spot_img
spot_img

DRINKING WATER BEFORE MEALS : ಊಟ ಮಾಡುವುದಕ್ಕೂ ಮುನ್ನ ನೀರು ಕುಡಿದರೆ ತೂಕ ಇಳಿಕೆಯಾಗುತ್ತಾ?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Does Drinking Water Before Meals Help Lose Weight News:

ಊಟಕ್ಕೆ ಮೊದಲು ನೀರು ಕುಡಿಯುವುದರಿಂದ ತೂಕ ಇಳಿಕೆ ಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಸಂಶೋಧನೆಯೊಂದು ಬಹಿರಂಗಪಡಿಸಿದೆ. ತಂಪು ಪಾನೀಯಗಳ ಬದಲಾಗಿ WATER ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಎಂದು ಸಂಶೋಧಕರು ತಿಳಿಸಿದ್ದಾರೆ.ಆದ್ರೆ, ಕೆಲವರು ಊಟಕ್ಕೆ ಮುನ್ನ WATER ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ತುಂಬಾ ಸಹಾಯವಾಗುತ್ತದೆ ಎಂದು ಹೇಳುತ್ತಾರೆ.

ಈ ರೀತಿ ಮಾಡುವುದರಿಂದ ತೂಕ ಇಳಿಕೆ ಮಾಡಿಕೊಳ್ಳಬಹುದಾ? ಇದರಲ್ಲಿ ಸತ್ಯ ಇದೆಯಾ? ಈ ಬಗ್ಗೆ ಆರೋಗ್ಯ ತಜ್ಞರು ಏನು ತಿಳಿಸುತ್ತಾರೆ ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.ಬಹುತೇಕರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಮ್ಮ ತೂಕ ಇಳಿಸಿಕೊಳ್ಳಲು ವಿವಿಧ ವ್ಯಾಯಾಮಗಳನ್ನು ಮಾಡುತ್ತಾರೆ. ಜೊತೆಗೆ ತಮ್ಮ ದೈನಂದಿನ ಆಹಾರ ಕ್ರಮದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಇದರಲ್ಲಿ ಇನ್ನು ಕೆಲವರು ನೈಸರ್ಗಿಕವಾದ ಪರಿಹಾರಗಳ ಮೂಲಕ ಕೆಲವು ಟಿಪ್ಸ್​ ಪಾಲಿಸುತ್ತಾರೆ.

Feels full: ಇದರ ಪರಿಣಾಮವಾಗಿ ಕಡಿಮೆ ಆಹಾರವನ್ನು ಸೇವಿಸುವುದರಿಂದ ತೂಕ ಇಳಿಸಿಕೊಳ್ಳಲು ತುಂಬಾ ಸಹಾಯವಾಗುತ್ತದೆ. ಅನೇಕ ಸಂಶೋಧನೆಗಳಲ್ಲಿ ಈ ವಿಷಯವು ಬಹಿರಂಗವಾಗಿದೆ ಎಂದು ತಜ್ಞರು ವಿವರಿಸುತ್ತಾರೆ.ಊಟಕ್ಕೂ ಮುನ್ನ WATER ಕುಡಿಯುವುದರಿಂದ ಹೊಟ್ಟೆ ತುಂಬಿದ ಅನುಭವ ಆಗುತ್ತದೆ.

ನಮ್ಮ ಹೊಟ್ಟೆಯಲ್ಲಿ ಅನೇಕ ನರಗಳಿವೆ. ನೀವು ನೀರು ಕುಡಿಯುವಾಗ, ಈ ನರಗಳು ಮೆದುಳಿಗೆ ಊಟ ಮಾಡದಂತೆ ಸಂಕೇತಗಳನ್ನು ಕಳುಹಿಸುತ್ತವೆ. ಸುಮಾರು 12 ವಾರಗಳ ವೀಕ್ಷಣೆಯ ಬಳಿಕ WATER ಕುಡಿದವರು ತೂಕ ಇಳಿಸಿಕೊಂಡವರಿಗೆ ಹೋಲಿಕೆ ಮಾಡಿದರೆ, ನೀರು ಕುಡಿದವರು ತಮ್ಮ ದೇಹದ ತೂಕ ಕಳೆದುಕೊಂಡಿದ್ದಾರೆ ಎಂದು ಸಂಶೋಧಕರಿಗೆ ಸ್ಪಷ್ಟವಾಗಿ ತಿಳಿದಿದೆ.

ಊಟಕ್ಕೆ ಮೊದಲು WATER ಕುಡಿದವರು, ನೀರು ಕುಡಿಯದವರಿಗಿಂತ ಕಡಿಮೆ ಆಹಾರ ಸೇವಿಸುತ್ತಾರೆ. ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ತಂಡವು ನಡೆಸಿದ ಮತ್ತೊಂದು ಸಂಶೋಧನೆಯಲ್ಲಿ, ಊಟಕ್ಕೆ ಮೊದಲು WATER ಕುಡಿದವರು ಮತ್ತು ಕುಡಿಯದವರನ್ನು ಪರೀಕ್ಷೆ ನಡೆಸಲಾಯಿತು.

Drink water when hungry: ಆ ಸಂದರ್ಭದಲ್ಲಿ ಸ್ವಲ್ಪ ನೀರು ಕುಡಿಯುವುದರಿಂದ ಹೆಚ್ಚುವರಿ ಕ್ಯಾಲೊರಿಗಳನ್ನು ಸೇವಿಸುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಹೆಚ್ಚು ಆಹಾರ ಸೇವಿಸದೇ ಇದ್ದರೆ, ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

ನಮಗೆ ಅನೇಕ ಬಾರಿ ಹಸಿವಾಗುತ್ತದೆ. ಅಂತಹ ಸಮಯದಲ್ಲಿ ಏನನ್ನಾದರೂ ತಿನ್ನಲು ಪ್ರಯತ್ನ ಮಾಡುತ್ತೇವೆ. ಹಾಗೆ ಭಾವಿಸುವುದು ಯಾವಾಗಲೂ ಹಸಿವು ಆಗುತ್ತದೆ ಎಂದರ್ಥವಲ್ಲ. ಕೆಲವೊಮ್ಮೆ ಬಾಯಾರಿಕೆದಾಗ ಹಸಿವು ಆದಂತೆ ಅನಿಸಬಹುದು.

Drink water before exercise: ಅನೇಕ ಜನರು ವ್ಯಾಯಾಮದ ಸಮಯದಲ್ಲಿ ಸ್ನಾಯು ನೋವು, ಆಯಾಸ ಹಾಗೂ ಸ್ನಾಯು ಸೆಳೆತದಂತಹ ಸಮಸ್ಯೆಗಳಿಂದ ಬಳಲುತ್ತಾರೆ. ಏಕೆಂದರೆ, ದೇಹವು ನಿರ್ಜಲೀಕರಣಗೊಂಡಿರುತ್ತದೆ. ದೇಹವು ಹೈಡ್ರೀಕರಿಸಲ್ಪಟ್ಟಿದೆಯೇ ಎಂದು ಖಚಿತಪಡಿಸಿಕೊಳ್ಳಲು ವ್ಯಾಯಾಮದ ಮೊದಲು WATER ಕುಡಿಯುವುದು ತುಂಬಾ ಮುಖ್ಯವಾಗಿರುತ್ತದೆ.

Water is needed to dissolve fat: ತಜ್ಞರು ತಿಳಿಸುವ ಪ್ರಕಾರ, ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕರಗಿಸಲು ನೀರು ಕೂಡ ಅವಶ್ಯವಾಗಿದೆ. ನಿರ್ಜಲೀಕರಣದಿಂದಾಗಿ ಕೊಬ್ಬು ಕರಗಿಸುವ ಪ್ರಕ್ರಿಯೆಯು ನಿಲ್ಲುತ್ತದೆ. ಇದರಿಂದ ದೇಹದಲ್ಲಿನ ನೀರಿನ ಮಟ್ಟ ಕಡಿಮೆ ಮಾಡುತ್ತದೆ. ಹೆಚ್ಚು ನೀರನ್ನು ಸೇವಿಸುವುದರಿಂದ ಕೊಬ್ಬು ಕರಗಿಸಲು ಪೂರಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

Better to drink water instead of soft drinks: ಹಣ್ಣಿನ ರಸಗಳು, ಆಲ್ಕೋಹಾಲ್ ಮತ್ತು ಸೋಡಾದಂತಹ ಪಾನೀಯಗಳನ್ನು ಸೇವಿಸುವ ಬದಲು ಹೆಚ್ಚು ನೀರು ಕುಡಿಯುವುದರಿಂದ ದೀರ್ಘಕಾಲೀನ ತೂಕ ನಷ್ಟವಾಗುತ್ತದೆ ಎಂದು ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಸಂಶೋಧನಾ ತಂಡ ನಡೆಸಿದ ಸಂಶೋಧನೆಯಲ್ಲಿ ಕಂಡುಬಂದಿದೆ.

ನಾವು ಸಾಮಾನ್ಯವಾಗಿ ಸೇವಿಸುವಂತಹ ಹೆಚ್ಚಿನ ಕ್ಯಾಲೋರಿ ಹೊಂದಿರುವ ತಂಪು ಪಾನೀಯಗಳ ಬದಲು ನೀರು ಕುಡಿಯುವುದು ಒಳ್ಳೆಯದು. ನೀರು ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಸಾಮರ್ಥ್ಯ ಹೊಂದಿದೆ.

Note to readers: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನು ಓದಿರಿ : GOVT GIFT TO GIRL CHILD : ಇಂದು ಜನಿಸಿದ ಹೆಣ್ಣು ಶಿಶುವಿಗೆ ಸರಕಾರದಿಂದ ಸ್ಪೆಶಲ್ ಗಿಫ್ಟ್

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...

BSNL HOLI OFFERS – ಗ್ರಾಹಕರಿಗೆ ಹೋಳಿ ಬಿಗ್ ಗಿಫ್ಟ್ ಕೊಟ್ಟ ಬಿಎಸ್ಎನ್ಎಲ್: 30 ದಿನಗಳ ಉಚಿತ ವ್ಯಾಲಿಡಿಟಿ, ಡೇಟಾ !!

BSNL Holi Prepaid Plans Offers: ಬಿಎಸ್​ಎನ್​ಎಲ್​ ಬಳಕೆದಾರರಿಗೆ ಸಿಹಿ ಸುದ್ದಿ. ಹೋಳಿ ಹಬ್ಬದ ಸಂದರ್ಭದಲ್ಲಿ ಕಂಪನಿಯು ಬಂಪರ್ ಆಫರ್ ನೀಡುತ್ತಿದೆ. ಇದು ತನ್ನ ರೀಚಾರ್ಜ್...