Toronto (Canada) News:
ವೇಗವಾಗಿ ಬೀಸುತ್ತಿದ್ದ ಗಾಳಿಯ ಜೊತೆಗೆ ರನ್ವೇಯಲ್ಲಿ ಹಿಮವೂ ಇದ್ದ ಕಾರಣ ವಿಮಾನ ತಲೆಕೆಳಗಾಗಿ ಉರುಳಿ ಬಿದ್ದಿದೆ. ತಕ್ಷಣವೇ ನಿಲ್ದಾಣದ ತುರ್ತು ಸೇವಾ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡು ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಮಾನ ನಿಲ್ದಾಣದ ಅಧಿಕಾರಿಗಳು,
“DELTA AIRLINES PLANE FLIPS ಗೆ ಸೇರಿದ 4819 ಸಂಖ್ಯೆಯ ವಿಮಾನದಲ್ಲಿ 76 ಮಂದಿ ಪ್ರಯಾಣಿಕರು ಮತ್ತು 4 ಮಂದಿ ಸಿಬ್ಬಂದಿ ಇದ್ದರು. ನಿಲ್ದಾಣದಲ್ಲಿ ವಿಮಾನ ಮಧ್ಯಾಹ್ನ 2.15ಕ್ಕೆ ಲ್ಯಾಂಡಿಂಗ್ ಆಗುತ್ತಿದ್ದಂತೆ ಈ ಅಪಘಾತ ಸಂಭವಿಸಿದೆ. ಮಗು ಸೇರಿದಂತೆ 18 ಮಂದಿಯ ಸ್ಥಿತಿ ಗಂಭೀರವಾಗಿದೆ. ಆದರೆ, ಅವರಿಗೆ ಯಾವುದೇ ಜೀವ ಭಯವಿಲ್ಲ” ಎಂದು ತಿಳಿಸಿದೆ.
DELTA AIRLINES PLANE FLIPS 80 ಜನರಿದ್ದ ಡೆಲ್ಟಾ ಏರ್ಲೈನ್ಸ್ ವಿಮಾನ ಟೊರೊಂಟೊದ ಪಿಯರ್ಸನ್ ವಿಮಾನ ನಿಲ್ದಾಣದಲ್ಲಿ ಲ್ಯಾಡಿಂಗ್ ವೇಳೆ ರನ್ವೇಯಲ್ಲಿ ಪಲ್ಟಿಯಾಗಿ, ತಲೆಕೆಳಗಾಗಿ ಬಿದ್ದ ಘಟನೆ ಸೋಮವಾರ ನಡೆದಿದೆ. ಈ ಘಟನೆಯಲ್ಲಿ 18 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೆನಡಾ ನಿರ್ಮಿತ ಎಂಬ್ರೇರ್ ಸಿಆರ್ಜೆ-900 ಜೆಟ್ ಅನ್ನು DELTA AIRLINES PLANE FLIPS ಅಂಗಸಂಸ್ಥೆ ಎಂಡೀವರ್ ಏರ್ ನಿರ್ವಹಿಸುತ್ತಿದೆ.
ಈ ಅನಾಹುತದ ಕುರಿತು ಕೆನಡಾದ ಸಾರಿಗೆ ಭದ್ರತಾ ಮಂಡಳಿ ತನಿಖೆ ನಡೆಸಲಿದೆ. ದೊಡ್ಡ ಪ್ರಮಾಣದಲ್ಲಿ ಪ್ರಯಾಣಿಕರು ಇರುವಾಗ ಜೆಟ್ ಜಾರಿರುವುದು ಸಾಮಾನ್ಯ ಅಪಘಾತವಲ್ಲ ಎಂದು ತಿಳಿಸಿದ್ದು, ತನಿಖೆಗೆ ಅಮೆರಿಕ ಫೆಡರಲ್ ವೈಮಾನಿಕ ಆಡಳಿತ ಮತ್ತು ರಾಷ್ಟ್ರೀಯ ಸಾರಿಗೆ ಭದ್ರತಾ ಮಂಡಳಿ ನೆರವು ನೀಡಲಿದೆ ಎಂದು ಫ್ಲೋರಿಡಾದ ಸೇಂಟ್ ಪಿಟರ್ಬರ್ಗ್ನಲ್ಲಿರುವ ವೈಮಾನಿಕ ಸುರಕ್ಷಾ ಸಮಾಲೋಚನ ಘಟಕದ ಸಿಇಒ ಜಾನ್ ಕಾಗ್ಸ್ ತಿಳಿಸಿದ್ದಾರೆ.
ಅಮೆರಿಕದ ಮಿನ್ನೆಪೊಲಿಸ್ನಿಂದ ಆಗಮಿಸಿದ ಈ ವಿಮಾನ ಲ್ಯಾಂಡಿಂಗ್ ಆಗುತ್ತಿದ್ದಂತೆ ಏರ್ಪೋರ್ಟ್ನಲ್ಲಿ ಬಲವಾಗಿ ಗಾಳಿ ಬೀಸುತ್ತಿತ್ತು. ಜೊತೆಗೆ, ಹಿಮವೂ ಇದ್ದ ಹಿನ್ನೆಲೆಯಲ್ಲಿ ರನ್ವೇಯಲ್ಲಿ ಜಾರಿದೆ.DELTA AIRLINES PLANE FLIPS ಸಿಒಒ ಎಡ್ ಬ್ಯಾಸ್ಟಿನ್ ಅವರು ಅಪಘಾತಕ್ಕೆ ವಿಷಾದ ವ್ಯಕ್ತಪಡಿಸಿ, ಘಟನೆಯ ವಿವರಗಳನ್ನು ದೃಢಪಡಿಸುವ ಕೆಲಸ ನಿರ್ವಹಿಸುತ್ತಿದ್ದೇವೆ.
ಶೀಘ್ರದಲ್ಲೇ ಸಂಸ್ಥೆಯ ಜಾಲತಾಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ತಕ್ಷಣವೇ ತುರ್ತು ಸೇವಾ ಸಿಬ್ಬಂದಿ ರಕ್ಷಣೆಗೆ ಧಾವಿಸಿದ್ದಾರೆ. ಅಗ್ನಿ ಅನಾಹುತ ಸಂಭವಿಸದಂತೆ ಸುತ್ತಮುತ್ತಲ ಪ್ರದೇಶಕ್ಕೆ ಸೂಕ್ತ ವ್ಯವಸ್ಥೆ ಮಾಡಿದ್ದರು ಎಂದು ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
DELTA AIRLINES PLANE FLIPS ಲ್ಯಾಂಡಿಂಗ್ ವೇಳೆ ಗಂಟೆಗೆ 61 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿತ್ತು. ಇಂತಹ ಗಾಳಿಯನ್ನು ನಿರ್ವಹಿಸುವಂತೆ ವಿಮಾನವನ್ನು ವಿನ್ಯಾಸ ಮಾಡಲಾಗಿದೆ. ಪೈಲಟ್ ಕೂಡ ಸಾಕಷ್ಟು ತರಬೇತಿ ಹೊಂದಿದವರು. ಹೀಗಿದ್ದೂ ಅಪಘಾತ ಪ್ರಶ್ನೆ ಮೂಡಿಸಿದೆ ಎಂದಿದ್ದಾರೆ.
ಇದನ್ನು ಓದಿರಿ : UNITED NATIONS : ‘ಪಾಕಿಸ್ತಾನ ಭಯೋತ್ಪಾದನೆಯ ಜಾಗತಿಕ ಕೇಂದ್ರಬಿಂದು’