DRDO – SHORT RANGE ANTI SHIP MISSILE
New Delhi NEWS:
ಭಾರತದ ಕಡಲ ಶಕ್ತಿ ಸಾಮರ್ಥ್ಯಗಳಿಗೆ ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಭಾರತೀಯ ನೌಕಾಪಡೆಯು ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್) ನಿಂದ ಮೊದಲ ರೀತಿಯ ನೌಕಾ ವಿರೋಧಿ ಕ್ಷಿಪಣಿ (ಎನ್‌ಎಎಸ್‌ಎಂ-ಎಸ್‌ಆರ್) ಯಶಸ್ವಿ ಹಾರಾಟ ನಡೆಸಿದೆ.
ಈ ಕ್ಷಿಪಣಿಯನ್ನು ಬೇರಿಂಗ್-ಲಾಕ್-ಆನ್ ನಂತರದ ಉಡಾವಣಾ ಮೋಡ್‌ನಲ್ಲಿ ನಭಕ್ಕೆ ಹಾರಿಸಲಾಯಿತು. ಕ್ಷಿಪಣಿಯು ಆರಂಭದಲ್ಲಿ ನಿರ್ದಿಷ್ಟ ಹುಡುಕಾಟ ವಲಯದೊಳಗೆ, ನಿಯೋಜಿತವಾಗಿದ್ದ ದೊಡ್ಡ ಗುರಿಯನ್ನು ಲಾಕ್ ಮಾಡುವಲ್ಲಿ ಈ ಮಿಸೈಲ್ ಯಶಸ್ವಿಯಾಗಿದೆ.
ಟರ್ಮಿನಲ್ ಹಂತದಲ್ಲಿ ಸಣ್ಣದಾದ ಗುಪ್ತ ಗುರಿಯನ್ನು ಪೈಲಟ್ ಆಯ್ಕೆ ಮಾಡಿಕೊಂಡು, ನಿಖರತೆಯೊಂದಿಗೆ ಹೊಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಹಡಗು ವಿರೋಧಿ ಕ್ಷಿಪಣಿ ಪ್ರಯೋಗಗಳನ್ನು ಮಂಗಳವಾರ ಯಶಸ್ವಿಯಾಗಿ ನಡೆಸಲಾಗಿದೆ. ನೌಕಾಪಡೆಯ ಸೀಕಿಂಗ್ ಹೆಲಿಕಾಪ್ಟರ್‌ನಿಂದ ಮಿಸೈಲ್ ಉಡಾವಣೆಗೊಂಡಾಗ ಹಡಗಿನ ಮೇಲೆ ಗುರಿಯಿಟ್ಟ ಕ್ಷಿಪಣಿಗಳನ್ನು ಗುರಿ ಇಟ್ಟು ಉಡಾಯಿಸುವ ಪರೀಕ್ಷೆಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸಲಾಯಿತು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಪ್ರಯೋಗಗಳು ಕ್ಷಿಪಣಿಯ ಮ್ಯಾನ್-ಇನ್-ಲೂಪ್ ವೈಶಿಷ್ಟ್ಯವನ್ನು ಸಾಬೀತುಪಡಿಸಿವೆ. ಸಮುದ್ರ-ಸ್ಕಿಮ್ಮಿಂಗ್ ಮೋಡ್‌ನಲ್ಲಿ, ಗರಿಷ್ಠ ವ್ಯಾಪ್ತಿಯಲ್ಲಿ ಸಣ್ಣ ಹಡಗಿನ ಮೇಲೆ ಗುರಿ ಇಟ್ಟ ದಾಳಿಗಳನ್ನು ಭೇದಿಸುವಲ್ಲಿ ಆ್ಯಂಟಿ ಶಿಪ್ ಮಿಸೈಲ್ ಯಶಸ್ವಿಯಾಗಿದೆ.
ಟರ್ಮಿನಲ್ ಮಾರ್ಗದರ್ಶನಕ್ಕಾಗಿ ಕ್ಷಿಪಣಿಯು ಸ್ಥಳೀಯ ಇಮೇಜಿಂಗ್ ಇನ್ಫ್ರಾ-ರೆಡ್ ಸೀಕರ್ ಬಳಸಿಕೊಂಡಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಮಿಷನ್ ಹೆಚ್ಚಿನ ಬ್ಯಾಂಡ್‌ವಿಡ್ತ್ ಟು-ವೇ ಡೇಟಾಲಿಂಕ್ ಸಿಸ್ಟಮ್ ಅನ್ನು ಸಹ ಅದು ಪ್ರದರ್ಶಿಸಿದೆ ಎಂದು ಡಿಆರ್ಡಿಒ ಹೇಳಿದೆ.
Defense Minister Shahbaz said:
ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿದ್ದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, DRDO, ಭಾರತೀಯ ನೌಕಾಪಡೆ ಮತ್ತು ಉದ್ಯಮ ಪಾಲುದಾರರನ್ನು ಅಭಿನಂದಿಸಿದ್ದಾರೆ. ಮ್ಯಾನ್-ಇನ್-ಲೂಪ್ ವೈಶಿಷ್ಟ್ಯಗಳ ಪರೀಕ್ಷೆಗಳು ಅನನ್ಯವಾಗಿವೆ ಎಂದು ಅವರು ಬಣ್ಣಿಸಿದ್ದಾರೆ.
Successful Examination in collaboration with:
ಸಂಶೋಧನಾ ಕೇಂದ್ರ ಇಮಾರತ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ, ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೋರೇಟರಿ ಮತ್ತು ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೋರೇಟರಿ ಸೇರಿದಂತೆ ಡಿಆರ್‌ಡಿಒದ ವಿವಿಧ ಪ್ರಯೋಗಾಲಯಗಳಿಂದ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ. ಕ್ಷಿಪಣಿಗಳನ್ನು ಪ್ರಸ್ತುತ ಎಂಎಸ್‌ಎಂಇಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಇತರರ ಸಹಾಯದಿಂದ ಅಭಿವೃದ್ಧಿಪಡಿಸಲಾಗುತ್ತಿದೆ.
ಇದನ್ನೂ ಓದಿ: First ‘Made in India’ Semiconductor Chip Expected To Be Rolled Out By 2025: Vaishnaw