Washington DC (USA) News:
ಅಮೆರಿಕವನ್ನು ಡಬ್ಲ್ಯೂಎಚ್ಒದಿಂದ ಹೊರತಂದಿದ್ದ TRUMP ಇದೀಗ, ವಿಶ್ವವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದಲೂ ಹಿಂತೆಗೆದುಕೊಂಡಿದ್ದಾರೆ.ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ಹೊರಕ್ಕೆ, ಪ್ಯಾಲೆಸ್ಟೈನ್ ನಿರಾಶ್ರಿತರ ಪರಿಹಾರ ಕಾರ್ಯಗಳಿಗೆ ನೀಡುತ್ತಿರುವ ಹಣ ಕಡಿತ ಮತ್ತು ಪರಮಾಣು ಒಪ್ಪಂದದಿಂದ ಹಿಂದೆ ಸರಿದಿರುವ ಇರಾನ್ ಮೇಲೆ ಆರ್ಥಿಕ ಒತ್ತಡ ಹೇರುವ ಕಾರ್ಯಕಾರಿ ಆದೇಶಕ್ಕೆ TRUMP ಅಸ್ತು ಎಂದಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
‘ಅಮೆರಿಕ ಮೊದಲು’ ಎಂಬ ತಮ್ಮ ಘೋಷಣೆಯ ಭಾಗವಾಗಿ ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯೂಎಚ್ಒ) ಹೊರಬಂದಿದ್ದ ಅಧ್ಯಕ್ಷ ಡೊನಾಲ್ಡ್ TRUMP ಮತ್ತೊಂದು ಮಹತ್ವದ ನಿರ್ಧಾರಕ್ಕೆ ಸಹಿ ಹಾಕಿದ್ದಾರೆ.ಈ ಬಗ್ಗೆ ಹೇಳಿಕೆ ನೀಡಿರುವ TRUMP, “ಇರಾನ್ ಮೇಲೆ ಒತ್ತಡ ಹೇರುವ ಬಗ್ಗೆ ಕಠಿಣ ನಿರ್ಧಾರ ಕೈಗೊಂಡಿದ್ದೇವೆ. ಇದು ಕಷ್ಟವಾದರೂ ಮತ್ತು ಇಷ್ಟವಿಲ್ಲದಿದ್ದರೂ ಆದೇಶ ಹೊರಡಿಸಿದ್ದೇನೆ. ಆದಾಗ್ಯೂ ಕಾಲ ನಿರ್ಣಯದಂತೆ ಕ್ರಮ ವಹಿಸಬೇಕಾಗಿದೆ” ಎಂದಿದ್ದಾರೆ.
US strike on Iran: ಈ ಬಗ್ಗೆ ಖಜಾನೆ ಇಲಾಖೆಗೆ ನಿರ್ದೇಶನ ನೀಡಲಾಗಿದೆ.ಮುಸ್ಲಿಂ ರಾಷ್ಟ್ರದ ಮೇಲೆ ಕ್ರಮಕ್ಕೆ ಅಮೆರಿಕದ ಹಲವು ಸೆನೆಟರ್ಗಳು ಕೂಡ ಒತ್ತಾಯಿಸಿದ್ದಾರೆ. ಪರಮಾಣು ಬೆದರಿಕೆ ಹಾಕುತ್ತಿರುವ ಇರಾನ್ ಮೇಲೆ ನಿಯಂತ್ರಣ ಅಗತ್ಯವಿದೆ ಎಂದು ಸೆನೆಟರ್‌ಗಳಾದ ಲಿಂಡ್ಸೆ ಗ್ರಹಾಂ, ಆರ್-ಎಸ್ಸಿ, ಜಾನ್ ಫೆಟರ್‌ಮ್ಯಾನ್, ಡಿ-ಪೆನ್ ಮತ್ತಿತರರು ನಿರ್ಣಯ ಮಂಡಿಸಿದ್ದಾರೆ.
ಇರಾನ್ನ ತೈಲ ರಫ್ತಿನ ಮೇಲೆ ಹೆಚ್ಚಿನ ಸುಂಕ ಸೇರಿದಂತೆ ಗರಿಷ್ಠ ಪ್ರಮಾಣದಲ್ಲಿ ಆರ್ಥಿಕ ನಿರ್ಬಂಧಗಳನ್ನು ವಿಧಿಸಲು TRUMP ಸರ್ಕಾರ ನಿರ್ಧರಿಸಿದೆ.
Fund cuts to Palestine:ಇದರ ಜೊತೆಗೆ, ಇಸ್ರೇಲ್ ದಾಳಿಯಿಂದಾಗಿ ಕಂಗೆಟ್ಟಿರುವ ಪ್ಯಾಲೆಸ್ಟೈನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯ ಸಂಸ್ಥೆ (ಯುಎನ್‌ಆರ್‌ಡಬ್ಲ್ಯೂಎ) ಗೆ ನೀಡುವ ಹಣವನ್ನೂ ಕಡಿತಗೊಳಿಸುವ ಆದೇಶಕ್ಕೂ ಸಹಿ ಹಾಕಿದ್ದಾರೆ.
ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಡಬ್ಲ್ಯೂಎಚ್ಒದಿಂದ ಹಿಂದೆ ಸರಿಯುವ ಆದೇಶ ಹೊರಡಿಸಿದ್ದ TRUMP, ಇದೀಗ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದಲೂ ಅಮೆರಿಕವನ್ನು ಹೊರತರುವ ಫರ್ಮಾನು ಹೊರಡಿಸಿದ್ದಾರೆ.
ಇದನ್ನು ಓದಿರಿ :PREGNANCY AGE TIPS:ವಯಸ್ಸು 36, ಈಗ ಎರಡನೇ ಮಗುವಿಗೆ ಪ್ರಯತ್ನಿಸಬಹುದೇ?