spot_img
spot_img

DELHI ELECTIONS 2025 : ದೆಹಲಿ ಚುನಾವಣೆಯಲ್ಲಿ ಅತಿಹೆಚ್ಚು, ಅತಿ ಕಡಿಮೆ ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿಗಳು ಇವರೇ ನೋಡಿ!

spot_img
spot_img

Share post:

New Delhi News:

ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಲ್ಲಿ 6 ಕಡೆ ಕೇವಲ 2000 ಮತಗಳಿಗಿಂತ ಕಡಿಮೆ ಅಂತರದಲ್ಲಿ ಅಭ್ಯರ್ಥಿಗಳು ಜಯಿಸಿದ್ದಾರೆ. ಇಷ್ಟು ಕಡಿಮೆ ಅಂತರದಲ್ಲಿ ಗೆದ್ದ ಆರೂ ಅಭ್ಯರ್ಥಿಗಳು ಬಿಜೆಪಿಯವರು ಎಂಬುದು ಗಮನಾರ್ಹ.

DELHI ELECTIONS 2025 ಯಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿ, 27 ವರ್ಷಗಳ ಬಳಿಕ ಗದ್ದುಗೆ ಏರುತ್ತಿದೆ. ಇತ್ತ ಆಡಳಿತಾರೂಢ ಆಪ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. ಆದರೆ ಆಪ್​​ನ ಅಭ್ಯರ್ಥಿಯೊಬ್ಬರು ಅತೀ ಹೆಚ್ಚು ಅಂತರದ ಮತಗಳ ಮೂಲಕ ಜಯಭೇರಿ ಬಾರಿಸಿದರೆ, ಬಿಜೆಪಿಯ ಅಭ್ಯರ್ಥಿಯೊಬ್ಬರು ಕೇವಲ 344 ಮತಗಳಿಂದ ಗೆದ್ದಿದ್ದಾರೆ.

Winners by the largest margin:

DELHI ELECTIONS 2025  ಮಟಿಯಾಮಹಲ್​ ಕ್ಷೇತ್ರದ ಆಪ್ ಅಭ್ಯರ್ಥಿ ಆಲೇನ್ ಮೊಹಮ್ಮದ್ ಇಕ್ಬಾಲ್ ಅವರು ಅತೀ ಹೆಚ್ಚು ಅಂದರೆ 42,724 ಮತಗಳ ಅಂತರದಿಂದ ಜಯಿಸಿದ್ದಾರೆ. ಹಾಗೆಯೇ ಸೀಲಂಪುರ್ ಕ್ಷೇತ್ರದ ಆಪ್ ಅಭ್ಯರ್ಥಿ ಚೌಧರಿ ಜುಬೇರ್ ಅಹಮದ್ ಎರಡನೇ ಅತೀ ಹೆಚ್ಚು ಮತ ಅಂದರೆ 42,477 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

ರೋಹಿಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜೇಂದ್ರ ಗುಪ್ತಾ ಮೂರನೇ ಅತೀ ಹೆಚ್ಚು 37,816 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ದೆವಲಿ ಕ್ಷೇತ್ರದ ಆಪ್​ನ ಪ್ರೇಮ್ ಚೌಹಾಣ್ 36,680 ಮತ, ಭವಾನಾ ಕ್ಷೇತ್ರದ ಬಿಜೆಪಿಯ ರವೀಂದ್ರ ಇಂದ್ರಜ್ ಸಿಂಗ್ 31,475 ಮತ ಮತ್ತು ಬಲ್ಲಿಮರನ್ ಕ್ಷೇತ್ರದ ಆಪ್​ನ ಇಮ್ರಾನ್ ಹುಸೇನ್ 29,823 ಮತ ಹಾಗೂ ಉತ್ತಮ ನಗರ ಕ್ಷೇತ್ರದ ಬಿಜೆಪಿಯ ಪವನ್ ಶರ್ಮಾ 29,740 ಮತಗಳ ಅಂತರದಿಂದ ಜಯಭೇರಿ ಬಾರಿಸಿದವರು.

Winners by shortest margin:

ಫೆ.8ರಂದು ಪ್ರಕಟವಾದ ವಿಧಾನಸಭೆಯ ಫಲಿತಾಂಶದಲ್ಲಿ ಬಿಜೆಪಿ 48 ಕ್ಷೇತ್ರಗಳಲ್ಲಿ ಜಯಿಸಿದ್ದು, ಆಪ್ 22 ಕ್ಷೇತ್ರಗಳಲ್ಲಿ ಗೆದ್ದಿದೆ. ಕಾಂಗ್ರೆಸ್ ಈ ಬಾರಿಯೂ ಸೊನ್ನೆ ಸುತ್ತಿದೆ. ದೆಹಲಿಯಲ್ಲಿ 27 ವರ್ಷಗಳ ಬಿಜೆಪಿ ಗದ್ದುಗೆ ಏರುತ್ತಿದೆ.

ಆರು ಅಭ್ಯರ್ಥಿಗಳು 2000 ಮತಗಳಿಂತ ಕಡಿಮೆ ಅಂತರದಲ್ಲಿ ಗೆದ್ದಿದ್ದು, ಎಲ್ಲರೂ ಬಿಜೆಪಿಯವರಾಗಿದ್ದಾರೆ. DELHI ELECTIONS 2025  ಸಂಗಮ್ ವಿಹಾರ್ ಕ್ಷೇತ್ರದ ಚಂದ್ರನ್ ಕುಮಾರ್ ಚೌಧರಿ ಕೇವಲ 344 ಮತಗಳ ಅಂತರದಿಂದ ಜಯಿಸಿದ್ದಾರೆ.

ಇನ್ನು ತ್ರಿಲೋಕಪುರಿ ಕ್ಷೇತ್ರದ ರವಿಕಾಂತ್ 392 ಮತ, ಜಂಗ್​ಪುರ್ ಕ್ಷೇತ್ರದ ತರವಿಂದರ್ ಸಿಂಗ್ 675 ಮತ, ತಿಮರ್ಪುರ್ ಕ್ಷೇತ್ರದ ಸೂರ್ಯ ಪ್ರಕಾಶ್ 1168, ರಾಜೇಂದ್ರ ನಗರದ ಉಮಾಂಗ್ ಬಜಾಜ್ 1231 ವೋಟ್​, ಮೆಹರೌಲಿಯ ಗಜೇಂದ್ರ ಸಿಂಗ್ ಯಾದವ್ 1782 ಮತಗಳ ಅಂತರದಿಂದ ಜಯಿಸಿದ್ದಾರೆ.

ಇದನ್ನು ಓದಿರಿ : How to manage to stay hydrated in winter without drinking water all day.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...