ಬೆಲೆ ಏರಿಕೆ, ಟ್ಯಾಕ್ಸ್ ಇವೆಲ್ಲವೂ ಹೆಚ್ಚು ಕಡಿಮೆ ಮಧ್ಯಮ ವರ್ಗದ ಜನರನ್ನು ಹೈರಾಣು ಮಾಡಿ ಹಾಕಿದೆ. ಇದರ ಪ್ರತಿಫಲನ ಎನ್ನುವಂತೆಯೇ ಎಕ್ಸ್ ಖಾತೆಯಲ್ಲಿ ವ್ಯಕ್ತಿಯೊಬ್ಬ ಮಾಡಿದ ಪೋಸ್ಟ್ ಈಗ ದೊಡ್ಡ ವೈರಲ್ ಆಗಿದೆ. ಅನೇಕರ ನೆಟ್ಟಿಗರು ಈ ಒಂದು ಪೋಸ್ಟ್ನ್ನು ತುಂಬಾ ಗಂಭೀರವಾಗಿಯೇ ಪರಿಗಣಿಸಿದ್ದಾರೆ.
ನಮ್ಮ ಮನೆಯ ಪಕ್ಕದಲ್ಲಿ ಇರುವ ದೋಸೆ ವ್ಯಾಪಾರಿ ದಿನಕ್ಕೆ ಕನಿಷ್ಠ ಅಂದ್ರು 20 ಸಾವಿರ ರೂಪಾಯಿ ವ್ಯಾಪಾರ ಮಾಡುತ್ತಾನೆ, ಅಂದ್ರೆ ತಿಂಗಳಿಗೆ ಆರು ಲಕ್ಷ ರೂಪಾಯಿ ಎಲ್ಲ ಖರ್ಚು ತೆಗೆದರೂ ಅವನು ತಿಂಗಳಿಗೆ ಉಳಿಸುವುದು 3 ರಿಂದ 3.5 ಲಕ್ಷ ರೂಪಾಯಿ ಆದರೆ ಒಂದೇ ಒಂದು ರೂಪಾಯಿ ಟ್ಯಾಕ್ಸ್ ಕಟ್ಟುವುದಿಲ್ಲ. ನಾವು ತಿಂಗಳಿಗೆ 60 ಸಾವಿರ ರೂಪಾಯಿ ಗಳಿಸಿ ವರ್ಷಕ್ಕೆ 10 ಪರ್ಸೆಂಟ್ ಆದಾಯ ತೆರಿಗೆ ಕಟ್ಟಬೇಕು ಎಂದು ಬರೆದುಕೊಂಡಿದ್ದಾರೆ.
ನೆಟ್ಟಿಗರ ಗಮನವನ್ನು ಸೆಳೆದಿದೆ.
ಇದು ಸಂಬಳ ಹಾಗೂ ಸ್ವಂತ ಉದ್ಯಮ ಮಾಡುತ್ತಿರುವವರ ಆದಾಯ ಹಾಗೂ ಕಟ್ಟುತ್ತಿರುವ ಆದಾಯ ತೆರಿಗೆ ಬಗ್ಗೆ ಚರ್ಚೆಗಳು ಶುರುವಾಗಿವೆ. ಇದೇ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ರೆಬೆಲ್ ಎಂಬ ಎಕ್ಸ್ ಖಾತೆಯ ವ್ಯಕ್ತಿ ಬೇರೆ ಬೇರೆ ವೃತ್ತಿಗಳ ಬಗ್ಗೆಯೂ ಪ್ರಶ್ನಿಸಿದ್ದಾರೆ ಎಂದು ನವೀನ್ ಕೊಪ್ಪರಮ ಈ ಒಂದು ಪೋಸ್ಟ್ ಹಾಕಿದ್ದಾರೆ.
ಇದನ್ನು ತಿಳಿದುಕೊಳ್ಳುವ ಮುನ್ನ, ನಾವು ಮತ್ತೊಂದು ಕಡೆಯೂ ಗಮನಹರಿಸಬೇಕಿದೆ. ವೈದ್ಯರು, ವಕೀಲರು, ಟೀ ಶಾಪ್ನವರು, ಗ್ಯಾರೇಜ್ನವರು ವಾಣಿಜ್ಯ ಪ್ರದೇಶಗಳಲ್ಲಿನ ವ್ಯಾಪಾರಿಗಳು ಇವರ ಬಗ್ಗೆ ಏನು? ಅವರೆಲ್ಲರೂ ವಿದೇಶ ಪ್ರವಾಸಕ್ಕೆ ಹೋಗುತ್ತಾರೆ. ತಮ್ಮ ಮನೆಗಳನ್ನು ನವೀಕರಿಸುತ್ತಾರೆ ಮತ್ತು ಹೊಸ ಹೊಸ ವಾಹನಗಳನ್ನು ಪ್ರತಿ ವರ್ಷ ಖರೀದಿಸುತ್ತಾರೆ, ಆದ್ರೆ ಒಂದೇ ಒಂದು ರೂಪಾಯಿ ಟ್ಯಾಕ್ಸ್ ಕಟ್ಟುವುದಿಲ್ಲ. ಹೇಗೆ ಮತ್ತು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ಕಲಿ ಎಂಬ ಎಕ್ಸ್ ಖಾತೆಯನ್ನು ಹೊಂದಿರುವ ವ್ಯಕ್ತಿ ನವೀನ್ ಕೊಪ್ಪರಮ್ ಅವರ ಅಭಿಪ್ರಾಯವನ್ನು ವಿರೋಧಿಸಿದ್ದಾರೆ. ಅವರಿಗೆ ಕಾರ್ಪೋರೇಟ್ ಕಂಪನಿಯವರ ಹಾಗೆ ಇನ್ಸೂರೆನ್ಸ್ ಇರುವುದಿಲ್ಲ. ಪಿಎಫ್ನಂತಹ ಸೌಲಭ್ಯಗಳಿರುವುದಿಲ್ಲ. ನಿಯಮಿತವಾದ ಆದಾಯವೂ ಇರುವುದಿಲ್ಲ .
ಅವರು 60 ಸಾವಿರ ರೂಪಾಯಿ ಗಳಿಸುವ ಸಾಫ್ಟವೇರ್ ಇಂಜನೀಯರ್ ಕಟ್ಟುವ ಆದಾಯ ತೆರಿಗೆಗಿಂತ ಹೆಚ್ಚು ಜಿಎಸ್ಟಿಯನ್ನು ಕಟ್ಟಿರುತ್ತಾರೆ. ದೇಶ ಏನಾದರೂ ಈಗ ನಡೆಯುತ್ತಿದೆ ಅಂದ್ರೆ ಅದು ಇಂತವರಿಂದಲೇ ಎಂದು ಹೇಳಿದ್ದಾರೆ.
ಒಟ್ಟಾರೆ ನವೀನ್ ಕೊಪ್ಪಾರಮ್ ಮಾಡಿದ ಒಂದು ಪೋಸ್ಟ್ ಈಗ ಪರ ವಿರೋಧದ ಚರ್ಚೆಯನ್ನು ಹುಟ್ಟು ಹಾಕಿವೆ. ಆದರೂ ಕೂಡ ಈ ಒಂದು ವಿಚಾರ ನೆಟ್ಟಿಗರ ಗಮನ ಸೆಳೆದಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.