New Delhi News :
DELHI ವಿಧಾನಸಭಾ ಚುನಾವಣೆ ಹಿನ್ನೆಲೆ ಪ್ರಚಾರ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಗೆ ಒಂದು ಅವಕಾಶ ನೀಡುವಂತೆ ದಿಲ್ಲಿ ಮತದಾರರಲ್ಲಿ ಕೋರಿಕೊಂಡಿದ್ದಾರೆ.DELHI ಕರ್ತರ್ ನಗರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ದೆಹಲಿ ಜನರಿಗೆ ಬಿಜೆಪಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರ ಬೇಕಿದ್ದು, ಫೆ 5ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವಂತೆ ಕೋರಿದರು.
ಯಮುನಾ ನದಿಗೆ ಹರಿಯಾಣ ವಿಷ ಹಾಕುತ್ತಿದೆ ಎಂಬ ಅರವಿಂದ್ ಕೇಜ್ರಿವಾಲ್ ಹೇಳಿಕೆ ವಿರುದ್ಧ ಹರಿಹಾಯ್ದ ಪ್ರಧಾನಿ, DELHI ಮಾಜಿ ಸಿಎಂ ಹರಿಯಾಣ ಜನರ ಬಗ್ಗೆ ಅವಮಾನಕಾರಿ ಹೇಳಿಕೆ ನೀಡಿದ್ದಾರೆ. ಅಪ್ಡಾ(AAPda) (ವಿಪತ್ತು) ತನ್ನ ವಿವೇಚನೆ ಕಳೆದುಕೊಂಡಿದೆ. ದೆಹಲಿ ಜನರಿಗಿಂತ ಇವರು ವಿಭಿನ್ನರೇ, ಹರಿಯಾಣ ನಿವಾಸಿಗಳ ಸಂಬಂಧಿಕರು ದೆಹಲಿಯಲ್ಲಿ ವಾಸಿಸುವುದಿಲ್ಲವೇ.
ಅವರು ಈ ನೀರನ್ನು ಕುಡಿಯುವುದಿಲ್ಲವೇ, ಹರಿಯಾಣದ ಜನರು ತಮ್ಮ ಸಂಬಂಧಿಕರು ಕುಡಿಯುವ ನೀರಿಗೆ ವಿಷ ಹಾಕುತ್ತಾರೆಯೇ ಎಂದು ಪ್ರಶ್ನಿಸಿದ ಮೋದಿ, ಇದೇ ನೀರನ್ನೇ ಅವರು ಕುಡಿಯುವುದಲ್ಲವೇ ಎಂದು ಕೇಜ್ರಿವಾಲ್ ಅವರನ್ನ ಕೇಳಿದ್ದಾರೆ.DELHI ಎಎಪಿ ಸರ್ಕಾರ ಹೊರ ಹೋಗುವ ಸಮಯ ಬಂದಿದ್ದು, ರಾಷ್ಟ್ರ ರಾಜಧಾನಿಯ ಜನರ ಸೇವೆ ಮಾಡಲು ಒಂದು ಅವಕಾಶವನ್ನು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
Last 25 years have seen both parties rule.. Now give us a chance : ಈ ಬಾರಿ ಬಿಜೆಪಿಗೆ ಅವಕಾಶ ನೀಡಬೇಕು ಎಂದು ನಾನು ಮನವಿ ಮಾಡುತ್ತೇನೆ. ಕಳೆದ 25 ವರ್ಷದಿಂದ ನಮಗೆ ನೀವು ಅವಕಾಶ ನೀಡಿಲ್ಲ. ಕಾಂಗ್ರೆಸ್ ಮತ್ತು ಅಪ್ಡಾವನ್ನು ನೋಡಿದ್ದೀರಿ. ಇದೀಗ ಕಮಲದ ಅವಕಾಶವಾಗಿದೆ. ನಿಮ್ಮ ಮನೆಯ ಮುಖ್ಯಸ್ಥರು ಪ್ರೀತಿ ಪಾತ್ರರನ್ನು ನೋಡಿಕೊಳ್ಳುವಂತೆ ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ. ನಮ್ಮ ಭರವಸೆಗಳನ್ನು ನಾವು ಪೂರೈಸಿದ್ದೇವೆ ಎಂಬುದನ್ನು ಬಿಜೆಪಿ ಟ್ರಾಕ್ ರೆಕಾರ್ಡ್ ತೋರಿಸುತ್ತದೆ ಎನ್ನುವ ಮೂಲಕ ದೆಹಲಿ ಮತದಾರರ ಮನ ಗೆಲ್ಲುವ ಪ್ರಯತ್ನ ಮಾಡಿದರು.
ಕಾಂಗ್ರೆಸ್ ಮತ್ತು ಎಎಪಿ ಎರಡೂ ರಾಜಕೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, 21ನೇ ಶತನಮಾದ ಮೊದಲ 14 ವರ್ಷ ಕಾಂಗ್ರೆಸ್ ಆಡಳಿತವನ್ನು ನೋಡಿದ್ದೀರಿ,. ಇದಾದ ಬಳಿಕ 11 ವರ್ಷ ಅಪ್ಡಾ (AAPda) (ವಿಪತ್ತು) ಸರ್ಕಾರವನ್ನು ನೋಡಿದ್ದೀರಿ. ಆದರೂ DELHI ಸಮಸ್ಯೆ ಹಾಗೇ ಉಳಿದಿದೆ. ಕಳೆದ 25 ವರ್ಷದಲ್ಲಿ ಈ ಎರಡು ರಾಜಕೀಯ ಪಕ್ಷಗಳು ಎರಡು ಪೀಳಿಗೆಯ ಜನರನ್ನು ಹಾಳು ಮಾಡಿವೆ ಎಂದು ಹರಿಹಾಯ್ದರು.ಬಿಜೆಪಿ ಚುನಾವಣಾ ಭರವಸೆಗಳನ್ನು ತಕ್ಷಣಕ್ಕೆ ಈಡೇರಿಸುವ ಕುರಿತು ಮಾತಾಡಿದ ಅವರು, ಫೆ 8ರ ಬಳಿಕ ಬಿಜೆಪಿ ಸರ್ಕಾರವೂ ನಿಗದಿತ ಸಮಯದಲ್ಲಿ ನಿಮಗೆ ನೀಡಿದ ಆಶ್ವಾಸನೆಗಳನ್ನು ಪೂರ್ಣಗೊಳಿಸುತ್ತದೆ. ಇದು ಮೋದಿಯ ಗ್ಯಾರಂಟಿ. ಇಂದು ಮೋದಿ ಗ್ಯಾರಂಟಿ ಎಂದರೆ, ಎಲ್ಲಾ ಗ್ಯಾರಂಟಿಗಳು ಪೂರ್ಣಗೊಳ್ಳುತ್ತದೆ ಎಂಬ ಖಾತ್ರಿ ಎಂದರು.
Modi proposed a developed India : ವಿಕಸಿತ ಭಾರತದ ದೃಷ್ಟಿಕೋನದ ಕುರಿತು ಭಾಷಣದಲ್ಲಿ ಒತ್ತಿ ಹೇಳಿದ ಪ್ರಧಾನಿ, ಪ್ರತಿಯೊಬ್ಬ ನಾಗರಿಕರಿ ದೇಶದ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿ ಮಾದರಿಗಳಲ್ಲಿ ರಾಜಧಾನಿಗಳು ನಿರ್ಣಾಯಕ ಪಾತ್ರ ಹೊಂದಿದೆ. ಆದರೆ, ಇಂದಿನ DELHI ಸ್ಥಿತಿ ನೋಡಿ, ಇದು ಸಾಧನೆ ಎಂದು ನೀವು ಹೇಳುತ್ತೀರಾ? ಈ ಕುರಿತು ನಾನು ಏನ್ನನೂ ಹೆಚ್ಚು ಹೇಳುವುದಿಲ್ಲ.
DELHI ಜನರೇ ತಮ್ಮ ಪ್ರತಿನಿತ್ಯದ ಬವಣೆ ಕುರಿತು ಹೇಳುತ್ತಿದ್ದಾರೆ.ವೇದಿಕೆಯಲ್ಲಿ ಪ್ರತಾಪ್ಗಂಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವೀಂದ್ರ ಸಿಂಗ್ ನೇಗಿ ಪ್ರಧಾನಿ ನರೇಂದ್ರ ಮೋದಿ ಅವರ ಪಾದ ಸ್ಪರ್ಶ ಮಾಡಿದರು. ಇದಕ್ಕೆ ಪ್ರತಿಯಾಗಿ ಪ್ರಧಾನಿ ಕೂಡ ಅವರ ಕಾಲಿಗೆ ಎರಗಿದಾಗ ನೆರೆದ ಜನರಿಂದ ಉದ್ಘಾರಗಳು ಹೊರ ಬಂದವು.
(ಐಎಎನ್ಎಸ್)ಪ್ರಚಾರ ಸಭೆಯಲ್ಲಿಯೇ ಉತ್ತರ ಪ್ರದೇಶ ಕಾಲ್ತುಳಿತ ಘಟನೆ ಕುರಿತು ಮಾತನಾಡಿದ ಅವರು, ಇಂದಿನ ಘಟನೆಯಲ್ಲಿ ನಾವು ಅನೇಕರನ್ನು ಕಳೆದುಕೊಂಡೆವು. ಮತ್ತೆ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ಕುಟುಂಬಕ್ಕೆ ನನ್ನ ಸಂತಾಪ, ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ ಎಂದರು.ಉತ್ತರ ಪ್ರದೇಶ ಸರ್ಕಾರದೊಂದಿಗೆ ನಾನು ನಿರಂತರ ಸಂಪರ್ಕದಲ್ಲಿದ್ದು, ಮಹಾ ಕುಂಭದಲ್ಲಿ ಅಮೃತ ಸ್ನಾನ ಎಂದಿನಂತೆ ಯಾವುದೇ ವಿಘ್ನ ಇಲ್ಲದೇ ಸಾಗುತ್ತಿದೆ, ಈ ಬಗ್ಗೆ ವದಂತಿಗಳಿಗೆ ಕಿವಿಗೊಡಬೇಡಿ, ಯಾವುದೇ ದುರ್ಘಟನೆ ಆಗದಂತೆ ಉತ್ತರಪ್ರದೇಶ ಸರ್ಕಾರ ಎಲ್ಲ ಕ್ರಮ ಕೈಗೊಳ್ಳಲು ವ್ಯವಸ್ಥೆ ಮಾಡಿಕೊಂಡಿದೆ ಎಂದು ಹೇಳಿದರು.
ಇದನ್ನು ಓದಿರಿ : PM MODI SPEAKS TO ADITYANATH ಸಿಎಂ ಯೋಗಿ ಆದಿತ್ಯನಾಥ್ಗೆ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ಮೋದಿ