Mysore News:
ಕೆ ಎನ್ ರಾಜಣ್ಣ ಅವರ ದಿಢೀರ್ ದೆಹಲಿ ಪ್ರವಾಸ, ಉದಯಗಿರಿ ಗಲಾಟೆಗೆ ಪೊಲೀಸರ ಕರ್ತವ್ಯಲೋಪ ಕಾರಣ ಎಂಬ ಅವರ ಹೇಳಿಕೆಗೆ ಮೈಸೂರಿನಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ, ರಾಜಣ್ಣ ದೊಡ್ಡವರು, ನಾನು ಅವರ ಬಗ್ಗೆ ಮಾತನಾಡಲ್ಲ.
DK SHIVAKUMAR REACTION ಕಾಂಗ್ರೆಸ್ ಪಕ್ಷದಲ್ಲಿ ನಾನೊಬ್ಬ ಸಣ್ಣ ಕಾರ್ಯಕರ್ತ ಅಷ್ಟೇ. ಉದಯಗಿರಿ ಪೊಲೀಸ್ ಠಾಣೆಯ ಮೇಲೆ ದಾಳಿ ವಿಚಾರದಲ್ಲಿ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಈ ಬಗ್ಗೆ ನೋಡಿಕೊಳ್ಳುತ್ತಾರೆ . ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.ಕೆ ಎನ್ ರಾಜಣ್ಣ ಅವರ ದಿಢೀರ್ ದೆಹಲಿ ಪ್ರವಾಸ, ಉದಯಗಿರಿ ಗಲಾಟೆಗೆ ಪೊಲೀಸರ ಕರ್ತವ್ಯಲೋಪ ಕಾರಣ ಎಂಬ ಅವರ ಹೇಳಿಕೆಗೆ ಮೈಸೂರಿನಲ್ಲಿಂದು ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
DK SHIVAKUMAR REACTION ಸಚಿವ ಕೆ ಎನ್ ರಾಜಣ್ಣ ದೊಡ್ಡವರು. ಅವರ ಬಗ್ಗೆ ನಾನು ಮಾತನಾಡಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿ ಓರ್ವ ಸಣ್ಣ ಕಾರ್ಯಕರ್ತ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು.
Prayagraj is as great as a holy bath:
DK SHIVAKUMAR REACTION ಈ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದು ಪ್ರಯಾಗ್ರಾಜ್ನಲ್ಲಿ ಮಾಡಿದ್ದಷ್ಟೇ ಸಂತಸವಾಗಿದೆ. ನಮ್ಮ ತ್ರಿವೇಣಿ ಸಂಗಮವಾದ ಕಾವೇರಿ, ಕಪಿಲ, ಸ್ಫಟಿಕ ಬಹಳ ಪವಿತ್ರವಾದ ಸ್ಥಳ. ತಲಕಾಡಿನ ಗಂಗರು ಸೇರಿದಂತೆ ನಮ್ಮ ಅನೇಕ ಪೂರ್ವಜರು ಇದೇ ಸ್ಥಳದಿಂದ ಆಳಿದಂತಹ ದಾಖಲೆಗಳಿವೆ.
ಈಗ ಅನೇಕ ಮಠಾಧೀಶರು ಕರ್ನಾಟಕದಲ್ಲಿ ಕುಂಭಮೇಳದ ಪರಂಪರೆಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಇದು ಕೂಡಾ ಯಾವುದಕ್ಕೂ ಕಡಿಮೆ ಇಲ್ಲ. ನಿನ್ನೆ ರಾತ್ರಿ ನಾನು ಕೂಡ ಮೇಳದಲ್ಲಿ ಸ್ನಾನ ಮಾಡಿದೆ. ನೀರು ಬಹಳ ಪವಿತ್ರವಾಗಿದೆ. ನಾವು ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು.
DK SHIVAKUMAR REACTION ನಮ್ಮ ನಾಡಿನಲ್ಲಿ ಇಂಥ ಜಾಗ ಇರುವುದು ನಮ್ಮೆಲ್ಲರ ಭಾಗ್ಯ. ಮೈಸೂರು ಜಿಲ್ಲಾಡಳಿತವು ಗಂಗಾರತಿ ಮಾದರಿಯಲ್ಲೇ, ಕಾವೇರಿ ಆರತಿ ಮಾಡಿದ್ದಾರೆ. ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಡಿ ಕೆ ಶಿವಕುಮಾರ್ ಪ್ರಶಂಸೆ ವ್ಯಕ್ತಪಡಿಸಿದರು.
Inclusion in Kaveri Aarti Budget:
ಮುಂದಿನ ದಿನಗಳಲ್ಲಿ ಸರ್ಕಾರವು ಈ ಕುಂಭಮೇಳಕ್ಕೆ ಮಾಸ್ಟರ್ ಪ್ಲಾನ್ ಮಾಡುತ್ತದೆ. ಕಾವೇರಿ ಆರತಿ ಬಗ್ಗೆ ವರದಿ ತರಿಸಿಕೊಂಡಿದ್ದೇನೆ. ಈ ಬಾರಿಯ ಬಜೆಟ್ನಲ್ಲಿ ಅದನ್ನು ಅಧಿಕೃತವಾಗಿ ಸೇರಿಸಲು ಪ್ರಯತ್ನ ಮಾಡುತ್ತೇನೆ. ಮಾರ್ಚ್ 22 ರಂದು ವಿಶ್ವ ಜಲ ದಿನವಿದೆ. ಅದಕ್ಕೂ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ.
ಕರ್ನಾಟಕದ ಜನರು ಪ್ರಯಾಗ್ರಾಜ್ ಹೋಗುವ ಅವಶ್ಯಕತೆ ಇಲ್ಲ. ಗಂಗಾ, ಯಮುನಾ , ಸರಸ್ವತಿ, ನದಿಗಳಿಗೆ ಎಷ್ಟು ಪಾವಿತ್ರ್ಯತೆ ಇದೆಯೋ ಅಷ್ಟೇ ಪಾವಿತ್ರ್ಯತೆ ಕಾವೇರಿ ನದಿಗೂ ಇದೆ. ಹೀಗಾಗಿ ಇಲ್ಲಿಯೂ ಕೂಡ ವ್ಯವಸ್ಥೆ ಚೆನ್ನಾಗಿದೆ. ಪ್ರಯತ್ನಕ್ಕಿಂತ ಪ್ರಾರ್ಥನೆ ದೊಡ್ಡದು.
ಮುಖ್ಯಮಂತ್ರಿಗಳು ಕೂಡ ಬರಬೇಕಿತ್ತು. ಮಂಡಿ ನೋವು ಇದ್ದುದರಿಂದ ಬರಲು ಸಾಧ್ಯವಾಗಲಿಲ್ಲ. ನೀನು ಹೋಗಿ ಬಾ ಅಂತ ನನ್ನನ್ನು ಕಳಿಸಿಕೊಟ್ಟಿದ್ದಾರೆ. ಹೀಗಾಗಿ ಬಂದೆ. ನಮ್ಮ ಸರ್ಕಾರದ ವತಿಯಿಂದ ಪ್ರೋತ್ಸಾಹ ನೀಡಲು ನಾನು ಇಲ್ಲಿಗೆ ಬಂದು ಪುಣ್ಯ ಸ್ನಾನ ಮಾಡಿದ್ದೇನೆ. ಎಲ್ಲರೂ ನಮ್ಮ ರಾಜ್ಯದ ತ್ರಿವೇಣಿ ಸಂಗಮದಲ್ಲೇ ಪವಿತ್ರ ಸ್ನಾನ ಮಾಡಿ ಎಂದು ಮನವಿ ಮಾಡಿದರು.
Metro fare hike:
ಬಿಜೆಪಿಯವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ. ಮೆಟ್ರೋ ವಿಚಾರದಲ್ಲಿ ಅದಕ್ಕೇ ಆದಂತಹ ಸಮಿತಿ ಇದೆ. ದರ ಏರಿಕೆ ಮತ್ತು ಇಳಿಕೆ ಕುರಿತು ಅವರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇನ್ನು ಡಬಲ್ ಡೆಕ್ಕರ್ ನಿರ್ಮಿಸಲು ಪಾಲಿಕೆ ವತಿಯಿಂದ ಶೇ.50 ರಷ್ಟು ಹಣ ನಮ್ಮ ಸರ್ಕಾರ ನೀಡುತ್ತದೆ ಎಂದು ಇದೇ ವೇಳೆ ವಿವಿರಣೆ ನೀಡಿದರು.
Stone throwing:
ಉದಯಗಿರಿ ಪೊಲೀಸ್ ಠಾಣೆಯ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಯಾರೇ ತಪ್ಪು ಮಾಡಿದರೂ ಕಠಿಣ ಕ್ರಮ ಆಗತ್ತೆ. ಪೊಲೀಸರು ಸಮಯ ಪ್ರಜ್ಞೆ ಮೆರೆದಿದ್ದಾರೆ. ಬೇಗನೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ನಾನು ಕೂಡ ವಿಡಿಯೋ ನೋಡಿದ್ದೇನೆ. ಘಟನೆ ಬಗ್ಗೆ ಮಾಹಿತಿ ಕೂಡ ಪಡೆದಿದ್ದೇನೆ. ಎಲ್ಲರೂ ಕೂಡ ಸಣ್ಣ ಹುಡುಗುರು ಅಂತ ಹೇಳಿದ್ದಾರೆ. ಆದರೆ, ಪೊಲೀಸರ ಮೇಲೆ ನಡೆದ ಹಲ್ಲೆ ಸಹಿಸಲ್ಲ. ಕ್ರಮಕ್ಕೆ ಈಗಾಗಲೇ ಸೂಚನೆ ನೀಡಿದ್ದೇವೆ ಹೇಳಿದರು.
Water rate hike:
ಕಳೆದ 14 ವರ್ಷದಿಂದ ನೀರಿನ ದರವು ಕೂಡ ಏರಿಕೆ ಆಗಿಲ್ಲ. ಏರಿಕೆ ಮಾಡಲು ನಿಗಮವು ಪ್ರಸ್ತಾವನೆ ಕೂಡ ಸಲ್ಲಿಸಿದೆ. ಅದರ ಕುರಿತು ಸದ್ಯದಲ್ಲೇ ತೀರ್ಮಾನ ಮಾಡುತ್ತೇವೆ ಎಂದರು.
ಇದನ್ನು ಓದಿರಿ : How died 53-year-old man in Mumbai ?