spot_img
spot_img

ಮುಂಬೈನಲ್ಲಿ 37,000 ಕ್ಕೂ ಹೆಚ್ಚು ಮೂರ್ತಿಗಳ ವಿಸರ್ಜನೆ; ಗಣೇಶನಿಗೆ ಅದ್ದೂರಿ ವಿದಾಯ.

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಮುಂಬೈ: ವಾಣಿಜ್ಯ ನಗರಿ ಮುಂಬೈ ಜನತೆ ಈ ಬಾರಿ ತಮ್ಮ ನೆಚ್ಚಿನ ಗಣೇಶನಿಗೆ ಅದ್ದೂರಿ ವಿದಾಯ ಹೇಳಿದ್ದು, ಬುಧವಾರ ಬೆಳಿಗ್ಗೆ ನಗರಾದ್ಯಂತ 37,000 ಕ್ಕೂ ಹೆಚ್ಚು ಗಣೇಶ ಮತ್ತು ಗೌರಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಬೆಳಗಾವಿ ಜಿಲ್ಲೆ ಅಥಣಿ ತಾಲೂಕು, ಪಾರ್ಥನಳ್ಳಿ ಗ್ರಾಮದಲ್ಲಿ ಪಂಚಾಯಿತಿಯಲ್ಲಿ ವಿಶ್ವಕರ್ಮ ಜಯಂತಿಯ ಮಹತ್ವ, ಇತಿಹಾಸ ಬಗ್ಗೆ ತಿಳಿಸಲಾಯಿತು.

ಗಣೇಶ ಹಬ್ಬದ ಕೊನೆಯ ದಿನವಾದ ಮಂಗಳವಾರ ಬೆಳಗ್ಗೆ ಆರಂಭವಾದ ವಿಸರ್ಜನೆ ಮೆರವಣಿಗೆಗಳು ರಾತ್ರಿಯಿಡೀ ಸುಗಮವಾಗಿ ನಡೆದಿದ್ದು, ನಗರದ ಕಡಲತೀರಗಳು, ಕೆರೆಗಳು ಮತ್ತು ಕೃತಕ ಕೊಳಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಿತು.

ಪ್ರತಿ ವರ್ಷದಂತೆ ಲಕ್ಷಾಂತರ ಭಕ್ತರನ್ನು ಸೆಳೆಯುತ್ತಿದ್ದ ಲಾಲ್‌ಬಾಗ್ ಚಾ ರಾಜ ಗಣೇಶನ ಮೂರ್ತಿಯನ್ನು ದಕ್ಷಿಣ ಮುಂಬೈನ ಗಿರ್‌ಗಾಂವ್ ಬೀಚ್‌ನಲ್ಲಿ ಬೆಳಿಗ್ಗೆ 10.30 ರ ಸುಮಾರಿಗೆ ಅರಬ್ಬಿ ಸಮುದ್ರದಲ್ಲಿ ಮುಳುಗಿಸಲಾಯಿತು. ದೇವರ ದರ್ಶನಕ್ಕಾಗಿ ಸಾವಿರಾರು ಜನರು ಹರಸಾಹಸ ಪಟ್ಟರು.

ಚಿಂಚ್ಪೋಕ್ಲಿಚಾ ಚಿಂತಾಮಣಿ, ಲಾಲ್ ಬಾಗ್ ನ ಮತ್ತೊಂದು ಪ್ರಸಿದ್ಧ ಗಣೇಶ ಮಂಡಲ ಮತ್ತು ಇತರ ಕೆಲವು ಮೂರ್ತಿಗಳನ್ನು ಸಹ ಸಮುದ್ರ ತೀರದಲ್ಲಿ ವಿಸರ್ಜಿಸಲಾಯಿತು. ಗಿರ್ಗಾಂವ್, ದಾದರ್, ಜುಹು, ಮಾರ್ವೆ ಮತ್ತು ಅಕ್ಸಾ ಕಡಲತೀರಗಳು, ಕೃತಕ ಕೊಳಗಳು ಮತ್ತಿತರ ಕಡೆಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ನಡೆಯಿತು.

ಇದನ್ನೂ ಓದಿ ;ಜಮ್ಮು-ಕಾಶ್ಮೀರ ಚುನಾವಣೆ: ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವು ಇತರ ಸರ್ಕಾರಗಳಿಗಿಂತ ಉತ್ತಮವಾಗಿದೆ.

ಬುಧವಾರ ಬೆಳಗ್ಗೆ 6 ಗಂಟೆ ವೇಳೆಗೆ ಮುಂಬೈನ ವಿವಿಧ ಕಡೆಗಳಲ್ಲಿ ಒಟ್ಟು 37,064 ಗಣೇಶ ಮತ್ತು ಗೌರಿಯ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು. ಇವುಗಳಲ್ಲಿ 5,762 ‘ಸಾರ್ವಜನಿಕ’ (ಸಮುದಾಯ ಗುಂಪುಗಳು) ಮೂರ್ತಿಗಳು ಸೇರಿವೆ. ಒಟ್ಟು 11,713 ಮೂರ್ತಿಗಳನ್ನು ಕೃತಕವಾಗಿ ನಿರ್ಮಾಣ ಮಾಡಲಾದ ಕೊಳಗಳಲ್ಲಿ ಮುಳುಗಿಸಲಾಗಿದೆ. ನಗರದಾದ್ಯಂತ ಕೊಳಗಳನ್ನು ಸ್ಥಾಪಿಸಲಾಗಿದೆ ಎಂದು ನಾಗರಿಕ ಅಧಿಕಾರಿಯೊಬ್ಬರು ತಿಳಿಸಿದರು.

 

ಇದನ್ನೂ ಓದಿ ;BSNL: ಪ್ರತಿದಿನ 2GB ಡೇಟಾ.. ದಿನಕ್ಕೆ 7 ರೂಪಾಯಿಯಂತೆ 75 ದಿನಗಳ ವ್ಯಾಲಿಡಿಟಿ

ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಸಾವಿರಾರು ಸಿಬ್ಬಂದಿ, ಜೀವರಕ್ಷಕರು ಮತ್ತು ತುರ್ತು ಸೇವೆಗಳನ್ನು ನಿಯೋಜಿಸುವ ಮೂಲಕ ಸುಗಮ ವಿಸರ್ಜನೆಗೆ ವ್ಯವಸ್ಥೆ ಮಾಡಿದೆ. ಸೆಪ್ಟೆಂಬರ್ 7 ರಂದು ಪ್ರಾರಂಭವಾದ ಗಣೇಶೋತ್ಸವ ಸೆಪ್ಟೆಂಬರ್ 17 ರಂದು ಮುಕ್ತಾಯವಾಯಿತು.

WhatsApp Group Join Now
Telegram Group Join Now
Instagram Account Follow Now
spot_img

Related articles

ಕಾರ್ಪೊರೇಟ್ ಯುಗದಲ್ಲಿ Ratan Tata ವ್ಯಾಪಾರ ಸಾಮ್ರಾಜ್ಯ ಕಟ್ಟಿದ್ದು ಹೇಗೆ ?

Ratan Tata Death ವಿಶ್ವದ ಅತ್ಯಂತ ಪ್ರಭಾವಿ ಕೈಗಾರಿಕೋದ್ಯಮಗಳಲ್ಲಿ ಒಬ್ಬರಾದ ರತನ್ ಟಾಟಾ. ೧೦೦ ಕ್ಕೂ ಹೆಚ್ಚು ದೇಶಗಳಲ್ಲಿ ೩೦ ಕ್ಕೂ ಹೆಚ್ಚು ಕಂಪನಿಗಳನ್ನು ಹೊಂದಿದ್ದು...

ಎರಡನೇ ಟೆಸ್ಟ್‌ಗೆ ತಂಡ ಹೇಗೆ ಇರಲಿದೆ ಎಂಬ ಪ್ರಶ್ನೆ ಉದ್ಭವಿಸಿದೆ ? ಸ್ಟಾರ್​ ಆಟಗಾರನಿಗೆ ಕೊಕ್​​̤!

ಬಾಂಗ್ಲಾದೇಶ ತಂಡ ಟೆಸ್ಟ್ ಮತ್ತು ಟಿ20 ಸರಣಿಗಾಗಿ ಭಾರತದ ಪ್ರವಾಸ ಕೈಗೊಂಡಿದೆ. ಈಗಾಗಲೇ ಟೀಮ್​ ಇಂಡಿಯಾ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ...

ತಿರುಪತಿ ವಿಚಾರ : ಡಿಸಿಎಂ ಪವನ್ ಕಲ್ಯಾಣ್‌ಗೆ ಕ್ಷಮೆ ಕೇಳಿದ ನಟ ಯಾರು ?

ತಿರುಪತಿ-ತಿರುಮಲ ಲಡ್ಡು ಪ್ರಸಾದದಲ್ಲಿ ಕಲಬೆರಕೆ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಲಡ್ಡು ವಿಚಾರವಾಗಿ ಸಾಕಷ್ಟು ರೀಲ್ಸ್ ಗಳು ಮತ್ತು ಮೀಮ್ಸ್ ಗಳು ಹರಿದಾಡುತ್ತಿವೆ....

ನಿಮ್ಮ ಮನೆಯಲ್ಲಿರುವ ತುಪ್ಪ ಶುದ್ಧವಾಗಿದೆಯಾ ಕಲಬೆರಕೆವಾಗಿದೆಯಾ ? ಇಲ್ಲಿವೆ ಸರಳವಾದ ಉಪಾಯಗಳು.!

ತಿರುಪತಿ ಬಾಲಾಜಿಯ ಪ್ರಸಾದದಲ್ಲಿ ಕಲಬೆರಕೆ ಆಗಿದೆ ಎಂಬ ವಿಷಯ ತಿಳಿದಾಗಿನಿಂದ ತುಪ್ಪದ ವಿಚಾರದಲ್ಲಿ ಅನೇಕ ಸಂಶಯಗಳು ಮೂಡುತ್ತಿವೆ. ನಂದಿನಿ ತುಪ್ಪದ ಬಿಟ್ರೆ ಬೇರೆ ಯಾವ...