spot_img
spot_img

ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ.. ತುರ್ತು ಸುದ್ದಿಗೋಷ್ಟಿ ನಡೆಸಿದ ಡಿ.ಕೆ ಶಿವಕುಮಾರ್‌ ಸವಾಲು; ಏನಂದ್ರು?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಬೆಂಗಳೂರು: ಮೈಸೂರಿನ ಮುಡಾದಲ್ಲಿ ಅಕ್ರಮವಾಗಿ ಸೈಟು ಪಡೆದ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ಅವರು ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಅವರ ಇಡೀ ಸಚಿವ ಸಂಪುಟ ಸದಸ್ಯರು ಬೆಂಬಲ ಘೋಷಿಸಿದ್ದಾರೆ.

ಸಿಎಂ ಪರವಾಗಿ ತುರ್ತು ಸುದ್ದಿಗೋಷ್ಟಿ ನಡೆಸಿದ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಪ್ರಿಯಾಂಕ್‌ ಖರ್ಗೆ, ಕೆ.ಜೆ ಜಾರ್ಜ್, ಡಾ.ಜಿ. ಪರಮೇಶ್ವರ್, ಹೆಚ್.ಕೆ ಪಾಟೀಲ್, ಚೆಲುವರಾಯಸ್ವಾಮಿ, ಭೋಸರಾಜು, ಭೈರತಿ ಬಸವರಾಜ್, ಮಹಾದೇವಪ್ಪ ಅವರು ಮುಖ್ಯಮಂತ್ರಿ ಅವರ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾರೆ.

ತುರ್ತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಇಂದು ಬೆಳಗ್ಗೆ ರಾಜ್ಯಪಾಲರು ಸಂವಿಧಾನದ ವಿರೋಧಿ, ಪ್ರಜಾಪ್ರಭುತ್ವಕ್ಕೆ ಮಾರಕವಾಗುವ ಪತ್ರವನ್ನು ಕಳುಹಿಸಿ ಕೊಟ್ಟಿದ್ದಾರೆ. ಕಳೆದ ಜೂನ್ 27ರಂದೇ ರಾಜ್ಯಪಾಲರು ನೊಟೀಸ್ ಕೊಟ್ಟಿದ್ದರು. ಅದಕ್ಕೆ ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ‌ ಯಾವ ಲೋಪದೋಷಗಳು ಆಗಿಲ್ಲ ಎಂದು ಸವಿವರವಾದ ಉತ್ತರವನ್ನು ಕೊಡಲಾಗಿತ್ತು ಎಂದು ಹೇಳಿದ್ದಾರೆ.

ರಾಜ್ಯಪಾಲರ ಹುದ್ದೆಗೆ ತನ್ನದೇ ಗೌರವವಿದೆ. ಗವರ್ನರ್ ನೇರವಾಗಿ ಪತ್ರ ಕಳಿಸಿಕೊಟ್ಟಿದ್ದಾರೆ. ಪ್ರಾಸಿಕ್ಯೂಷನ್‌ಗೆ ಕೊಡಬೇಕಾದರೆ ಎನ್‌ಕ್ವೈರಿ ಆಗಬೇಕು. ಲೋಕಾಯುಕ್ತ ಬೇರೆ ತನಿಖೆ ಯಾಗಬೇಕು. ಒಂದೇ ದಿನ ಅರ್ಜಿ ಬರುತ್ತೆ ನೊಟೀಸ್ ಕೊಡ್ತಾರೆ. ಇದನ್ನ ನಾವು ಪ್ರಶ್ನಿಸಿ ಅವರಿಗೆ ಮನವಿ ಮಾಡಿದ್ದೆವು. ಅದನ್ನ ರಾಜ್ಯಪಾಲರು ತಿರಸ್ಕರಿಸಿದ್ದರು. ಸೆಕ್ರಟರಿ ಕಡೆಯಿಂದ ಇವತ್ತು ಆದೇಶ ಮಾಡಿದ್ದಾರೆ ಎಂದು ಡಿಕೆಶಿ ಪ್ರಶ್ನೆ ಮಾಡಿದ್ದಾರೆ.

ಸಿದ್ದರಾಮಯ್ಯಗೆ ಎಲ್ಲರ ಬೆಂಬಲ!
ಮಾತು ಮುಂದುವರಿಸಿದ ಡಿ.ಕೆ ಶಿವಕುಮಾರ್ ಅವರು ಇದು ಎಲ್ಲಾ ಶಾಸಕರ ವಿರುದ್ಧ, ರಾಜ್ಯದ ಜನರ ವಿರುದ್ಧವಾಗಿ ಕೊಟ್ಟಿರುವ ಆದೇಶ. ರಾಜ್ಯಪಾಲರ ಕಚೇರಿಯನ್ನು ಉಪಯೋಗಿಸಿ ರಾಜಕಾರಣ ಮಾಡ್ತಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಪ್ರಹ್ಲಾದ್ ಜೋಷಿ, ಹೆಚ್‌.ಡಿ ಕುಮಾರಸ್ವಾಮಿ ತೆಗೆಯುತ್ತೇವೆ ಅಂದ್ರು. ಅದಕ್ಕೆ ಪೂರಕವಾಗಿ ಈ ಷಡ್ಯಂತ್ರ ನಡೆಯುತ್ತಿದೆ.

ನಾವೆಲ್ಲರೂ ಸಿಎಂ ಸಿದ್ದರಾಮಯ್ಯ ಪರ ನಿಲ್ಲುತ್ತೇವೆ. ಕಾಂಗ್ರೆಸ್ ಪಕ್ಷ ಕೂಡ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲಲಿದೆ. ಕಾನೂನಿನ ಚೌಕಟ್ಟಿನಲ್ಲಿ, ರಾಜಕೀಯವಾಗಿ ಹೋರಾಟ ಮಾಡುತ್ತೇವೆ. ಅದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಗವರ್ನರ್ ಕಚೇರಿಯನ್ನು ಬಿಜೆಪಿ ಕಚೇರಿಯನ್ನಾಗಿ ಮಾಡಿಕೊಳ್ಳಲಾಗಿದೆ. ಇದರ ವಿರುದ್ಧ ನಾವು ಹೋರಾಡಬೇಕಿದೆ. ಹಿಂದುಳಿದ ನಾಯಕನನ್ನು ಸಹಿಸಲಾಗುತ್ತಿಲ್ಲ ಎಂದು ಬಿಜೆಪಿ ವಿರುದ್ಧ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ರಾಜ್ಯದ ಬಡವರಿಗಾಗಿ 56 ಸಾವಿರ ಕೋಟಿ ರೂಪಾಯಿ ಹಂಚುತ್ತಿದ್ದೇವೆ. ಅದರ ವಿರುದ್ಧ ಇಂತಹ ಷಡ್ಯಂತ್ರ ನಡೆದಿದೆ. ಇದು ನಿಮ್ಮಿಂದ ಸಾಧ್ಯವಿಲ್ಲ. ರಾಜೀನಾಮೆಯ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ. ಮುಖ್ಯಮಂತ್ರಿಗಳ‌ ಬೆನ್ನಿಗೆ ನಾವು ನಿಲ್ಲುತ್ತೇವೆ. ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಈ ನಿರ್ಧಾರ ತೆಗೆದುಕೊಂಡಿಲ್ಲ. ನಮ್ಮ ಇಡೀ ಸಚಿವರು, ಸರ್ಕಾರ ಇದನ್ನು ಎದುರಿಸಲು ಸಮರ್ಥವಿದೆ ಎಂದು ಡಿ.ಕೆ ಶಿವಕುಮಾರ್ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img

Related articles

VIVO V50 LAUNCHED IN INDIA:ಪ್ರೀಮಿಯಂ ಸ್ಲಿಮ್ ಡಿಸೈನ್ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ವಿವೋ, ಮಿಡಲ್ ರೇಂಜ್ನಲ್ಲಿ ಇದೇ ಟಾಪ್

Vivo V50 Launched in India News : ವಿವೋ ಇಂದು ತನ್ನ ಹೊಸ ಸ್ಮಾರ್ಟ್‌ಫೋನ್ VIVO V50 ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ....

TESLA BEGINS HIRING IN INDIA:ಮಸ್ಕ್ ಸಂಸ್ಥೆಯಲ್ಲಿ ಕೆಲಸ ಮಾಡಲು ಅದ್ಭುತ ಅವಕಾಶ

New Delhi News: ಇದರೊಂದಿಗೆ ಅಮೆರಿಕದ ದೈತ್ಯ ಎಲೆಕ್ಟ್ರಿಕಲ್​ ಕಾರು ಕಂಪನಿಯಲ್ಲಿ ಕೆಲಸ ಮಾಡಬೇಕೆಂಬ ಕನಸು ಹೊಂದಿರುವವರಿಗೆ ಟೆಸ್ಲಾ ಸುವರ್ಣಾವಕಾಶ ನೀಡಿದೆ. ಮುಂಬೈನಲ್ಲಿ ಹಲವು ಹುದ್ದೆಗಳ...

MAHAKUMBH : ಆ ಅಘೋರಿ ಭವಿಷ್ಯವೇ ನಿಜವಾಯ್ತಾ?

MAHAKUMBH : ಉತ್ತರ ಪ್ರದೇಶದ ದೇವ ಪ್ರಯಾಗದಲ್ಲಿ MAHAKUMBH ನಡೆಯುತ್ತಿದೆ. ಕಳೆದ 30 ದಿನಗಳ ಅಂತರದಲ್ಲಿ 7 ಅಗ್ನಿ ದುರಂತ ಎದುರಾಗಿವೆ. ಈ ಹಿಂದೆ ಹೀಗೆ...

DARSHAN : ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿ ದರ್ಶನ್ ಭಾವುಕ

Darshan News: ಫೆಬ್ರವರಿ 16 ರಂದು ಚಾಲೆಂಜಿಂಗ್ ಸ್ಟಾರ್ DARSHAN ಹುಟ್ಟುಹಬ್ಬವನ್ನು ಆಚರಿಸಿಕೊಂಡರು. 48ನೇ ವರ್ಷಕ್ಕೆ ಕಾಲಿಟ್ಟ ದಾಸನಿಗೆ ಸ್ಯಾಂಡಲ್​ವುಡ್​ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು...