New Delhi News:
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ DELHIಯ ಕನಿಷ್ಠ ತಾಪಮಾನ 7.7 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.ಮಾತ್ರವಲ್ಲದೇ ಹಲವಾರು ರೈಲುಗಳ ಕಾರ್ಯಾಚರಣೆ ಮೇಲೂ ಪರಿಣಾಮ ಬೀರಿದೆ. ದಟ್ಟ ಮಂಜಿನಿಂದಾಗಿ 45 ರೈಲುಗಳ ಸಂಚಾರ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶನಿವಾರ ಬೆಳಗ್ಗಿನ ಜಾವ ದಟ್ಟ ಮಂಜು ಆವರಿಸಿದ ವಾತಾವರಣವಿದ್ದು, ಪರಿಣಾಮ ಗೋಚರತೆಯ ಮಟ್ಟ ಬಹಳ ಕಡಿಮೆ ಇತ್ತು.
ಪ್ರಯಾಣಿಕರು ನವೀಕರಿಸಿದ ವಿಮಾನ ಮಾಹಿತಿಗಾಗಿ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ವಿನಂತಿಸಲಾಗಿದೆ” ಎಂದು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಯಾಣಿಕರಿಗೆ ಅಧಿಕೃತ ಮಾಹಿತಿ ನೀಡಿದೆ.ಆದರೆ, ಯಾವುದೇ ವಿಮಾನಗಳ ಹಾರಾಟದ ಮೇಲೆ ಇದು ಪರಿಣಾಮ ಬೀರಿಲ್ಲ ಎಂದು ವರದಿಯಾಗಿದೆ. “ರನ್ ವೇ ಗೋಚರತೆ ಸುಧಾರಿಸಿರುವ ಕಾರಣ ಎಲ್ಲಾ ವಿಮಾನಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಸಫ್ದರ್ಜಂಗ್ನಲ್ಲಿ ಗೋಚರತೆಯ ಮಟ್ಟ ಆರಂಭದಲ್ಲಿ ಬೆಳಗ್ಗೆ 12.30ರಿಂದ 1.30 ರವರೆಗೆ 50 ಮೀಟರ್ಗೆ ಇಳಿದಿದ್ದರೆ.
ನಂತರದಲ್ಲಿ 200 ಮೀಟರ್ಗೆ ಸುಧಾರಿಸಿ, ಬೆಳಗ್ಗೆ 7.30 ರವರೆಗೆ ಹೀಗೆ ಮುಂದುವರೆದಿತ್ತು. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, DELHIಯ ಕನಿಷ್ಠ ತಾಪಮಾನ 7.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.ಅದೇ ರೀತಿ, ಕಾನ್ಪುರ ಮತ್ತು ಗ್ವಾಲಿಯರ್‌ನಂತಹ ನಗರಗಳು ಸಹ ದಟ್ಟವಾದ ಮಂಜಿನಿಂದ ಆವೃತವಾಗಿದ್ದವು. ಕಾನ್ಪುರದಲ್ಲಿ, ವೃದ್ಧರ ಗುಂಪುಗಳು ಬೆಂಕಿ ಮುಂದೆ ಚಳಿ ಕಾಯಿಸುತ್ತಿರುವ ದೃಶ್ಯಗಳು ಕಂಡುಬಂದಿವೆ.
ಇದರ ಮಧ್ಯೆ ಶನಿವಾರ ಬೆಳಗ್ಗೆ ಉತ್ತರ ಭಾರತದ ಹೆಚ್ಚಿನ ಭಾಗಗಳಲ್ಲಿ ದಟ್ಟವಾದ ಮಂಜು ಮುಸುಕಿವ ವಾತಾವರಣವಿತ್ತು. ಐತಿಹಾಸಿಕ ತಾಜ್ ಮಹಲ್ ಕೂಡ ಮಂಜಿನಿಂದ ಆವೃತವಾಗಿತ್ತು.ಶೀತ ವಾತಾವರಣ ಮುಂದುವರಿಯುವ ನಿರೀಕ್ಷೆಯಿದ್ದು, ದಟ್ಟವಾದ ಮಂಜು ಮತ್ತು ಶೀತ ಅಲೆಗಳಿಂದ ತಕ್ಷಣಕ್ಕೆ ಪರಿಹಾರ ದೊರೆಯುವುದಿಲ್ಲ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಮತ್ತು ಹಗುರ ಮಳೆಯಾಗುವ ಸಾಧ್ಯತೆ ಇದ್ದು, ಗರಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆಯಿದೆ.
ಇದನ್ನು ಓದಿರಿ : I WOULD HAVE BEATEN TRUMP BIDEN :ನಾನು ಟ್ರಂಪ್ ಸೋಲಿಸುತ್ತಿದ್ದೆ: ಅಧ್ಯಕ್ಷ ಜೋ ಬೈಡನ್