಕಾರಿಗಳಿಗೆ ಹಣದ ಕಂತೆ, ಮದ್ಯವಿದ್ದ ಕಾರು ಸಿಕ್ಕಿದೆ. ಇದು ಮೂರು ಪಕ್ಷಗಳ ನಡುವೆ ಆರೋಪ- ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಅಕ್ರಮ ಚಟುವಟಿಕೆಗೆ ಸಂಬಂಧಿಸಿದ ನಗದನ್ನು ನಿತ್ಯದ ಗಸ್ತು ಮತ್ತು ಚುನಾವಣಾ ಕಣ್ಗಾವಲಿನ ಸಂದರ್ಭದಲ್ಲಿ ವಶಕ್ಕೆ ಪಡಿಯಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಕಾಂಗ್ರೆಸ್ ಅಭ್ಯರ್ಥಿ ಸುದೀಪ್ ದೀಕ್ಷಿತ್ ಮಾತನಾಡಿ, ಪಂಜಾಬ್ ವಾಹನಗಳು ದೆಹಲಿಗೆ ಹಣ ತರುತ್ತಿರುವ ಬಗ್ಗೆ ಲೆಫ್ಟಿನೆಂಟ್ ಗವರ್ನರ್ (ಎಲ್‌ಜಿ) ಅವರಿಗೆ ಈಗಾಗಲೇ ತಿಳಿಸಿದ್ದೇವೆ. ಎಎಪಿ ಕಚೇರಿಗೆ ಪಂಜಾಬ್ ಭವನವನ್ನು ಬಳಕೆ ಮಾಡುತ್ತಿದ್ದಾರೆ. ಈ ಸತ್ಯವನ್ನು ಹೊರಗೆಡವಲು ಪೊಲೀಸರು ದಾಳಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
DELHI ASSEMBLY ELECTION 2025 ದಿನಗಣನೆ ಪ್ರಾರಂಭವಾಗಿದ್ದು, ಹಲವೆಡೆ ಅಕ್ರಮ ಹಣ ಪತ್ತೆಯಾಗಿದೆ. ಪೊಲೀಸರು ಮೂರು ವಿವಿಧ ಸ್ಥಳಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 1.87 ಕೋಟಿ ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ. ರೈಲ್ವೆ ಘಟಕ, ವಾಯುವ್ಯ ಮತ್ತು ನೈರುತ್ಯ ಜಿಲ್ಲೆಗಳಲ್ಲಿ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಭಾರಿ ಮೊತ್ತದ ನಗದು ಪತ್ತೆಯಾಗಿದೆ.
ಬಿಜೆಪಿ ಅಭ್ಯರ್ಥಿ ರಮೇಶ್ ಬಿಧುರಿ ಮಾತನಾಡಿ, ಎಎಪಿ ಮತದಾರರನ್ನು ಸೆಳೆಯುವ ಯತ್ನ ನಡೆಸಲು ಅಕ್ರಮಕ್ಕೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ. DELHI ASSEMBLY ELECTION 2025 ವಾಹನದಲ್ಲಿ ನೋಟಿನ ಕಂತೆ ಮತ್ತು ಮದ್ಯವನ್ನು ವಶಕ್ಕೆ ಪಡೆಯಲಾಗಿದ್ದು, ಇದು ಕೇಜ್ರಿವಾಲ್ ಸತ್ಯವನ್ನು ಬಯಲಿಗೆಳೆಯುತ್ತದೆ.
ಎಎಪಿಗೆ ತಕ್ಕ ಉತ್ತರವನ್ನು ದೆಹಲಿ ಜನರು ನೀಡಲಿದ್ದಾರೆ ಎಂದರು. ಆದರೆ, ಎಎಪಿ ಈ ಆರೋಪವನ್ನು ಅಲ್ಲಗಳೆದಿದ್ದು, ಈ ಕುರಿತು ಮಾತನಾಡಿರುವ ಎಎಪಿ ವಕ್ತಾರರಾದ ಪ್ರಿಯಾಂಕಾ ಕಕ್ಕರ್, ಪಂಜಾಬ್ ಸರ್ಕಾರ ಈ ಕಾರು ನಮ್ಮದಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ.
ವಾಹನದ ನಂಬರ್ ಪ್ಲೇಟ್ ನಕಲಿಯಾಗಿದ್ದು, ಇದು ಮಹಾರಾಷ್ಟ್ರದ ನೋಂದಣಿ ವಾಹನ ಎಂದು ಸ್ಪಷ್ಟನೆ ನೀಡಿದ್ದಾರೆ. DELHI ASSEMBLY ELECTION 2025 ಬಿಜೆಪಿ ಸಂಸದ ಪ್ರವೀಣ್ ಖಂಡೆಲ್ವಾಲ್ ಮಾತನಾಡಿ, ಪ್ರಾಮಾಣಿಕತೆ ಬಗ್ಗೆ ಮಾತನಾಡುವ ಎಎಪಿ ಇದೀಗ ಭ್ರಷ್ಟಾಚಾರದಿಂದ ಸಿಕ್ಕಿಬಿದ್ದಿದೆ.
ಕೇಜ್ರಿವಾಲ್ ಸುಳ್ಳು ಮತ್ತು ವಂಚನೆಗಳನ್ನು ದೆಹಲಿ ಜನರು ಹೆಚ್ಚು ದಿನ ಸಹಿಸುವುದಿಲ್ಲ ಎಂದಿದ್ದಾರೆ. ಈ ವಾಹನವು ಮಹಾರಾಷ್ಟ್ರದಲ್ಲಿನ ಖಡ್ಕಿ ನಿವಾಸಿ ಮೇಜರ್ ಅನುಭವ್ ಶಿವಪುರಿ ಹೆಸರಿನಲ್ಲಿ ನೋಂದಣಿಯಾಗಿದೆ. ಅವರು ಕಳೆದ ಮೂರು ವರ್ಷದ ಹಿಂದೆ ಪಠಾಣ್ಕೋಟ್ನಲ್ಲಿನ ಆರ್ಮಿ ಡೆಂಟಲ್ ಕಾಲೇಜ್ಗೆ ವರ್ಗಾವಣೆಗೊಂಡಿದ್ದಾರೆ.
ವಶಕ್ಕೆ ಪಡೆದಿರುವ ಹ್ಯುಂಡೈ ಕ್ರೆಟಾ ವಾಹನವಾಗಿದ್ದರೂ, ನೋಂದಣಿ 2018ರ ಮಾಡೆಲ್ ಫೋರ್ಡ್ ಇಕೋ ಸ್ಪೋರ್ಟ್ ಆಗಿದೆ. ಇದರಿಂದ ಈ ವಾಹನ ನಕಲಿ ನಂಬರ್ ಪ್ಲೇಟ್ ಹೊಂದಿದೆ ಎಂಬುದು ದೃಢಪಟ್ಟಿದೆ. ಈ ರೀತಿಯ ವಾಹನವನ್ನು ಪಂಜಾಬ್ ಸರ್ಕಾರ ಹೊಂದಿಲ್ಲ ಎಂದು ಹೇಳಿಕೆಯಲ್ಲಿ ಆಪ್ ತಿಳಿಸಿದೆ.
ಪಂಜಾಬ್ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಡಿಪಿಐಆರ್) ಕೂಡ ಹಣ, ಮದ್ಯ ಸಿಕ್ಕಿರುವ ವಾಹನ ನಕಲಿ ನೋಂದಣಿ ಹೊಂದಿದ್ದು, ಪಂಜಾಬ್ ಸರ್ಕಾರಕ್ಕೆ ಸೇರಿಲ್ಲ ಎಂದು ದೃಢಪಡಿಸಿದ್ದಾರೆ.
ಇದನ್ನು ಓದಿರಿ : B Y VIJAYENDRA CLARIFICATION : ಪಕ್ಷದ ಜಿಲ್ಲಾ ಅಧ್ಯಕ್ಷರ ಚುನಾವಣೆಯಲ್ಲಿ ನನ್ನ ಪಾತ್ರವಿಲ್ಲ