ನವದೆಹಲಿ: ದೆಹಲಿಯ ಗಾಳಿಯ ಗುಣಮಟ್ಟವು ಸತತ ಮೂರನೇ ದಿನವೂ ‘ತೀವ್ರ ಕಳಪೆ’ ವಿಭಾಗದಲ್ಲಿಯೇ ಇದ್ದು, ಮಾಲಿನ್ಯ ಮಟ್ಟವನ್ನು ನಿಗ್ರಹಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ವಾಯು ಮಾಲಿನ್ಯ ರಾಷ್ಟ್ರ ರಾಜಧಾನಿಯ ಉಸಿರುಗಟ್ಟಿಸುತ್ತಿದ್ದು, ಕೊನೆಗೂ ಎಚ್ಚೆತ್ತುಕೊಂಡ ದೆಹಲಿ ಸರ್ಕಾರ ಶುಕ್ರವಾರ GRAP-III(ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್-3ನೇ ಹಂತ) ನಿರ್ಬಂಧಗಳನ್ನು ಜಾರಿಗೆ ತಂದಿದೆ.
ಸಮೀರ್ ಆಪ್ ಪ್ರಕಾರ, ಬೆಳಗ್ಗೆ 9 ಗಂಟೆಗೆ ವಾಯು ಗುಣಮಟ್ಟ ಸೂಚ್ಯಂಕವು ‘ತೀವ್ರ ಕಳಪೆ’ ವಿಭಾಗದಲ್ಲಿ(400 ರಿಂದ 500), ಅಂದರೆ CAQM 411 ದಾಖಲಾಗಿದೆ.
ದೆಹಲಿಯ ಗಾಳಿಯ ಗುಣಮಟ್ಟವು ಸತತ ಮೂರನೇ ದಿನವೂ ‘ತೀವ್ರ ಕಳಪೆ’ ವಿಭಾಗದಲ್ಲಿಯೇ ಇದ್ದು, ಮಾಲಿನ್ಯ ಮಟ್ಟವನ್ನು ನಿಗ್ರಹಿಸಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ತಕ್ಷಣವೇ ಜಾರಿಗೆ ಬರುವಂತೆ ಮಾಲಿನ್ಯ-ವಿರೋಧಿ ಯೋಜನೆಯ ಹಂತ III ಅಡಿಯಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸುವಂತೆ ದೆಹಲಿ-ಎನ್‌ಸಿಆರ್‌ನಲ್ಲಿರುವ ಅಧಿಕಾರಿಗಳಿಗೆ ಸರ್ಕಾರ ನಿರ್ದೇಶನ ನೀಡಿದೆ.
ಗ್ರಾಪ್-3 ಅನ್ವಯವಾದಂತೆ ದೆಹಲಿಯಲ್ಲಿ ಬಿಎಸ್-3 ಎಮಿಷನ್ ಗುಣಮಟ್ಟದ ಪೆಟ್ರೋಲ್ ಚಾಲಿತ ವಾಹನಗಳು ಹಾಗೂ ಬಿಎಸ್-4 ಎಮಿಷನ್ ಗುಣಮಟ್ಟದ ಡೀಸೆಲ್ ಚಾಲಿತ ವಾಹನಗಳಿಗಿಂತ ಹಳೆಯ ವಾಹನಗಳು ರಸ್ತೆಗೆ ಇಳಿಯುವಂತಿಲ್ಲ. ಕೇವಲ ದೆಹಲಿಗೆ ಮಾತ್ರವಲ್ಲದೇ ಗುರುಗ್ರಾಮ, ಘಾಜಿಯಾಬಾದ್, ಫರೀದಾಬಾದ್, ಗೌತಮಬುದ್ಧ ನಗರಕ್ಕೂ ‘ಗ್ರಾಪ್-3’ ಅನ್ವಯವಾಗಲಿದೆ.
GRAP ಯ ಹಂತ-IV ನಿರ್ಬಂಧಗಳ ಅಡಿಯಲ್ಲಿ, ‘ಎಲೆಕ್ಟ್ರಿಕ್ ವಾಹನಗಳು, CNG ವಾಹನಗಳು ಮತ್ತು BS-VI ಡೀಸೆಲ್ ಬಸ್‌ಗಳನ್ನು ಹೊರತುಪಡಿಸಿ’ ಎನ್‌ಸಿಆರ್ ರಾಜ್ಯಗಳ ಎಲ್ಲಾ ಅಂತರ-ರಾಜ್ಯ ಬಸ್‌ಗಳು ದೆಹಲಿ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಜೊತೆಗೆ ನಿರ್ಮಾಣ ಮತ್ತು ಕಟ್ಟಡ ತೆರವುಗೊಳಿಸುವಿಕೆ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಾದ ನಿಷೇಧ ವಿಧಿಸಲಾಗಿದೆ.
ಹಂತ III ಅಡಿಯಲ್ಲಿ, ಅನಿವಾರ್ಯವಲ್ಲದ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸಬೇಕು ಮತ್ತು ಕಟ್ಟಡ ತೆರವುಗೊಳಿಸುವಿಕೆ, ಕಲ್ಲು ಕ್ರಷರ್‌ಗಳನ್ನು ಬಂದ್ ಮಾಡುವುದು, ದೆಹಲಿ-ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (NCR) ಗಣಿಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸುವುದು ಸೇರಿದಂತೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ.