ಬೆಂಗಳೂರು: ನವೆಂಬರ್ ತಿಂಗಳ ಆರಂಬದಲ್ಲಿ ಇಳಿಕೆಯ ಹಾದಿಯಲ್ಲಿದ್ದ ಹಳದಿ ಲೋಹದ ಬೆಲೆ ಈಗ ಮತ್ತೆ ಏರಿಕೆಯಾಗುತ್ತಿದ್ದು, ಖರೀದಿಯ ಉತ್ಸಾಹದಲ್ಲಿದ್ದ ಗ್ರಾಹಕರಿಗೆ ಬೇಸರ ತರಿಸಿದೆ.
ದೀಪಾವಳಿ, ನವರಾತ್ರಿ ಮುಗಿಯುತ್ತಿದ್ದಂತೆ ಚಿನ್ನದ ದರದಲ್ಲೂ ಇಳಿಕೆ ಕಾಣುತ್ತಿತ್ತು, ಆದರೆ ಕಳೆದ 3 ದಿನದಿಂದ ಮತ್ತೆ ಏರಿಕೆ ಆಗುತ್ತಿದ್ದು, ಬುಧವಾರವೂ ಏರಿಕೆ ಆಗಿದೆ.
ಚಿನ್ನದ ದರದಲ್ಲಿ ಮತ್ತೆ ಭಾರೀ ಏರಿಕೆ ಆಗಿದೆ. ಸೋಮವಾರದಿಂದಲೂ ಚಿನ್ನದ ದರ ಏರುಗತಿಯಲ್ಲಿದ್ದು, ಬುಧವಾರವೂ ಭಾರೀ ಏರಿಕೆ ಕಂಡಿದೆ.
ದೇಶೀಯ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಬೆಲೆಯಲ್ಲಿ ಮಂಗಳವಾರದಿಂದ ಬುಧವಾರಕ್ಕೆ ಬರೋಬ್ಬರಿ 50 ರುಪಾಯಿ ಏರಿಕೆ ಆಗಿದೆ.
ನವೆಂಬರ್ 20 ಇಂದು 22 ಕ್ಯಾರೆಟ್ ಚಿನ್ನದ ದರ ಗ್ರಾಂ ಗೆ 7,115 ರೂಪಾಯಿ ಇದೆ. 10 ಗ್ರಾಂ ಗೆ 71,150 ರೂ ಇದೆ. ಇನ್ನು 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ನಲ್ಲಿ 55 ರೂಪಾಯಿ ಏರಿಕೆ ಆಗಿದ್ದು, ಗ್ರಾಂ ಗೆ 7,762 ರೂ ಇದ್ದು, 10 ಗ್ರಾಂ ಗೆ 77,620 ರೂಪಾಯಿ ಆಗಿದೆ.
ಬೆಂಗಳೂರಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ ನ 1 ಗ್ರಾಂ ಚಿನ್ನದ ಬೆಲೆ 7115 ರೂ ಇದ್ದು, 24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆ 7762 ರೂ ಇದೆ.
ಇನ್ನು ಬೆಂಗಳೂರಲ್ಲಿ ಬೆಳ್ಳಿಯ ಬೆಲೆಯ್ಲಲಿ 50 ಪೈಸೆಯಷ್ಟು ಏರಿಕೆ ಆಗಿದ್ದು, 92 ರೂಪಾಯಿ ತಲುಪಿದೆ. ಕೆಜಿಗೆ 500 ರೂ ಹೆಚ್ಚಳವಾಗಿದ್ದು, 92 ಸಾವಿರ ರೂ ಇದೆ.
ದೇಶದಲ್ಲಿ ಹಬ್ಬದ ಸೀಸನ್, ಜಾಗತಿಕ ಮಟ್ಟದ ಆರ್ಥಿಕತೆ, ಹಣದುಬ್ಬರದ ಅನಿಶ್ಚಿತತೆ,ಅಮೆರಿಕ ಬಡ್ಡಿ ದರ ಇಳಿಕೆ, ಡಾಲರ್ ಎದುರು ರುಪಾಯಿ ಕುಸಿತ ಮತ್ತು ಬ್ಯಾಂಕಿಂಗ್ ಬಿಕ್ಕಟ್ಟು ಎಲ್ಲವೂ ಪ್ರಭಾವ ಬೀರುತ್ತದೆ.
ಅಲ್ಲದೆ ಅಂತರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಹಾಗೂ ಡಾಲರ್ ಎದುರು ಮೌಲ್ಯ ಆಧರಿಸಿ, ಆಯಾ ದಿನದ ಬಂಗಾರ ಹಾಗೂ ಬೆಳ್ಳಿಯ ಬೆಲೆಯು ನಿರ್ಧಾರ ಆಗುತ್ತದೆ. ಇಲ್ಲಿರುವ ಚಿನ್ನ-ಬೆಳ್ಳಿಯ ಬೆಲೆ ಜಿಎಸ್‌ಟಿ ಸೇರ್ಪಡೆ ಆಗಿಲ್ಲ.