New Delhi News:
ಮಧ್ಯಾಹ್ನ 2 ಗಂಟೆಗೆ ಆಯೋಗ ಮಾಧ್ಯಮಗೋಷ್ಟಿ ನಡೆಸಲಿದ್ದು ಮತದಾನ, ನಾಮಪತ್ರ ಸಲ್ಲಿಕೆ ಸೇರಿದಂತೆ ಚುನಾವಣಾ ಪ್ರಕ್ರಿಯೆಗಳ ದಿನಾಂಕಗಳ ಕುರಿತು ತಿಳಿಸಲಿದೆ.ಕೇಂದ್ರ ಚುನಾವಣಾ ಆಯೋಗವು ಇಂದು DELHI ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಲಿದೆ.70 ಕ್ಷೇತ್ರಗಳ DELHI ವಿಧಾನಸಭೆಯ ಅವಧಿ ಇದೇ ಫೆ.23ಕ್ಕೆ ಅಂತ್ಯವಾಗಲಿದ್ದು, ಅದಕ್ಕೆ ಮೊದಲು ಹೊಸ ಸದನ ರಚಿಸಬೇಕಿದೆ.ಡಿಸೆಂಬರ್ 2024ರಲ್ಲಿ ಪರಿಷ್ಕೃತಗೊಂಡ ಪಟ್ಟಿಯಲ್ಲಿ 1,67,329 ಮತದಾರರು ಸೇರಿದ್ದರು.
ನಕಲಿ ದಾಖಲಾತಿ ನೀಡಿ ಮತದಾರರ ಪಟ್ಟಿಗೆ ಹೆಸರು ಸೇರಿಸುವುದರ ವಿರುದ್ಧ ಆಯೋಗ ಎಚ್ಚರಿಕೆ ನೀಡಿದೆ.ಆಯೋಗ ಸೋಮವಾರ ಪರಿಷ್ಕೃತ ಮತದಾರರ ಪಟ್ಟಿ ಬಿಡುಗಡೆ ಮಾಡಿತ್ತು. ಈ ಅಂಕಿಅಂಶದ ಪ್ರಕಾರ, ಕಳೆದೆರಡು ತಿಂಗಳಿನಿಂದ ಮತದಾರರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. 2024ರ ಅಕ್ಟೋಬರ್ ವೇಳೆಗೆ DELHIಯ ಒಟ್ಟಾರೆ ಮತದಾರರ ಸಂಖ್ಯೆ 1,53,57,529 ಇತ್ತು.ಬಿಜೆಪಿ ಕೂಡ ತನ್ನ 29 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಎಎಪಿ ತೊರೆದು ಬಿಜೆಪಿ ಸೇರಿದ್ದ ಕೈಲಾಶ್ ಗೆಹ್ಲೋಟ್ ಬಿಜವಸನ್ನಿಂದ ಸ್ಪರ್ಧಿಸುತ್ತಿದ್ದಾರೆ. ಪಟೇಲ್ ನಗರದಿಂದ ರಾಜ್ ಕುಮಾರ್, DELHIಯ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಅರವಿಂದ್ ಸಿಂಗ್ ಲವ್ಲಿ ಗಾಂಧಿ ನಗರದಿಂದ ಸ್ಪರ್ಧಿಸಲಿದ್ದಾರೆ.ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಆಡಳಿತಾರೂಢ ಎಎಪಿ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಅರವಿಂದ್ ಕೇಜ್ರಿವಾಲ್ ಚುನಾವಣೆ ಗೆದ್ದು ಮತ್ತೆ ಸಿಎಂ ಹುದ್ದೆಗೇರುವ ತವಕದಲ್ಲಿದ್ದಾರೆ.
ಹಾಲಿ ಸಿಎಂ ಆತಿಶಿ ಅವರು ಕಲ್ಕಜಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.ಈ ಹಿಂದೆ ಎರಡು ಬಾರಿ ಸಂಸದರಾಗಿದ್ದ ದೀಕ್ಷಿತ್ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. 2013 ಮತ್ತ 2015ರಲ್ಲಿ ಕೇಜ್ರಿವಾಲ್ ಅವರು ಶೀಲಾ ದೀಕ್ಷಿತ್ ವಿರುದ್ದ ಗೆಲುವು ಸಾಧಿಸಿದ್ದರು.(ಪಿಟಿಐ)ಕಾಂಗ್ರೆಸ್ ಕೂಡ 48 ಅಭ್ಯರ್ಥಿಗಳನ್ನು ಘೋಷಿಸಿದ್ದು, ಮತ್ತೊಂದು ಪಟ್ಟಿ ಹೊರಬೇಕಿದೆ. DELHI ಮಾಹಿ ಸಿಎಂ ಶೀಲಾ ದೀಕ್ಷಿತ್ ಮಗ ಸಂದೀಪ್ ದೀಕ್ಷಿತ್ ಈ ಬಾರಿ ವಿಧಾನಸಭಾ ಚುನಾವಣೆಗೆ ಇಳಿಯಲಿದ್ದಾರೆ. 70 ಕ್ಷೇತ್ರಗಳ ದೆಹಲಿ ವಿಧಾನಸಭೆಯ ಅವಧಿ ಫೆ.23ಕ್ಕೆ ಮುಗಿಯಲಿದೆ. ಹೀಗಾಗಿ, ಇಂದು ಕೇಂದ್ರ ಚುನಾವಣಾ ಆಯೋಗ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಲಿದೆ.
ಇದನ್ನು ಓದಿರಿ : MAHA KUMBH MELA 2025 TRAVELING TIPS : ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದೀರಾ?