New York News:
ಭಾರತದಲ್ಲಿ ‘ಬೇರೆ’ಯವರ ಸರ್ಕಾರವನ್ನು ರಚಿಸಲು ಹಿಂದಿನ ಅಧ್ಯಕ್ಷ ಜೋ ಬೈಡನ್ ಸರ್ಕಾರ ಪ್ರಯತ್ನಿಸಿತ್ತು ಎಂದು ಅಧ್ಯಕ್ಷ ಡೊನಾಲ್ಡ್ TRUMPಹೇಳಿದ್ದಾರೆ. ಅಂದರೆ, ಈಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬದಲಿಸುವ ಉದ್ದೇಶವಿತ್ತು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಕೆಡವಲು ವಿದೇಶಿ ಶಕ್ತಿಗಳ ಜೊತೆ ಕೈ ಜೋಡಿಸಿದ್ದಾರೆ ಎಂಬ ಬಿಜೆಪಿ ಆರೋಪಗಳ ಮಧ್ಯೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ TRUMP ನೀಡಿರುವ ಹೇಳಿಕೆಯೊಂದು ಭಾರೀ ಸಂಚಲನ ಉಂಟು ಮಾಡಿದೆ.ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿನ ಅಮೆರಿಕ ಏಜೆನ್ಸಿಯು (ಯುಎಸ್ಎಐಡಿ) ಭಾರತಕ್ಕೆ ಮತದಾನಕ್ಕಾಗಿ ನೀಡುವ 21 ಮಿಲಿಯನ್ ಡಾಲರ್ ನೆರವನ್ನು ರದ್ದು ಮಾಡಿದ್ದರ ಕುರಿತು ಮಾತನಾಡುವಾಗ TRUMP ಈ ಹೇಳಿಕೆ ನೀಡಿದರು.
Congress-BJP speech:ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಷ್ಟ್ರದ ಹಿತಾಸಕ್ತಿಗಳನ್ನು ಹಾಳು ಮಾಡುವ ಬಯಸುತ್ತಿರುವ ವಿದೇಶಿ ಶಕ್ತಿಗಳಿಗೆ ನೆರವು ನೀಡುತ್ತಿದ್ದಾರೆ ಎಂಬುದು ಇದೀಗ ತಿಳಿದು ಬಂದಿದೆ ಎಂದಿದ್ದಾರೆ.
TRUMP ನೀಡಿರುವ ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಭಾರೀ ಕೋಲಾಹಲ ಎಬ್ಬಿಸಿದೆ. ರಾಹುಲ್ ಗಾಂಧಿ ಅವರು ವಿದೇಶಿ ಶಕ್ತಿಗಳ ನೆರವು ಪಡೆಯುತ್ತಿದ್ದಾರೆ ಎಂಬುದನ್ನು TRUMP ಹೇಳಿಕೆ ದೃಢಪಡಿಸಿದೆ ಎಂದು ಬಿಜೆಪಿ ದೂರಿದೆ. ಆದರೆ, ಇದನ್ನು ಕಾಂಗ್ರೆಸ್ ನಿರಾಕರಿಸಿದೆ.2024 ಲೋಕಸಭೆ ಚುನಾವಣೆ ವೇಳೆಯೂ ಪ್ರಧಾನಿ ನರೇಂದ್ರ ಮೋದಿ ಅವರು, ತಾವು ಮತ್ತೆ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ವಿದೇಶಿ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದಿದ್ದರು. ಅಮೆರಿಕದ ಅಧ್ಯಕ್ಷರು ಅದೇ ಹೇಳಿಕೆಯನ್ನು ನೀಡಿದ್ದಾರೆ. ಇದು ಪ್ರಧಾನಿ ಹೇಳಿಕೆಯನ್ನು ದೃಢೀಕರಿಸಿದೆ ಎಂದು ಹೇಳಿದ್ದಾರೆ.
Trump’s statement is nonsense- Congress:ದೇಶದಲ್ಲಿನ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಆ ಏಜೆನ್ಸಿಯು ಹಲವು ದಶಕಗಳಿಂದ ನೆರವು ನೀಡುತ್ತಿದೆ. ಈ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.ಇನ್ನು ಈ ಆರೋಪವನ್ನು ಕಾಂಗ್ರೆಸ್ ನಿರಾಕರಿಸಿದೆ.
ಡೊನಾಲ್ಡ್ TRUMP ಹೇಳಿಕೆಯು ಅಸಂಬದ್ಧವಾಗಿದೆ. 1961ರಿಂದ ಸ್ಥಾಪಿಸಲಾದ ಯುಎಸ್ಎಐಡಿ ಇತ್ತೀಚಿನ ದಿನಗಳಲ್ಲಿ ಸುದ್ದಿಗೆ ಬಂದಿದೆ. ಆ ಏಜೆನ್ಸಿಗೆ ಸಂಬಂಧಿಸಿದಂತೆ ಅಮೆರಿಕದ ಅಧ್ಯಕ್ಷರು ಅವಿವೇಕದ ಹೇಳಿಕೆ ನೀಡಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಇದನ್ನು ಓದಿರಿ :Trump Says It Will Be ‘Very Unfair’ To US If Musk Built Tesla Factory In India