Mysore News:
ಸ್ಯಾಂಡಲ್ವುಡ್ನ ಸ್ಟಾರ್ DOLLY DHANANJAYA ಹಾಗೂ ಧನ್ಯತಾ ಮದುವೆ ಸಮಾರಂಭ ಇಂದು ಮತ್ತು ನಾಳೆ ಅದ್ಧೂರಿಯಾಗಿ ನಡೆಯಲಿದೆ. ನ್ಯೂಸ್ಫಸ್ಟ್ ಜೊತೆ ಮಾತನಾಡಿದ ತಾಯಿ ಸಾವಿತ್ರಮ್ಮ ಅವರು, ಮೊದಲು ಧನ್ಯತಾ ನೋಡಿಯೇ ಖುಷಿ ಆಗಿತ್ತು. ಇಷ್ಟನೂ ಆಗಿತ್ತು ನಮಗೆ.
ಮಗನ ಡಾಕ್ಟ್ರು ಮಾಡಬೇಕು ಎಂದು ಆಸೆ ಇತ್ತು. ಆದರೆ ಡಾಕ್ಟ್ರು ಸೊಸೆ ಸಿಕ್ಕಿದ್ದಾರೆ. ಒಳ್ಳೆಯ ಸೊಸೆನೇ ಸಿಕ್ಕಿದ್ದಾರೆ. ಇನ್ನೂ ಮನೆಗೆ ಬಂದಿಲ್ಲ. DOLLY DHANANJAYA ಮದುವೆ ಆದ ಮೇಲೆ ಮನೆಗೆ ಬರುತ್ತಾರೆ. ಒಂದು ಸಾರಿ ಸುಮ್ಮನೆ ಮನೆಗೆ ಬಂದಿದ್ದರೂ ಅವಾಗಿಂದ ಪರಿಚಯ ಇದೆ. ನಾವು ಒಮ್ಮೆ ಅವರ ಮನೆಗೆ ಹೋಗಿ ಬಂದ ಮೇಲೆ, ಧನ್ಯತಾ ಮನೆಯವರು ನಮ್ಮ ಮನೆಗೆ ಬಂದು ಹೋಗಿದ್ದಾರೆ ಎಂದು ಹೇಳಿದ್ದಾರೆ.
ಮೈಸೂರಿನ ವಸ್ತು ಪ್ರದರ್ಶನ ಆವರಣದಲ್ಲಿ ಮದುವೆಯ ಕಾರ್ಯಗಳು ನಡೆಯುತ್ತಿದ್ದು ಮಗನ ಮದುವೆಯ ಬ್ಯುಸಿ ನಡುವೆಯೇ ಧನಂಜಯ ಅವರ ತಾಯಿ ಸಾವಿತ್ರಮ್ಮ ನಗು ನಗುತ್ತ ಫುಲ್ ಸಂತಸದಿಂದ ಮಾತಾಡಿದ್ದಾರೆ. DOLLY DHANANJAYA ಮದುವೆ ಆಗುತ್ತಿರುವುದೇ ಖುಷಿ ಆಗಿದೆ.
ಅರಸಿಕೆರೆಯಲ್ಲಿ ಮದುವೆ ಆಗಬೇಕಿತ್ತು. ಆದರೆ ಮೈಸೂರಲ್ಲೇ ಮದುವೆ ಆಗಬೇಕು ಎಂದು ಹೇಳಿದ್ದರಿಂದ ಇಲ್ಲೇ ಆಗುತ್ತಿದೆ. ಸ್ನೇಹಿತರಿಗಾಗಲಿ, ಜನರಿಗಾಗಲಿ ಮಗ ತೊಂದರೆ ಮಾಡೋದಿಲ್ಲ. ಅಷ್ಟೂ ಒಳ್ಳೆ ಬುದ್ಧಿ ಧನಂಜಯದು. ಮಗ ಬೆಳೆದಿದ್ದಾನೆ. ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದ್ದಾರೆ. ಮದುವೆ ಆಗಿಲ್ಲ.. ಮದುವೆ ಆಗಿಲ್ಲ ಅಂತಿದ್ವಿ. ಆದರೆ ಈಗ ಮದುವೆ ಆಗುತ್ತಿರುವುದು ತುಂಬಾ ಖುಷಿ ಇದೆ.
ಮನೆಯವರು ಹೇಳಿದಂತೆ ಆಗುತ್ತಿದ್ದಾನೆ. DOLLY DHANANJAYA ಮದುವೆ ಆಗಲ್ಲ ಅಂತ ಹೇಳಿ ಈಗ ಕರ್ನಾಟಕಕ್ಕೆ ಇನ್ವಿಟೇಶನ್ ಕಾರ್ಡ್ ಕೊಟ್ಟು ಮದುವೆ ಮಾಡಿಕೊಳ್ಳುತ್ತಿದ್ದಾನೆ. ಮಗ ಮದುವೆ ಆಗದಿರುವುದೇ ನಮಗೆ ಟೆನ್ಷನ್ ಇತ್ತು. ಕಳೆದ 5 ವರ್ಷದಿಂದ ಮದುವೆ ಮಾಡ್ಕೋ.. ಮದುವೆ ಮಾಡ್ಕೋ ಎಂದು ಹೇಳುತ್ತಿದ್ದೇವು ಎಂದು ಹೇಳಿದ್ದಾರೆ.
ಇದನ್ನು ಓದಿರಿ : Jaishankar Meets Ukrainian Counterpart On Sidelines Of Munich Security Conference